ಸರ್ವ ಜನಾಂಗದ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ : ಡಾ.ಹೊಂಬಯ್ಯ

 ಸರ್ವ ಜನಾಂಗದ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ : ಡಾ.ಹೊಂಬಯ್ಯ



ಚಿಕ್ಕೋಡಿ: ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿಯಲ್ಲ ಅವರು ಒಂದು ಶಕ್ತಿ. ಕೇವಲ ಶೋಷಿತ ಸಮುದಾಯಕ್ಕೆ ಅಷ್ಟೇ ಕನಸು ಕಂಡವರಲ್ಲ. ಇಡೀ ಸರ್ವ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ಮಾನವತವಾದಿ ಶಿಕ್ಷಣ ತಜ್ಞ ಡಾ. ಬಿ ಆರ್ ಅಂಬೇಡ್ಕರ್ ಎಂದು ಬೇಡಕಿಹಾಳದ ಕೆ.ಎಂ.ಎ.ಸಿ.ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಹೊಂಬಯ್ಯ ಅಭಿಪ್ರಾಯ ಪಟ್ಟರು. 


ಮಂಗಳವಾರ ಚಿಕ್ಕೋಡಿ ತಾಲ್ಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶಯದಲ್ಲಿ ಏರ್ಪಡಿಸಿದ ಭಾರತ ರತ್ನ ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಆರ್ ಅಂಬೇಡ್ಕರ್ ಅವರ 135 ನೇ ಜನ್ಮದಿನಾಚರಣೆಯ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.


ಅಂಬೇಡ್ಕರ್ ಅವರಿಗೆ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಇತ್ತು. ಪ್ರತಿಯೊಬ್ಬರು ಶಿಕ್ಷಣವನ್ನು ಪಡೆದರೆ ಈ ಸಮಾಜದಲ್ಲಿ ಉನ್ನತವಾದ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಶಿಕ್ಷಣದ ಮಹತ್ವವನ್ನು ಅರಿತ ಅಂಬೇಡ್ಕರ್ ಅವರು ವಿಶ್ವದ ಜ್ಞಾನ ಸೂರ್ಯ ನಾಗಿ ಬಿರದನ್ನು ಪಡೆದುಕೊಂಡವರು. 64 ವಿಷಯಗಳಲ್ಲಿ ಒಂಬತ್ತು ಭಾಷೆಗಳಲ್ಲಿ ಪ್ರಭುತ್ವವನ್ನು ಸಾಧಿಸಿದ ಮಹಾನ್ ಚಿಂತಕ ಬಾಬಾ ಸಾಹೇಬ್ ಅಂಬೇಡ್ಕರ್ ಇಂದು ಬಣ್ಣಿಸಿದರು. 


ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತನಗಾಗಿ ಏನನ್ನು ಮಾಡಿಕೊಳ್ಳಲಿಲ್ಲ. ತನ್ನವರನ್ನು ಕಳೆದುಕೊಂಡರು. 6ನೇ ವಯಸ್ಸಿಗೆ ತಾಯಿಯನ್ನು 22 ನೇ ವಯಸ್ಸಿಗೆ ತಂದೆಯನ್ನು, ಹೆಂಡತಿ ರಾಮಬಾಯಿ ಹಾಗೂ ನಾಲ್ಕು ಜನ ಮಕ್ಕಳನ್ನು ಕಳೆದುಕೊಂಡ ಅಂಬೇಡ್ಕರ್ ಅವರು ಎಲ್ಲರಿಗೂ ಎಲ್ಲರ ಸಮಾನತೆಗಾಗಿ ಈ ಭಾರತ ದೇಶಕ್ಕೆ ಬೃಹತ್ ಸಂವಿಧಾನವನ್ನು ಕೊಟ್ಟರು.‌ ಇದರಿಂದ ಅಂಬೇಡ್ಕರ್ ಅವರು ಸಮಾನತೆಯ, ಸತ್ಯದ, ಸ್ವಾಭಿಮಾನದ ಸಂಕೇತವಾಗಿ ಇಡೀ ವಿಶ್ವದಾದ್ಯಂತ ಚಿರಪಚಿತರಾಗಿದ್ದಾರೆ ಎಂದು ತಿಳಿಸಿದರು. 


ಪ್ರಕೃತಿದತ್ತವಾದ ನೀರಿಗಾಗಿ ಮೊಟ್ಟಮೊದಲು ಈ ದೇಶದಲ್ಲಿ ಯಾರಾದರೂ ಸಾಮಾಜಿಕ ಚಳುವಳಿ ಮಾಡಿದ್ದರೆ ಅದು ಅಂಬೇಡ್ಕರ್ ಮಾತ್ರ. ದಲಿತರಿಗೆ ಮತ್ತು ಅಸ್ಪೃಶ್ಯರಿಗೆ ನಿಷೇಧವಾಗಿದ್ದ ಮಹಾರಾಷ್ಟ್ರದ ಚೌಡರ್ ಕೆರೆಯ ನಿಷೇಧವನ್ನು ಚಳುವಳಿ ಮೂಲಕ ಹೋರಾಟ ಮಾಡಿ ನೀರನ್ನು ಮುಟ್ಟಿದರು. ಸಾರ್ವಜನಿಕ ದೇವಾಲಯಗಳು ಸಮಾನತೆ ಸಂಕೇತವಾಗಬೇಕು ಹಾಗಾಗಿ ದಲಿತರಿಗೆ ಪ್ರವೇಶವಿಲ್ಲದ ಕಾಳರಾಮ ದೇವಾಲಯವನ್ನು ಪ್ರವೇಶಿಸಿದರು. ಜಾತಿಯ ತಾರತಮ್ಯಕ್ಕೆ ಒಳಗಾಗಿ ಹಿಂದೂ ಧರ್ಮವನ್ನು ಪೋಷಣೆ ಮಾಡುವ ಮಹಿಳೆಯರನ್ನು ಶೋಷಿಸುವ ಮನಸ್ಪಟ್ಟಿದ್ದ ಹಣವನ್ನು ಅಂಬೇಡ್ಕರ್ ಮಾಡುವುದರ ಮೂಲಕ ಕ್ರಾಂತಿಕಾರಿ ಅಂಬೇಡ್ಕರ್ ಆಗಿ ಸಮಾಜದಲ್ಲಿ ಗುರುತಿಸಿಕೊಂಡರು ಎಂದು ತಿಳಿಸಿದರು.


ಅಂಬೇಡ್ಕರ್ ಅವರು ಮಹಿಳೆಯರಿಗಾಗಿ, ಆಸ್ತಿಯಲ್ಲಿ ಸಮಾನಕ್ಕೂ ದತ್ತು ಪಡೆಯುವ ಕು ಚ್ಛೇದನಕ್ಕೂ ಎಂಬ ಹಿಂದೂ ಕೊಡ್ ಬಿಲ್ಲು ಮಸೂದೆಯನ್ನು ಮಂಡಿಸುತ್ತಾರೆ. ಇದು ಜಾರಿಯಾಗದ ಕಾರಣ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟ ಈ ದೇಶದ ಏಕೈಕ ಸಮಾನತವಾದಿ ಮಹಿಳಾ ಪರವಾಗಿ ಎಂದರೆ ಅದು ಡಾ. ಬಿ.ಆರ್ .ಅಂಬೇಡ್ಕರ್ ಎಂದು ತಿಳಿಸಿದರು 


ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ ಚಿಕ್ಕೋಡಿಯ ಜನಪ್ರಿಯ ಶಾಸಕರಾದ ಗಣೇಶ್ ಹುಕ್ಕೇರಿ ಅವರು ಮಾತನಾಡುತ್ತಾ ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಸಂವಿಧಾನವನ್ನು ನೀಡದಿದ್ದರೆ ಅಸಮಾನತೆ ಅಸಹಕಾರ ಮತ್ತು ಶಿಕ್ಷಣದಲ್ಲಿ ಕ್ರಾಂತಿ ಅಸ್ಪೃಶ್ಯರಲ್ಲಿ ಅರಿವಿನ ಪ್ರಜ್ಞೆ ಒಡಮೂಡುತ್ತಿರಲಿಲ್ಲ. ಭಾರತದ  ಸಂವಿಧಾನದಿಂದ ಎಲ್ಲರೂ ಸಮಾನತೆಗಾಗಿ ಹಾಗೂ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ ಎಂದು ತಿಳಿಸಿದರು. 


ಚಿಕ್ಕೋಡಿಯ ಉಪ ವಿಭಾಗಾಧಿಕಾರಿ ಸಂಪಗಾವಿ ಅವರು ಮಾತನಾಡುತ್ತಾ ಅಂಬೇಡ್ಕರ್ ಅವರು ಮಹಿಳೆಯರ ಕಾರ್ಮಿಕರ ಬಗ್ಗೆ ಸಮಾನವಾದ ವೇತನ ಮತ್ತು ಕಾರ್ಮಿಕ ನೀತಿಗಳನ್ನು ಜಾರಿಗೆ ತರಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಮೂವರು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ರವಿ. ತಹಸಿಲ್ದಾರ್ ರಾಜೇಶ್ ಆರ್ ಬುರ್ಲಿ, ಪುರಸಭೆ ಮುಖ್ಯ ಅಧಿಕಾರಿ ಜಗದೀಶ್ ಈಟಿ, ಚಿಕ್ಕೋಡಿ ಉಪವಿಭಾಗ ಡಿವೈಎಸ್ಪಿ ಗೋಪಾಲಕೃಷ್ಣೇಗೌಡರ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾದ ಸೀತಾರಾಮ್, ಉಪತಸಿಲ್ದಾರ್ ಖಾಂಡೇಕರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಜನಗೌಡ,ಸಮಾಜ ಸೇವಕರಾದ ಅರವಿಂದ್ ಕಟ್ಟಿ, ಅನಿಲ್ ಕಾಂಬಳೆ, ಪ್ರವೀಣ್ ಕಾಂಬಳೆ, ಮುಂತಾದ ಗಣ್ಯರು ಉಪಸ್ಥರಿದ್ದರು. 


ಕಾರ್ಯಕ್ರಮ ಮೊದಲು ನಾಡಗೀತೆಯ ಮೂಲಕ ಚಾಲನೆ ಮತ್ತು ಸಂವಿಧಾನ ಪ್ರಸ್ತಾವನೆ ಬೋಧಿಸಿದರು.  ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅರ್ಚನಾ ಎಸ್ ಸಾನೆ ಹೊಂದಿಸಿದರು, ಆಶಾ ಕಾಂಬಳೆ ನಿರೂಪಿಸಿದರು.


ವರದಿ : ಡಾ. ವಿಲಾಸ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಶೇಗುಣಶಿ 

ಮೋ: 9591782353

Image Description

Post a Comment

0 Comments