*ಶಾಂತಿಯ ಮಾತುಕತೆಗೆ ಬಂದಾಗ*

 *ಶಾಂತಿಯ ಮಾತುಕತೆಗೆ ಬಂದಾಗ*



ನಾನು ನಡೆಸುವೆ ಮೋಹರದ ಸಂ-

ಧಾನವೆನ್ನುವ ಗರ್ವ ಪಾಪೀ-

ಸ್ತಾನ ತಾಳಿತು ಕರೆದಿರಾನಿನ ಜೊತೆಗೆ ಹುಚ್ಚನನು|

ಹಾನಿ ತುಂಬಿಸಿಕೊಡುವಿರಾದರೆ

ಗೋಣನೊಲೆಯುವೆವೀಗಲೇ ನೀ-

ವೇನು ಹೇಳುವಿರೆಂದು ದಡ್ಡಣ್ಣನನು ಕೇಳುವುದು||೧೯೧||

[ ಭಾಮಿನೀಷಟ್ಪದಿ]


{ ಮೋಹರ= ಯುದ್ಧ;ಕರೆದು+ ಇರಾನಿನ; ಗೋಣನು+ ಒಲೆಯುವೆವು+ಈಗಲೇ }

*ಕಿಗ್ಗಾಲು ಎಸ್ ಗಿರೀಶ್*

೧೨-೦೪-೨೦೨೬

Image Description

Post a Comment

0 Comments