*ಮಹಾ ಮಹಿಮನೇ....*

 *ಮಹಾ ಮಹಿಮನೇ....*



ಏಳಯ್ಯಾ ರಾಮ... 

ಎದ್ದೇಳೋ ಶ್ರೀರಾಮ. 

ಬೆಳಗಾಯಿತೇಳಯ್ಯಾ...

ಓ  ಮಹಾ ಮಹಿಮ...


ಜಡಜೀವಗಳೆಲ್ಲವೂ 

ತಲ್ಲಣದಿ ಕಾದಿಹವೋ 

ಕಣ್ಣತೆರೆದು ದರುಶನವ

ನೀಡುವ ಶ್ರೀ ಲಕ್ಷ್ಮೀರಮಣನು


ರಾಮನವಮಿ ಇಂದೆಂದು

ಮುತ್ತೈದೆಯರು ಕಾದಿಹರು ಮಿಂದು

ಕನಿಕರಿಸಿ ಕೃಪೆಯ ತೋರಬಾರದೇ

ಗೈದ ಪಾಪಗಳ ಕ್ಷಮಿಸಬಾರದೇನು


ಯುಗಕ್ಕೊಂದು ಅವತಾರ ಎತ್ತುವೆ

ದುಷ್ಟರ ದಮನಿಸುವೆ

ಭಕ್ತರ ಪರಿ ಪಾಲಿಸುವೆ

ರಾಮಾ ನಿನ್ನ ನಾಮ ಕಾಮಧೇನು

ನಿನ್ನ ಭಕ್ತನ ಮೇಲೆ ದಯೆ ಬಾರದೇನು


ಅಕ್ಷರ ಅರಿಯದ ಮನಸಲಿ

ನಿನ್ನ ನಾಮದ ಅಚ್ಚನು ಒತ್ತಿದೆ

ಪರಮಾವತಾರಿಯೇ ನಮೋ ಎನ್ನುವೆ

ಮುಕ್ತಿಯ ನೀಡುವೆ ಎಂದು ನಾ ನಂಬಿದೆನು.


*ಅಶೋಕ ಬೇಳಂಜೆ*

Image Description

Post a Comment

0 Comments