*ಸ್ಫೂರ್ತಿಯ ಕಿರಣ*
೧
ಬಡತನದ ಬೆಂಕಿಯನು ಮೆಟ್ಟಿ ನಿಂತ,
ಬಾಳಿನ ಕಷ್ಟವನು ಧೈರ್ಯದಿ ಗೆದ್ದ,
ವಿದ್ಯೆಯ ಬೆಳಕನು ಬದುಕಿಗೆ ಹಚ್ಚಿದ,
ವಿನಯದ ಮೆರಗುಲಿ ಮನಗಳ ಗೆದ್ದ.
೨
ಪ್ರಾಧ್ಯಾಪಕರಾಗಿ ಪ್ರಜ್ಞೆಯ ಬಿತ್ತಿದ,
ಪ್ರೀತಿಯ ಮಾತಲಿ ಮನವನು ತಟ್ಟಿದ,
ಸ್ನೇಹದ ಸಿರಿಯಲ್ಲಿ ಬಂಧವ ಬೆಳೆಸಿದ,
ಸಂಸ್ಕಾರದ ಹಾದಿಯಲಿ ಗೌರವ ಗಳಿಸಿದ.
೩
ಕನ್ನಡದ ಕಂಪನು ಕಂಠದಿ ಮೂಡಿದ,
ಕರುಣೆಯ ಮನದಿ ಕನಸುಗಳ ನೆಟ್ಟಿದ,
ನಿಸ್ವಾರ್ಥ ಬದುಕನು ನಗುತಲೇ ನಡೆಸಿದ,
ನೈತಿಕ ಮೌಲ್ಯದ ದೀಪವ ಬೆಳಗಿದ.
೪
ನಿರಾಡಂಬರ ಬದುಕಿನ ನಿಜ ಶರಣ,
ನಿಮ್ಮ ವ್ಯಕ್ತಿತ್ವವೇ ನಮಗೆ ಸ್ಪೂರಣ,
ತುಕಾರಾಮ ವಂಟಗೂಡಿ ಹೆಸರು ಚಿರಸ್ಮರಣ,
ಜನಮನ ಗೆದ್ದ ಸ್ಫೂರ್ತಿಯ ಕಿರಣ..!
ಕವಿ:ಡಾ. ಜಯವೀರ ಎ. ಕೆ.
ಖೇಮಲಾಪುರ
:

.gif)

.gif)


0 Comments