*ಬೇವೂರ ಪಿ.ಎಸ್.ಸಜ್ಜನ ಕಾಲೇಜು ವತಿಯಿಂದ ಎನ್. ಎಸ್. ಎಸ್. ವಿಶೇಷ ಶಿಬಿರ* -------
--------- ಬಿಲ್ ಕೆರೂರು : ವಿದ್ಯೆ ಕಲಿಸಿದ ಗುರುಗಳನ್ನು, ಸಮಾಜದಲ್ಲಿ ನಮ್ಮನ್ನು ತಿದ್ದಿ ತಿಡಿದ ಹಿರಿಯರನ್ನು ಸ್ಮರಿಸಿ ಗೌರವಿಸಬೇಕು. ಎಂದು ಸಿಂದಗಿಯ ಅಬಕಾರಿ ಇಲಾಖೆಯ ಸಿ. ಪಿ.ಐ ಆದ ಶಿವಾನಂದ ಎಸ್. ಹೂಗಾರ ಹೇಳಿದರು. ಬೇವೂರಿನ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ವತಿಯಿಂದ ಬಿಲ್ ಕೆರೂರ ಗ್ರಾಮದಲ್ಲಿ ಹಮ್ಮಿಕೊಂಡ ಎನ್. ಎಸ್. ಎಸ್. ವಾಷಿ೯ಕ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಅತಿಥಿಗಳಾಗಿ ಭಾಗವಹಿಸಿ ಮಾತಾನಾಡಿದ ಶಂಭುಗೌಡ ಪಾಟೀಲ ಭಾವೈಕ್ಯೈತೆ ಮೂಡಿಸುವ ಶಿಬಿರ ಪರಿಸರದ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಎಂದರು. ಬೇವೂರಿನ ಆದಶ೯ ವಿದ್ಯಾವಧ೯ಕ ಸಂಘದ ಅಧ್ಯಕ್ಷರಾದ ಶ್ರೀ ಜಿ. ಜಿ. ಮಾಗನೂರು ವಕೀಲರು ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿ ವಿದ್ಯಾಥಿ೯ ಜೀವನ ಪರಿಪೂಣ೯ವಾಗಬೇಕಾದರೆ ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿವೆ. ಸಮಾಜದ ಬಗ್ಗೆ ಕಾಳಜಿ ಹೊಂದಿ ಸೇವಾ ಮನೋಭಾವದಿಂದ ಶ್ರಮದಾನ ಕೈಗೊಳ್ಳಬೇಕೆಂದು ಹೇಳಿದರು. ಕಾಯ೯ಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತಾನಾಡಿದ ಬಿಲ್ ಕೆರೂರು ಬಿಲ್ವಾಶ್ರಮದ ಸಿದ್ದಲಿಂಗ ಶಿವಾಚಾಯ೯ರು. ಶಿಕ್ಷಣ ಸೇವೆಗಾಗಿ ಬಿಲ್ ಕೆರೂರು ಮಠದ ರುದ್ರಮುನಿ ಶಿವಾಚಾಯ೯ರು ಜೋಳಿಗೆ ಹಿಡಿದು ಸಾಥ೯ಕ ಪರಿಶ್ರಮ ವಹಿಸಿದ್ದಾರೆ. ಅಕ್ಷರ ಅರಿವು ಸಂಸ್ಕಾರ ನೀಡಿ ಸಮಾಜದ ಉನ್ನತಿಗೆ ಶ್ರಮಿಸಿದ ಪೂಜ್ಯರು ಜನಮಾನಸದಲ್ಲಿ ಶಾಶ್ವತಸ್ಥಾನ ಗಳಿಸಿದ್ದಾರೆ ಎಂದು ಅವರು ಹೇಳಿದರು. ಮಹಾವಿದ್ಯಾಲಯದ ಪ್ರಾಚಾಯ೯ರಾದ ಡಾ.ಜಗದೀಶ ಗು. ಭೈರಮಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.ಹಿರಿಯ ಉಪನ್ಯಾಸಕರಾದ ಬಿ.ಬಿ.ಬೇವೂರ ವಚನ ಪ್ರಾಥ೯ನೆ ನೆರವೇರಿಸಿದರು. ಎಸ್. ಎಸ್. ಆದಾಪೂರ ಎನ್. ಎಸ್. ಎಸ್. ಗೀತೆಯನ್ನು ಹಾಡಿದರು. ವಿದ್ಯಾಥಿ೯ನಿ ವಿಜಯಲಕ್ಷ್ಮೀ ಬಂಡಿವಡ್ಡರ ಹಾಗೂ ಜ್ಯೋತಿ ಗೌಡರ ಸಂಗಡಿಗರು ಪ್ರಾಥಿ೯ಸಿದರು. ಆ.ವಿ.ವ ಸಂಘದ ಸದಸ್ಯರಾದ ಐ.ಜಿ.ಕಡೇಮನಿ, ಬಿಲ್ ಕೆರೂರಿನ ಲಕ್ಷ್ಮಣ ಅರಮನಿ,ಶಿವಪ್ಪ ಕರಲಿಂಗನ್ನವರ,ಲೋಕನಗೌಡ ಪಾಟೀಲ,ಶಿವಬಸಪ್ಪ ಇಟಗಿ,ಮುಖ್ಯಗುರುಗಳಾದ ಸಂತೋಷ ಕಟಗೇರಿ ಉಪನ್ಯಾಸಕರಾದ ಡಾ.ಸಂಗಮೇಶ ಹಂಚಿನಾಳ, ಡಿ. ವಾಯ್. ಬುಡ್ಡಿಯವರ,ಉಪಸ್ಥಿತರಿದ್ದರು. ಎನ್. ಎಸ್. ಎಸ್. ಯೋಜನಾಧಿಕಾರಿಗಳಾದ ಜಿ. ಎಸ್. ಗೌಡರ ವಂದಿಸಿದರು. ಇತಿಹಾಸ ಉಪನ್ಯಾಸಕ ಡಾ.ಎ.ಎಮ್.ಗೊರಚಿಕ್ಕನವರ ನಿರೂಪಿಸಿದರು.
ವರದಿ : ಡಾ. ವಿಲಾಸ ಕಾಂಬಳೆ
ಶೇಗುಣಶಿ
ಮೋ: 9591782353

.gif)

.gif)


0 Comments