*ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ:*
*ಡಾ. ಕೆ ಎಸ್. ಕಾಂಬಳೆ*
ರಾಯಬಾಗ:ಅದೃಷ್ಟದ ಮೇಲೆ ನಂಬಿಕೆ ಇಡದೆ ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ ಎಂದು ಪ್ರಾಚಾರ್ಯರಾದ ಡಾ. ಕೆ ಎಸ್ ಕಾಂಬಳೆ ಹೇಳಿದರು.
ತಾಲೂಕಿನ ಹಾರೂಗೇರಿ ಪಟ್ಟಣದ ಹಾ. ವಿ.ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇಂದು ಸಂವಿಧಾನ ಶಿಲ್ಪಿ ಮಹಾ ಮಾನವತಾವಾದಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 135 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಜೀವನದಲ್ಲಿ ಎಂಥಹ ಕಠಿಣ ಸವಾಲುಗಳು ಎದುರಾದರೂ ಸಮಚಿತ್ತ ಹಾಗೂ ಆತ್ಮವಿಶ್ವಾಸದಿಂದ ಗೆಲುವಿನ ನಗಾರಿ ಬಾರಿಸಿದ ಅಂಬೇಡ್ಕರ್ ಅವರು ಇಂದಿನ ಯುವ ಜನಾಂಗಕ್ಕೆ ದಿವ್ಯ ಸ್ಫೂರ್ತಿಯಾಗಿದ್ದಾರೆ ಎಂದರು.
ನಮ್ಮ ರಾಷ್ಟ್ರದ ಮೇರು ಗ್ರಂಥ ಎನಿಸಿಕೊಂಡ ಸಂವಿಧಾನದಲ್ಲಿ ಅಂಬೇಡ್ಕರ್ ಅವರು ನಮ್ಮ ದೇಶ ಜಾತ್ಯತೀತ ರಾಷ್ಟ್ರ ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದರೂ ಪ್ರಸ್ತುತ ಎಲ್ಲ ವಲಯದಲ್ಲಿ ಜಾತಿಯೇ ವಿಜೃಂಬಿಸುತ್ತಿರುವುದು ವಿಷಾದನೀಯ ಎಂದರು.
ಅಂಬೇಡ್ಕರ್ ಅವರು ಉಸುರಿದ ಶಿಕ್ಷಣ ಸಂಘಟನೆ ಹೋರಾಟ ಎಂಬ ದಿವ್ಯ ತತ್ವಗಳ ಅನುಷ್ಠಾನ ಇಂದಿನ ಅಗತ್ಯವಿದೆ. ಅವರ ಸಂದೇಶಗಳು ಎಂದೆಂದಿಗೂ ಸಾರ್ವಕಾಲಿಕವಾಗಿವೆ. ಇಂದಿನ ಸಮಕಾಲಿನ ಸಂದರ್ಭದಲ್ಲಿ ಯುವ ಸಮೂಹ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಚೆನ್ನಾಗಿ ಓದಿದರೆ ನಿಜಕ್ಕೂ ಮನ ಪರಿವರ್ತನೆಯಾಗುವುದರಲ್ಲಿ ಯಾವ ಸಂದೇಹವಿಲ್ಲ ಎಂದು ನುಡಿದರು.
ಮಹಾವಿದ್ಯಾಲಯದ ಉಪನ್ಯಾಸಕರುಗಳಾದ ಪ್ರೊ ಎಂ ಬಿ ಕಾಂಬಳೆ, ಪ್ರೊ ಪಿ ಎಂ ಪಾಟೀಲ, ಪ್ರೊ ಎಸ್ ಕೆ ಗುರುನಾಥ, ಪ್ರೊ ಎಚ್ ಎಸ್ ಕುರಿಯವರ, ಪ್ರೊ ಕೆ ಎಸ್ ಭಜಂತ್ರಿ, ಪ್ರೊ ಸಿ ಎಂ ಲುಡಬುಡೆ, ಪ್ರೊ ಎಂ ಬಿ ಬೆಳಗಲಿ, ಪ್ರೊ ಎಂ ಬಿ ಕುಲಕರ್ಣಿ, ಪ್ರೊ ಎಂ ಜೆ ರಾಠೋಡ, ಪ್ರೊ ವಿಜಯಲಕ್ಷ್ಮಿ ಕೆರಕಲ್ಮಟ್ಟಿ ಹಾಗೂ ಕಾಲೇಜಿನ ಬೋಧಕೇತರ ಸಿಬ್ಬಂದಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವರದಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments