ಕಾವ್ಯಮೀಮಾಂಸೆ ಕವಿ ಮನಸ್ಸುಗಳಿಗೆ ರಸಪಾಕವಿದ್ದಂತೆ : ಡಾ.ಹೊಂಬಯ್ಯ

 ಕಾವ್ಯಮೀಮಾಂಸೆ ಕವಿ ಮನಸ್ಸುಗಳಿಗೆ ರಸಪಾಕವಿದ್ದಂತೆ :  ಡಾ.ಹೊಂಬಯ್ಯ



ಅಂಕಲಿ: ಕವಿಯ ಮನಸ್ಸಿನ ಭಾವನೆಗಳನ್ನು ಲಯಬದ್ಧ ಭಾಷೆಯಲ್ಲಿ ಅನುಭವ ಜನ್ಯದ ಮೂಲಕ ಅಭಿವ್ಯಕ್ತಿಸುವ ಕಲೆಯ ಪ್ರಕಾರವೇ ಕಾವ್ಯ. ಈ ಕಾವ್ಯವು ಉಂಟಾಗಬೇಕಾದರೆ ಕಾವ್ಯದ ಅಂಗಗಳಾದ ಶಬ್ದ ಮತ್ತು ಅರ್ಥ ಸಂಬಂಧ ಇದರೊಂದಿಗೆ ಅಲಂಕಾರ, ರೀತಿ, ರಸ, ಧ್ವನಿ, ಔಚಿತ್ಯ, ಗುಣ, ದೋಷ, ಪ್ರತಿಭೆ, ವಕ್ರೊಕ್ತಿ ಮುಂತಾದ ಸಾಮಗ್ರಿಗಳ ಮೊತ್ತವೇ ರಸಪಾಕ. ಈ ರಸಪಾಕವೇ ಕಾವ್ಯಮೀಮಾಂಸೆ ಎಂದು ಬೇಡಿಕಿ ಹಾಳ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಹೊಂಬಯ್ಯ ಹೊನ್ನಲಗೆರೆ ಅಭಿಪ್ರಾಯ ಪಟ್ಟರು.


ಚಿಕ್ಕೋಡಿ ತಾಲೂಕಿನ ಅಂಕಲಿಯ ಕೆಎಲ್ಇ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗವು ಆಯೋಜಿಸಿದ  '  ಭಾರತೀಯ ಕಾವ್ಯಮೀಮಾಂಸೆಯ ಪರಿಕಲ್ಪನೆಗಳು' ಎಂಬ ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.


ಕಾವ್ಯ ಮೀಮಾಂಸೆಯು ಮುಖ್ಯವಾಗಿ ಕವಿಯ ಮನಸ್ಸಿನಲ್ಲಿ ಕೃತಿಯಂದು ರೂಪ ಗೊಳ್ಳುವ ಕ್ರಿಯೆಯನ್ನು ಕಾವ್ಯದ ಲಕ್ಷಣ ಉದ್ದೇಶ ಪರಿಣಾಮಗಳನ್ನು ಕುರಿತು ಚರ್ಚೆ. ಆದರೆ ಸಾಹಿತ್ಯ ವಿಮರ್ಶೆ ಈಗಾಗಲೇ ನಿರ್ಮಿತವಾದ ಕವಿ ಕೃತಿಗಳನ್ನು ಕುರಿತ ವಿವೇಚನೆ, ವಿಶ್ಲೇಷಣೆ ಮೌಲ್ಯಮಾಪನವನ್ನು ಸಾಹಿತ್ಯ ವಿಮರ್ಶೆ ಎಂದು ಕರೆಯುವ ವಾಡಿಕೆ ಇದೆ. ಹಾಗಾಗಿ ಕಾವ್ಯ ಮೀಮಾಂಸೆಯ ಮುಂದುವರಿಕೆ ಭಾಗವೇ ವಿಮರ್ಶೆಯ  ರಹದಾರಿಯಾಗಿರುತ್ತದೆ ಎಂದು ವಿದ್ಯಾರ್ಥಿಗಳ ತಿಳಿಸಿದರು. 


ಕವಿಯಿಂದ ಅತ್ಯಂತ ಕಲಾತ್ಮಕವಾದ ರೂಪದಲ್ಲಿ ರಚನೆಗೊಳ್ಳುವ ಕಾವ್ಯದ ಜೊತೆಗೆ ರಸ, ಧ್ವನಿ,ಔಚಿತ್ಯ ಕಾವ್ಯ ಗಂಗೋತ್ರಿ ಯಾಗಿ ಪ್ರತಿಧ್ವನಿಸುತ್ತವೆ. ಶಬ್ದ ಮತ್ತು ಅರ್ಥಗಳು ಸೇರಿ ಕಾವ್ಯ ಉಂಟಾಗುತ್ತದೆ. ಶಬ್ದಕ್ಕೆ ಅನುಗುಣವಾದ ಅರ್ಥ ಅರ್ಥಕ್ಕೆ ಅನುಗುಣವಾದ ಶಬ್ದಗಳು ಹೊಂದಾಣಿಕೆಯಾಗಿ ಮೂಡಿ ಕಾವ್ಯವಾಗುತ್ತದೆ. ಕಾವ್ಯವನ್ನು ಓದುವುದರಿಂದ ಹಣ ಸಂಪಾದನೆ, ವ್ಯವಹಾರ ಜ್ಞಾನ ಸದ್ಯಪರ ನಿವೃತ್ತಿ ಕಾಂತ ಸಂಹಿತೆ, ಶಿವತರಕ್ಷತೆಯ ಉಂಟಾಗುತ್ತದೆ ಇದು ಕವಿ ಮತ್ತು ಸಹೃದಯರಿಬ್ಬರಿಗೂ ಪ್ರಯೋಜನಕಾರಿಯಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.


ಕಾವ್ಯ ರಚನಗೊಳ್ಳಬೇಕಾದರೆ ಹಲವು ಪರಿಕರಗಳ ಅಗತ್ಯವಿದೆ. ಅದರಲ್ಲಿ ಪ್ರತಿಭೆ, ವ್ಯುತ್ಪತ್ತಿ ,ಸ್ಪೂರ್ತಿ ,ಅಭ್ಯಾಸ ನಿರಂತರವಾಗಿ ಹೊಸ ಹೊಸದನ್ನು ಕಾಣುವ ಪ್ರಜ್ಞೆಯನ್ನು ಕವಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ ವಿನೂತನವಾದ ಕಾವ್ಯವನ್ನು ಸಮಾಜಕ್ಕೆ ಕೊಡಲು ಕಾರಣವಾಗುತ್ತದೆ. ಉದಾಹರಣೆಗೆ ಪಂಪನ ಕಾವ್ಯ ಕುಮಾರವ್ಯಾಸ ಮುದ್ದಣ್ಣ ಕುವೆಂಪು, ಮಾಸ್ತಿ ಸಿದ್ದಲಿಂಗಯ್ಯ, ಹಾಗೂ ಮಹಿಳಾ ಕವಿಯತ್ರಿಯರು ಕಾವ್ಯ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ್ದಾರೆ. ಇವರುಗಳಿಗೆ ಕಾವ್ಯಮೀಮಾಂಸೆ ತಾತ್ವಿಕ ತಳದಿಯನ್ನು ಒದಗಿಸಿಕೊಟ್ಟಿದೆ ಎಂದು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. 


ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಪಾಟೀಲ್ ಅವರು ಮಾತನಾಡುತ್ತಾ ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮ ಮನಸ್ಸಿನ ಭಾವನೆಗಳನ್ನು, ಚಿಂತನೆಗಳನ್ನು ಅಭಿವ್ಯಕ್ತಿಸುತ್ತಾರೆ. ಅವುಗಳು ಭಾವ ವಿಭಾವ ಅನುಭವದ ಮೂಲಕ ಕಾವ್ಯ ಸ್ವರೂಪವನ್ನು ಪಡೆಯುತ್ತವೆ ಎಂದು ತಿಳಿಸಿದರು. 


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕನ್ನಡ ವಿಭಾಗದ ಮುಖ್ಯಸ್ಥರಾದ ಎಸ್. ಬಿ. ಬೊಮ್ಮಣ್ಣವರ್ ಅವರು ವಾಸ್ತವಿಕವಾಗಿ ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳಲ್ಲಿ ಕಲಿಕೆ ಕುಂಠಿತವಾಗುತ್ತಿದೆ. ಕಲಿಕೆಯಲ್ಲಿ ವಿನೂತನವಾದ ಆಸಕ್ತಿಯನ್ನು ಮೂಡಿಸುವುದಕ್ಕೆ ವಿಶೇಷವಾದಂತಹ ಉಪನ್ಯಾಸಗಳನ್ನು ಆಯೋಜಿಸಿ ಸಂಪನ್ಮೂಲ ವ್ಯಕ್ತಿಗಳಿಂದ ನಮ್ಮ ವಿದ್ಯಾರ್ಥಿಗಳಿಗೆ ವಿಶೇಷ ಜ್ಞಾನವನ್ನು ಒದಗಿಸುವ ಕೆಲಸವನ್ನು ಕನ್ನಡ ವಿಭಾಗವು ನಿರಂತರವಾಗಿ ವಿದ್ಯಾರ್ಥಿಗಳ ಪರವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.


ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿಆರ್.ಎಸ್.ಪಿರಣ್ಣವರ್ ಸ್ವಾಗತಿಸಿದರು‌. ವಿವಿಧ ವಿಭಾಗಗಳ ಪ್ರಾಧ್ಯಾಪಕರು ಉಪಸ್ಥಿರಿದರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.


ವರದಿ : ಡಾ. ವಿಲಾಸ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಶೇಗುಣಶಿ

Image Description

Post a Comment

0 Comments