*ಸಿಲಿಕಾನ್ ಸಿಟಿ ಖರ್ಚಿಗೆ ಪ್ರತಿದಿನ ಬೇಕಂತೆ 100 ಕೋಟಿ ರೂ.!*
ಬೆಂಗಳೂರು, ಹೈಟೆಕ್ ಸಿಟಿ ಬೆಂಗಳೂರಿನ ದಿನನಿತ್ಯದ ಖರ್ಚು ಬರೊಬ್ಬರಿ 100 ಕೋಟಿ ಎಂದರೆ ನೀವು ನಂಬುತ್ತಿರಾ… ನಂಬಲೇ ಬೇಕು ಯಾಕೇ ಅಂತೀರಾ….ಈ ಅಂಶವನ್ನು ಜನಾಗ್ರಹ ಸಂಸ್ಥೆಯ ವರದಿಯಲ್ಲಿ ಬಹಿರಂಗಗೊಂಡಿದೆ.
ನಗರದ ಮೂಲಭೂತ ಸೌಕರ್ಯ, ಸಾರಿಗೆ, ವಿದ್ಯುತ್, ನೀರು ಸೇರಿದಂತೆ ವಿವಿಧ ಸೇವೆಗಳಿಗಾಗಿ ಪ್ರತಿ ದಿನ ಕನಿಷ್ಠ 100 ಕೋಟಿ ವೆಚ್ಚವಾಗುತ್ತಿದೆ ಎಂದು ಜನಾಗ್ರಹ ಸಂಸ್ಥೆಯ ವರದಿ ಬಹಿರಂಗಪಡಿಸಿದೆ.
ಸುಮಾರು 13 ಪ್ರಮುಖ ಸಂಸ್ಥೆಗಳ 70 ದಾಖಲೆಗಳನ್ನು ಪರಿಶೀಲಿಸಿ ಈ ಅಂಕಿಅಂಶಗಳನ್ನು ಸಂಗ್ರಹಿಸಲಾಗಿದೆ. ಒಟ್ಟು 38,455 ಕೋಟಿ ಸಾರ್ವಜನಿಕ ವೆಚ್ಚ ನಗರದಲ್ಲಿ ಹರಿದು ಹೋಗುತ್ತಿದೆಯಂತೆ. ಅದರ ಬಳಕೆಯ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿಲ್ಲ ಎಂಬ ಗಂಭೀರ ಅರೋಪ ಕೇಳಿಬಂದಿದೆ.
ನಗರದಲ್ಲಿ ಕಾರ್ಯನಿರ್ವಹಿಸುವ 13 ಸಂಸ್ಥೆಗಳ ಪೈಕಿ ಬಿಡಿಎ, ಜಲಮಂಡಳಿ ಹಾಗೂ ಬಿಎಂಆರ್‌ಡಿಎ ಸಂಸ್ಥೆಗಳು ಮಾತ್ರ ಹಣಕಾಸು ಮಾಹಿತಿ ಹಂಚಿಕೊಳ್ಳುತ್ತಿವೆ. ವಿಶೇಷವಾಗಿ ಇವುಗಳಿಂದ ಮಾತ್ರ ವೆಚ್ಚದ ಮಾಹಿತಿ ಲಭ್ಯವಾಗುತ್ತಿದೆ. ಉಳಿದ ಸಂಸ್ಥೆಗಳು ಪಾರದರ್ಶಕತೆ ಕಾಪಾಡುತ್ತಿಲ್ಲ ಎಂದು ವರದಿ ಆರೋಪಿಸಿದೆ.
ವೆಚ್ಚ ಹಂಚಿಕೆ ಹೇಗೆ?ಬೆಂಗಳೂರು ನಗರದಲ್ಲಿ ದಿನಕ್ಕೆ ಖರ್ಚಾಗುವ 100 ಕೋಟಿಯಲ್ಲಿ ಸುಮಾರು 20% ನಗರ ಯೋಜನಾ ಸಂಸ್ಥೆಗಳು ಉಳಿದ 80% ಜಲಮಂಡಳಿ, ಬೆಸ್ಕಾಂ ಹಾಗೂ ಸಾರಿಗೆ ಸಂಸ್ಥೆಗಳು ಸೇರಿದಂತೆ ಇತರ ಸೇವಾ ಸಂಸ್ಥೆಗಳು ವೆಚ್ಚ ಮಾಡುತ್ತಿವೆ.
ಯಾವ ಇಲಾಖೆ ಹೆಚ್ಚು ಖರ್ಚು ಮಾಡುತ್ತಿದೆ?ವಿದ್ಯುತ್ ಇಲಾಖೆ - 47.3%, ನಗರ ಯೋಜನೆ - 19.6%, ಮೆಟ್ರೋ ಸಾರಿಗೆ- 13.4%, ಜಲಮಂಡಳಿ 8.8%, ಬಿಎಂಟಿಸಿ 6.3%, ಪೊಲೀಸ್ ಇಲಾಖೆ 2.4% ಹಾಗೂ ಇತರೆ ಸಂಸ್ಥೆಗಳು 2.2% ಹಣ ಖರ್ಚು ಮಾಡುತ್ತಿವೆ.
ಬಿಡಿಎ 47.30 ಕೋಟಿ ರೂ, ಜಿಬಿಎ 19.60 ಕೋಟಿ ರೂ., ಜಲಮಂಡಳಿ 13.40 ಕೋಟಿ, ಸ್ಮಾರ್ಟ್ ಸಿಟಿ 6.30 ಕೋಟಿ, ನಗರ ಸಾರಿಗೆ 2.40 ಕೋಟಿ ಹಾಗೂ ಇತರೆ 2.40 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.
ಇದರ ಜೊತೆಗೆ ಇನ್ನು ಹಲವು ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿದೆಯಂತೆ. ಕೆಲವು ಸಂಸ್ಥೆಗಳು ದಾಖಲೆಗಳಿಲ್ಲದೆ ಹಣ ಖರ್ಚು ಮಾಡುತ್ತಿರುವ ಶಂಕೆ ಕೂಡ ವ್ಯಕ್ತವಾಗಿದೆ ಎನ್ನುವುದನ್ನು ವರದಿ ಬಹಿರಂಗಗೊಳಿಸಿದೆ.
ಘನತ್ಯಾಜ್ಯ ನಿರ್ವಹಣಾ ಮಂಡಳಿಯಿಂದ ಮಾಹಿತಿ ಲಭ್ಯವಿಲ. ್ಲಹೆಚ್ಚಿನ ಅನುದಾನ ಪಡೆದ ಸಂಸ್ಥೆಗಳಿಗೆ ಸ್ವಂತ ವೆಬ್‌ಸೈಟ್‌ಗಳೇ ಇಲ್ಲ. ನಗರದಲ್ಲಿ ಚುನಾಯಿತ ಪ್ರತಿನಿಧಿಗಳ ಕೊರತೆಯೂ ಪಾರದರ್ಶಕತೆಗೆ ಅಡ್ಡಿಯಾಗುತ್ತಿದೆ. 2020ರಿಂದ ನಗರ ಆಡಳಿತಕ್ಕೆ ಚುನಾವಣೆ ನಡೆಯದೇ ಇರುವುದೂ ಸಮಸ್ಯೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜನಾಗ್ರಹ ಸಂಸ್ಥೆಯ ಪ್ರಮುಖ ಬೇಡಿಕೆಗಳು:ಎಲ್ಲಾ ಸಾರ್ವಜನಿಕ ಸಂಸ್ಥೆಗಳ ಹಣಕಾಸು ಪಾರದರ್ಶಕವಾಗಿರಬೇಕುನಗರ ಮಟ್ಟದ ಏಕೀಕೃತ ಡ್ಯಾಶ್‌ಬೋರ್ಡ್ ರಚನೆ ವೆಚ್ಚದ ವಿವರಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎನ್ನುವುದಾಗಿದೆ.
ಬೆಂಗಳೂರು ದಿನಕ್ಕೆ ನೂರು ಕೋಟಿ ಖರ್ಚಾಗುತ್ತಿರುವ ಮೆಗಾ ನಗರವಾಗಿದ್ದರೂ, ಅಷ್ಟೊಂದು ಹಣ ಎಲ್ಲಿಗೆ ಹೋಗುತ್ತಿದೆ? ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಗದಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.

.gif)

.gif)


0 Comments