*ಇದು ನನ್ನ ಭಾರತ*

 *ಇದು ನನ್ನ ಭಾರತ*



                   ೧


ಹಸಿವಿನ ಹೊಟ್ಟೆಯ ಮುಂದೆ ಭರವಸೆಯ ಮಾತಿನ ಆಟ,

ಸತ್ಯದ ಸಮಾಧಿಯ ಮೇಲೆ ಸುಳ್ಳಿನ ಸಿಂಹಾಸನದ ನೋಟ,

ನ್ಯಾಯವನ್ನೇ ಮಾರುವ ಅಧಿಕಾರದ ಕೋಟ — ಇದು ನನ್ನ ಭಾರತ.

                 



                      ೨

                


ಜಾತಿಯ ಗೋಡೆಗಳ ನಡುವೆ ಮಾನವೀಯತೆಯ ವಾಟ,

ಧರ್ಮದ ಹೆಸರಿನಲ್ಲಿ ದ್ವೇಷದ ಬೆಂಕಿಯ ಊಟ,

ಮನುಷ್ಯನಿಗಿಂತ ಮತವೇ ದೊಡ್ಡದೆನ್ನುವ ಪಾಠ — ಇದು ನನ್ನ ಭಾರತ.


                         ೩



ಭ್ರಷ್ಟರ ಅರಮನೆಗೆ ಪ್ರಾಮಾಣಿಕರ ಬದುಕಿನ ಲೂಟ,

ಯುವಕರ ಕನಸುಗಳಿಗೆ ನಿರುದ್ಯೋಗದ ಕಾಟ,

ಸ್ವಾತಂತ್ರ್ಯವಿದ್ದರೂ ಸಮಾನತೆ ಹುಡುಕುವ ನೋಟ — ಇದು ನನ್ನ ಭಾರತ.




    ಕವಿ:ಡಾ. ಜಯವೀರ ಎ. ಕೆ.

           ಖೇಮಲಾಪುರ

Image Description

Post a Comment

0 Comments