*ದಡ್ಡಣ್ಣನ ಸಮರತಂತ್ರ*

 *ದಡ್ಡಣ್ಣನ ಸಮರತಂತ್ರ*



ತಳುವು ಮಾಡುವೆ ಹತ್ತು ದಿವಸಗ-

ಳೊಳಗೆ ಮೋಹರವನ್ನು ನಿಲ್ಲಿಸಿ

ತಳೆದು ಸಂಯಮವನ್ನು ಬನ್ನಿರಿ ನಿಮಗೆ ಗಡುವುಂಟು|

ಒಳಗೊಳಗೆ ನವತಂತ್ರ ರೂಪಿಸಿ

ಬಳಿಕ ದಾಳಿಗೆ ತೊಡಗಿಕೊಳುವನು

ತಿಳಿವು ಕಾಣದ ಮೂರ್ಖನೊಲು ನಡೆಯಿರಿಸಿ ದಡ್ಡಣ್ಣ||೧೮೪||

[ ಭಾಮಿನೀಷಟ್ಪದಿ ]


{ ತಳುವು= ತಡ, ನಿಧಾನ; ಮೋಹರ= ಯುದ್ಧ; ಗಡುವು + ಉಂಟು }


*ಕಿಗ್ಗಾಲು ಎಸ್ ಗಿರೀಶ್*

೨೮-೦೩-೨೦೨೬

Image Description

Post a Comment

0 Comments