*ಪಂಪ ಪ್ರತಿಷ್ಠಾನ ರಚನೆ: ಔಚಿತ್ಯಪೂರ್ಣವಾದುದು*
ರಾಯಬಾಗ:ರಾಜ್ಯ ಸರಕಾರ ಕನ್ನಡ ನಾಡಿನ ನಾಡೋಜ ಆದಿ ಕವಿ ಪಂಪ ಮಹಾ ಕವಿಯ ಹೆಸರಿನಲ್ಲಿ ಪ್ರಸ್ತುತ ಪ್ರತಿಷ್ಠಾನ ರಚನೆ ಮಾಡಿರುವುದು ಸಮಕಾಲಿನ ಸಂದರ್ಭದಲ್ಲಿ ಅತ್ಯಂತ ಔಚಿತ್ಯಪೂರ್ಣ ಹಾಗೂ ಸ್ವಾಗತಾರ್ಹವಾದುದು.
ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತರ ಭಾರತದಲ್ಲಿ ಶತ ಶತಮಾನಕ್ಕೂ ಈ ಜಾತೀಯತೆ ಹಾಗೂ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ.
ಪಂಪನ ಮಾನವತಾವಾದದ ಆದರ್ಶದ ನೆಲೆಯಲ್ಲಿ ಬಸವಣ್ಣವರನ್ನು ಮೊದಲು ಮಾಡಿಕೊಂಡು ಸರ್ವಜ್ಞ ಕನಕದಾಸರು ಹಾಗೂ ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರು ಈ ಜಾತೀಯತೆ ಹಾಗೂ ಅಸ್ಪೃಶ್ಯತೆ ವಿರುದ್ದ ತಮ್ಮ ಹರಿತವಾದ ಬರಹದ ಮೂಲಕ ಸಮರ ಸಾರಿದ್ದು ಅವಿಸ್ಮರಣೀಯ.
10 ನೇ ಶತಮಾನದಲ್ಲಿ ಮೇರು ಕವಿ ಪಂಪನು "ಮಾನವ ಜಾತಿ ತಾನೊಂದೆ ವಲಂ" ಎಂದು ತನ್ನ ಕಾವ್ಯವೊಂದರಲ್ಲಿ ಪ್ರಾಸಂಗಿಕವಾಗಿ ಮಾನವತಾವಾದದ ಬಗ್ಗೆ ಮಾರ್ಮಿಕ ದಿವ್ಯ ಸಂದೇಶ ಸಾರಿದ್ದು ಗಮನಾರ್ಹ.
ಈ ಜಾತ್ಯತೀತ ರಾಷ್ಟ್ರದಲ್ಲಿ ಜಾತಿಯೇ ವಿಜೃಂಬಿಸುತ್ತಿರುವುದು ವಿಷಾದನೀಯ. ಮಹಾ ಮಾನವತಾವಾದಿ ವಿಶ್ವರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರು ತಮಗಾದ ಕಹಿ ಸ್ವಾನುಭವ ಮುಂದೆಯೂ ಸಹ ಈ ದೇಶದಲ್ಲಿ ಮರುಕಳಿಸದಿರಲಿ ಎಂಬ ಮಹಾನ್ ಆಶಯದೊಂದಿಗೆ ಸಂವಿಧಾನದ ಮೂಲಕ ಜಾತೀಯತೆ ಹಾಗೂ ಅಸ್ಪೃಶ್ಯತೆಯ ಆಚರಣೆಯ ವಿರುದ್ದ ವಿಶೇಷ ಕಾಯ್ದೆ ಕಾನೂನು ರೂಪಿಸುವ ಮೂಲಕ ಕ್ರಾಂತಿಯ ಕಹಳೆ ಮೊಳಗಿಸುವ ಮೂಲಕ ದಿಟ್ಟ ಹೆಜ್ಜೆ ಇರಿಸಿದ್ದು ಐತಿಹಾಸಿಕ ಸತ್ಯ.
ಖ್ಯಾತ ಚಿಂತಕರು, ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪನವರು ಇತ್ತೀಚಿಗೆ ಈ ನಾಡಿನಲ್ಲಿ ಪಂಪ ಮಹಾಕವಿಯ ಪ್ರತಿಷ್ಠಾನ ರಚನೆಯ ಅಗತ್ಯತೆಯ ಕುರಿತು ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಸುದೀರ್ಘ ಪತ್ರ ಬರೆದಿದ್ದು ಇಲ್ಲಿ ಸ್ಮರಿಸಬಹುದು.ಬರಗೂರು ಅವರ ಪತ್ರಕ್ಕೆ ಗೌರವ ನೀಡಿ ಪಂಪ ಮಹಾ ಕವಿ ಪ್ರತಿಷ್ಠಾನ ರಚನೆ ಮಾಡಿದ್ದು ಸರಿಯಷ್ಟೇ. ಜಾತಿ ಮತ ಪ್ರತಿಷ್ಠೆ ಪಂಥಗಳನ್ನು ಬದಿಗಿಟ್ಟು ಪ್ರತಿಷ್ಠಾನದ ಮಹೋನ್ನತ ಆಶಯಗಳ ಸಾಕಾರಕ್ಕೆ ಪ್ರಸ್ತುತ ರಾಜ್ಯ ಸರಕಾರ ಪಕ್ಷಾತೀತವಾಗಿ ಪರಿಶ್ರಮಿಸಿದರೆ ಮಾತ್ರ ಅದೇ ನಾವು ಪಂಪನಿಗೆ ಕೊಡುವ ಅನನ್ಯ ನಿಜವಾದ ಗೌರವವಾಗಿದೆ.
ಅಭಿಮತ: ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments