*ಕಾವ್ಯದ ಶೈಲಿ ಕುರಿತು ಪ್ರೊ ಶಿವಾನಂದ ಬೆಳಕೂಡ ಅವರ ಹೇಳಿಕೆಯನ್ನು ಅಕ್ಷರ ರೂಪಕ್ಕಿಳಿಸಿದ ಡಾ. ಜಯವೀರ ಅವರ ಬರಹ ಕುರಿತು ನನ್ನ ಅಭಿಮತ*
ಬಾಗೆನಾಡಿನ ಪ್ರೇಮಕವಿ, ಕನ್ನಡ ಕಾವ್ಯ ಲೋಕದ ಕಾವ್ಯಮೋಹಿ, ಕನ್ನಡ ಕಾವ್ಯ ಲೋಕದ ಅಂತಸತ್ವದ ಜೀವನಾಡಿ. ಪ್ರೇಮ ಕವಿ ಪ್ರೊ. ಶಿವಾನಂದ ಬೆಳಕೂಡ ಗುರುಗಳು ಕಾವ್ಯದ ಕುರಿತು ಅವರ ಅದ್ಭುತ ಮಾತುಗಳು ಸಾಹಿತ್ಯ ಲೋಕದ ಸಿಹಿ ನುಡಿಗಳು. ಒಂದೊಂದು ಮುತ್ತುಗಳು. ಸಾಹಿತ್ಯವೆನ್ನುವುದು ಕೇವಲ ಕಾಲ್ಪನಿಕ ಕಥೆಯಲ್ಲ, ಅದೊಂದು ಜೀವನದ ವಿಧಾನ. ಆಂತರಿಕವಾಗಿ ಬಚ್ಚಿಟ್ಟ ಸತ್ಯಗಳು. ಜೀವನದ ಮಾರ್ಗದರ್ಶಕರ ಸೂತ್ರಗಳು.
ಮಾನವೀಯ ಸಂಬಂಧಗಳ ಮೇರು ಚಿತ್ರಣಗಳು. ಪ್ರತಿ ಪದವು ಹುಟ್ಟುವುದು ಗರ್ಭದಿಂದಲೇ ಅಂದಾಗ ಅದರ ಆಳ ಅರಿವು ಕೈಗೆಟುಕುವುದು ಅಷ್ಟೇನು ಸುಲಭವಲ್ಲ.
ಪ್ರತಿ ಬದುಕಿನ ಪ್ರತಿ ಮನಸ್ಸಿನ ಪ್ರತಿಜೀವಿಗಳ ಜೀವ ಸಂಕೋಲೆಯ ಮಿಡಿತಗಳು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಸಾಗರ ಸಮುದ್ರ ನಿರಾತಂಕವಾಗಿ ಚಲಿಸುವಂತೆ ಸಾಹಿತ್ಯವೂ ಕೂಡ ನಿಂತ ನೀರಲ್ಲ. ಸಂವೇದನೆಗಳ ಜಾಡು.
ಅದರಂತೆ ಕಾಲಗರ್ಭಕ್ಕೆ ತಕ್ಕಂತೆ ಕಾಳಿದಾಸನ ಕಾವ್ಯ. ಪಂಪನ ಮಾನವೀಯತೆಯ ಪುನರುಕ್ತಿ. ರನ್ನನ ಧೀಮಂತ ಶಕ್ತಿ. ಶಿವಾನಂದ ಬೆಳಕೂಡ ಸರ್ ರವರ ಪ್ರೇಮಶಕ್ತಿ. ಒಂದು ವಿಭಿನ್ನ ನೆಲೆಯಲ್ಲಿ ನಿಲ್ಲುತ್ತದೆ. ಸಮಾಜದ ಸ್ವಾಸ್ಥ್ಯವನ್ನು ತಿದ್ದುವಲ್ಲಿ ಕಾವ್ಯವು ಅವಶ್ಯಕತೆ ಬೇಕಾಗುತ್ತದೆ. ಸಾಹಿತ್ಯ ಲೋಕದ ಯುವಕವಿಗಳಿಗೆ ಮುಂದಿನ ದಿನಮಾನದಲ್ಲಿ ಆಡಂಬರಕ್ಕಿಂತ ನೈಜತೆ ಕುರಿತು ಅಧ್ಯಯನ ಶೀಲತೆ ಕೈಗೊಂಡು ನಿರಂತರ ಅಧ್ಯಯನದಲ್ಲಿ ಮಗ್ನರಾಗಿ ಈ ನಾಡಿಗೆ ಹೊಸ ಹೊಸ ಕೃತಿಗಳು ಅರ್ಪಣೆಯಾಗಲಿ.
ನಾಡಿನ ಸಂಸ್ಕೃತಿಕ ಇತಿಹಾಸ ಮುಂದುವರೆಯಲಿ ಎಂದು ಪ್ರೊ. ಶಿವಾನಂದ ಬೆಳಕೂಡ ಸರ್ ಅವರ ಕಾವ್ಯದೊಳಗಿನ ಅಂತಃಶಕ್ತಿಯನ್ನು ವಿಭಿನ್ನ ನಡೆಯಲ್ಲಿ ವೈಚಾರಿಕತೆಯ ಮಡಿಲಲ್ಲಿ ಅಧ್ಯಯನ ಮಾಡಿ. ಲೇಖನಿಯ ಮುಖಾಂತರ ಕವಿಗಳಿಗೆ ಕಾವ್ಯದ ಸ್ವಾದವನ್ನು ಮನಮುಟ್ಟುವಂತೆ ನಿರೂಪಿಸಿದ ಡಾ. ಜಯವೀರ ಎ. ಕೆ.ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು.
*ಶ್ರೀ ಸಂಗಮೇಶ ನಾಯಿಕ*
ಆರಕ್ಷಕ ಸಾಹಿತಿ, ಹಾರೂಗೇರಿ
🙏🙏.

.gif)

.gif)


0 Comments