*ಬೆಳಗಾವಿ:ನಾಳೆ ಮೇಘ ಮೈತ್ರಿ ಸಾಹಿತ್ಯ ಸಂಭ್ರಮ 2026*

 *ಬೆಳಗಾವಿ:ನಾಳೆ ಮೇಘ ಮೈತ್ರಿ ಸಾಹಿತ್ಯ ಸಂಭ್ರಮ 2026*




 ಬೆಳಗಾವಿ :  ರಮೇಶ ಕಮತಗಿ ಅವರ ಸಾರಥ್ಯದಲ್ಲಿ  ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ಹಾಗೂ ಮಾರಾಠ ಮಂಡಳ ಪದವಿ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ರಾಜ್ಯಮಟ್ಟದ  ಪ್ರಶಸ್ತಿ ಪ್ರಧಾನ, ಲೇಖಕರ ಕೃತಿ ಲೋಕಾರ್ಪಣೆ, ಕವಿಗೋಷ್ಠಿ  ಹಾಗೂ ವಿಶೇಷ ಉಪನ್ಯಾಸವನ್ನು  ಬೆಳಗಾವಿಯ  ಪ್ರತಿಷ್ಠಿತ ಮರಾಠಾ ಮಂಡಳ ಪದವಿ ಮಹಾವಿದ್ಯಾಲಯದ ನಾಥಾಜಿರಾವ್ ಗುರುಅಣ್ಣಾ ಹಲಗೇಕರ ಸಭಾಭವನದಲ್ಲಿ ನಾಳೆ ದಿನಾಂಕ 3.7.2026 ಶುಕ್ರವಾರ ಮಧ್ಯಾಹ್ನ 3:30 ಗಂಟೆಗೆ  ಆಯೋಜಿಸಲಾಗಿದೆ.


  ಕೂಡಲಸಂಗಮದ  ಲಿಂಗಾಯತ ಪಂಚಮಸಾಲಿ ಸಮಾಜದ ಪೀಠಾಧ್ಯಕ್ಷರಾದ  ಶ್ರೀ ಬಸವ ಜಯ ಮೃತ್ಯುಂಜಯ  ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.       ಡಾ. ಸಿದ್ದು ಹುಲ್ಲೋಳ್ಳಿ ಉಪ ಆಯುಕ್ತರು  ಮಹಾನಗರ ಪಾಲಿಕೆ ಬೆಳಗಾವಿ, ಕಾರ್ಯಕ್ರಮ ಉದ್ಘಾಟನೆ ಮಾಡುವರು.  ಮರಾಠ ಮಂಡಳ  ಸಂಸ್ಥೆಯ  ಅಧ್ಯಕ್ಷರು ಹಾಗೂ  ಕಳೆದ ವರುಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ  ಡಾ. ರಾಜಶ್ರೀ ನಾಗರಾಜು , ಸಮಾರಂಭದ ಘನ ಅಧ್ಯಕ್ಷತೆ ವಹಿಸಿಕೊಳ್ಳುವರು.ಡಾ. ಹನುಮಂತ ಮೇಲಿನಮನಿ  ಪ್ರಾಚಾರ್ಯರು,ಕೆ ಎಲ್ ಇ ಲಿಂಗರಾಜ ಮಹಾವಿದ್ಯಾಲಯ ಬೆಳಗಾವಿ, ಇವರು ವಿವಿಧ ಲೇಖಕರ ಕೃತಿಗಳ ಲೋಕಾರ್ಪಣೆ ಮಾಡುವರು.


  ವಿಶ್ರಾಂತ ಪ್ರಾಚಾರ್ಯರು,ಸಾಹಿತಿ ಡಾ. ಎಚ್ ಐ ತಿಮ್ಮಾಪುರ ಸಾಹಿತಿಗಳು ಬೆಳಗಾವಿ, ಇವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವರು. ಶ್ರೀ ಸುರೇಶ್ ಕೋರಕೊಪ್ಪ ಸಾಹಿತಿಗಳು ಬೆಳಗಾವಿ, ಮುಖ್ಯ ಅತಿಥಿಗಳಾಗಿ  ಡಾ. ಡಿ ಎನ್ ಪಾಟೀಲ ಕುಲಸಚಿವರು ಮೌಲ್ಯಮಾಪನ ವಿಭಾಗ  ಕಿತ್ತೂರು ರಾಣಿ ಚೆನ್ನಮ್ಮ  ವಿಶ್ವವಿದ್ಯಾಲಯ  ಬೆಳಗಾವಿ, ಶ್ರೀ. ಜೆ ಎಂ ಖಾಲಿಮಿರ್ಚಿ ಸಿಪಿಐ  ಮಾರ್ಕೆಟ್ ಪೊಲೀಸ್ ಠಾಣೆ ಬೆಳಗಾವಿ, ಶ್ರೀ. ಶಾಮುವೆಲ್  ಡ್ಯಾನಿಯೇಲ್ ಪ್ರಾಚಾರ್ಯರು, ಚಂದ್ರಶೇಖರ ದೇಸಾಯಿ, ಡಾ. ಯಲ್ಲಪ್ಪ ಹಿಮ್ಮಡಿ , ಪ್ರೊ. ಎಂ ಎ ಬಿರಾದಾರ, ಎಂ ಎನ್ ಮಾವಿನಕಟ್ಟಿ, ಯ ರು ಪಾಟೀಲ, ಎಸ್ ಎಂ ಪಾಟೀಲ ಮುಂತಾದವರು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ   ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ  ಮಹನೀಯರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ನೆರವೇರಲಿದೆ. 


ನಂತರ ಕವಿಗೋಷ್ಠಿ ನಡೆಯಲಿದೆ. ಒಟ್ಟು ೨೧ ಕವಿಗಳು ಪಾಲ್ಗೊಂಡು ಕವನ ವಾಚನ ಮಾಡುವರು.


 ಶ್ರೀಮತಿ ಭಾರ್ಗವಿ ಶೆಟ್ಟಿ ಅವರ "ಮನಸಾಲಾಜಿ ಆಫ್ ಮಾನಿನಿ" ಮತ್ತು ಶ್ರೀಮತಿ ಗೀತಾ ಶಿವಮೂರ್ತಿಯವರ "ವಚನ ವೈಭವ" ಕೃತಿ ಲೋಕಾರ್ಪಣೆ ನಡೆಯಲಿದೆ ಎಂದು  ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರಾದ  ಡಾ. ಪ್ರಕಾಶ ನರಗುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ  ಪ್ರಾಧ್ಯಾಪಕರಾದ  ಡಾ    ಎಸ್ ಐ ಭಂಡಾರಿ,ಡಾ. ಜಯವೀರ            ಎ. ಕೆ.,ಶ್ರೀಕಾಂತಗೌಡ ಎಂ ಪಾಟೀಲ, ಅಶೋಕ ಕಾಂಬಳೆ,     ಡಾ. ದೇಮಣ್ಣ   ಸೊಗಲದ ಮುಂತಾದವರು ಉಪಸ್ಥಿತರಿದ್ದರು.


ವರದಿ:ಡಾ. ಜಯವೀರ ಎ. ಕೆ.

          ಕನ್ನಡ ಪ್ರಾಧ್ಯಾಪಕರು,

             ಖೇಮಲಾಪುರ

Image Description

Post a Comment

0 Comments