*ರಾಷ್ಟ್ರ ಸೇವೆಯ ಪಥದಲ್ಲಿ ಪ್ರಜ್ವಲ್ :ಗ್ರಾಮೀಣ ಪ್ರತಿಭೆಯ ಹೆಮ್ಮೆಯ ಹೆಜ್ಜೆ:* *ಪ್ರೊ ಟಿ ಎಸ್ ವಂಟಗೂಡಿ*

 *ರಾಷ್ಟ್ರ ಸೇವೆಯ ಪಥದಲ್ಲಿ ಪ್ರಜ್ವಲ್ :ಗ್ರಾಮೀಣ ಪ್ರತಿಭೆಯ ಹೆಮ್ಮೆಯ ಹೆಜ್ಜೆ:*

*ಪ್ರೊ ಟಿ ಎಸ್ ವಂಟಗೂಡಿ* 




  ರಾಯಬಾಗ:  ಸೈನಿಕನಾಗಿ ದೇಶ ಸೇವೆಯ ಪವಿತ್ರ ಪಥವನ್ನು ಆಯ್ಕೆ ಮಾಡಿಕೊಂಡ ಪ್ರಜ್ವಲ್‌ನ ಸಾಧನೆ ಯುವ ಮನಸ್ಸುಗಳಿಗೆ ಆದರ್ಶದ ದಾರಿದೀಪವಾಗಿದೆ ಎಂದು ಕನ್ನಡ ಪ್ರಾಧ್ಯಾಪಕರು, ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಪ್ರೊ ಟಿ ಎಸ್ ವಂಟಗೂಡಿ ಹೇಳಿದರು.



ತಾಲೂಕಿನ ಸುಟ್ಟಟ್ಟಿ ತೋಟದ ಮಹಾಮನೆಯ ಆವರಣದಲ್ಲಿ ಕನ್ನಡ ಪ್ರಾಧ್ಯಾಪಕರು, ಸಾಹಿತಿ ಡಾ. ಜಯವೀರ ಎ. ಕೆ. ಅವರ ಸುಪುತ್ರ ಕು.ಪ್ರಜ್ವಲ್ ಕಾಂಬಳೆ ಅವರು ಬೆಂಗಳೂರಿನ ಎಂ ಇ ಜಿ ತರಬೇತಿ ಕೇಂದ್ರದಲ್ಲಿ ಕಳೆದ 6 ತಿಂಗಳುಗಳ ಪರ್ಯಂತ ಸೇನಾ ಪೂರ್ವ ತರಬೇತಿ ಮುಗಿಸಿಕೊಂಡು ಸೋಮವಾರ ದಿ. 29 ರಂದು ಹಮ್ಮಿಕೊಂಡಿದ್ದ ಸ್ವಾಗತ ಹಾಗೂ ಗೌರವ ಸಮ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕು. ಪ್ರಜ್ವಲ್ ನಿಗೆ ಶಾಲು ಹೊದಿಸಿ ಸತ್ಕರಿಸಿ ಅವರು ಮಾತನಾಡಿದರು.


 ವೈಯಕ್ತಿಕ ಕನಸುಗಳ ಜೊತೆಗೆ ರಾಷ್ಟ್ರದ ಕರ್ತವ್ಯವನ್ನು ಮುಖ್ಯವೆಂದು ಪರಿಗಣಿಸಿದ ಇವರ ಸಾಧನೆಯ ಹಾದಿ ಮುಕ್ತ ಕಂಠದಿಂದ ಶ್ಲಾಘಿಸಿದರು..

ಶಿಸ್ತು, ಪರಿಶ್ರಮ, ಆತ್ಮವಿಶ್ವಾಸ ಮತ್ತು ದೇಶಪ್ರೇಮ ಇದ್ದರೆ ಯಾವುದೇ ಗುರಿಯನ್ನು ಸಾಧಿಸಬಹುದು ಎಂಬ ಸಂದೇಶವನ್ನು ಇವರ ಸಾಧನೆ ಸಾರುತ್ತದೆ.

ಇಂತಹ ಯುವ ಸಾಧನೆಗಳು ಇಂದಿನ ಪೀಳಿಗೆಯಲ್ಲಿ ಸೇವಾ ಮನೋಭಾವ ಮತ್ತು ರಾಷ್ಟ್ರಭಕ್ತಿಯ ಚಿಂತನೆಯನ್ನು ಬಲಪಡಿಸುತ್ತವೆ ಎಂದು ವಿಶ್ಲೇಷಿಸಿದರು.


ತಾನು ಕಟ್ಟಿಕೊಂಡ ಕನಸನ್ನು ಸಾಕಾರಗೊಳಿಸಿದ ಪ್ರಜ್ವಲ್ ನ ದೇಶ ಪ್ರೇಮ ನಿಜಕ್ಕೂ ಅವಿಸ್ಮರಣೀಯ ಎಂದರು.


ಇದಕ್ಕೂ ಮೊದಲು ಕುಡಚಿ ರೈಲು ನಿಲ್ದಾಣದಿಂದ ತೆರೆದ ಕಾರಿನಲ್ಲಿ ಕುಳಿತುಕೊಂಡ  ಬೈಕ್ ರ್ಯಾಲಿಯ ಮೂಲಕ ತನ್ನ ನಿವಾಸಕ್ಕೆ ಆಗಮಿಸಿದ ಕು.ಪ್ರಜ್ವಲ್ ನಿಗೆ ಆಗಮಿಸಿದ ಹಿತೈಷಿಗಳು ಗುರು ಹಿರಿಯರು ಹಾಗೂ ಸ್ನೇಹಿತರು ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು. ನಂತರ ಕು. ಪ್ರಜ್ವಲ್ ತನ್ನ ತಂದೆ ತಾಯಿಗೆ ಗೌರವ ವಂದನೆ ಸಲ್ಲಿಸಿದರು.ನಂತರ ಬೇರೆ ಬೇರೆ ಗ್ರಾಮಗಳಿಂದ ಆಗಮಿಸಿದ ಹಿತೈಷಿಗಳು ಕು. ಪ್ರಜ್ವಲನನ್ನು ಆತ್ಮೀಯವಾಗಿ ಸತ್ಕರಿಸಿ ಗೌರವಿಸಿದರು.ವೇದಮೂರ್ತಿ ಕಾಡಯ್ಯ ಸ್ವಾಮಿಗಳು. ಆರಕ್ಷಕ ಸಾಹಿತಿ ಸಂಗಮೇಶ ನಾಯಿಕ ದಂಪತಿಗಳು, ಮುರಾರ್ಜಿ ವಸತಿ ಶಾಲೆಯ ಮುಖ್ಯೋದ್ಯಾಪಕಿ ರೇವತಿ ಪಾಟೀಲ, ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.



ವರದಿ:ಡಾ. ಜಯವೀರ ಎ.ಕೆ.

     ಖೇಮಲಾಪುರ

Image Description

Post a Comment

0 Comments