ಶಿಕ್ಷಣ ವಿಭಾಗ ಸಂಶೋಧನಾರ್ಥಿ ರಮೇಶ ಎಚ್.ಎ. ರವರಿಗೆ ಡಾಕ್ಟರೇಟ್ ಪದವಿ ಪ್ರದಾನ

 ಶಿಕ್ಷಣ ವಿಭಾಗ ಸಂಶೋಧನಾರ್ಥಿ ರಮೇಶ ಎಚ್.ಎ. ರವರಿಗೆ ಡಾಕ್ಟರೇಟ್ ಪದವಿ ಪ್ರದಾನ




ನೇತಾಜಿ (ಎಸ್.ಜೆ.ಬಿ.) ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರಮೇಶ ಎಚ್.ಎ. ರವರಿಗೆ ಪಿಎಚ್.ಡಿ ಪದವಿ ಪ್ರದಾನ


ಮಂಡ್ಯ.ಜೂ.04: ಮಂಡ್ಯ ತಾಲೂಕಿನ ಹೊನಗಳ್ಳಿ ಮಠ ಗ್ರಾಮದ ನಿವಾಸಿ ಶ್ರೀಮತಿ ವೆಂಕಟಮ್ಮ ಮತ್ತು ದಿವಂಗತ ಅಂದಾನಯ್ಯ ದಂಪತಿಯ ಕಿರಿಯ ಪುತ್ರ, ಹಾಲಿ ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿರುವ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯ, ಶಿಕ್ಷಣ ವಿಭಾಗದ ಸಂಶೋಧನಾರ್ಥಿ ರಮೇಶ ಎಚ್.ಎ. ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.


ಶಿಕ್ಷಣ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಭಾರದ್ವಾಜ್ ಜೆ.ಕೆ. ರವರ ಮಾರ್ಗದರ್ಶನದಲ್ಲಿ ಮಂಡಿಸಿದ "ಟೀಚಿಂಗ್ ಎಫೆಕ್ಟ್ವೇನೆಸ್ ಇನ್ ರಿಲೇಶನ್ ವಿಥ್ ಜಾಬ್ ಸ್ಟ್ರೆಸ್ ಅಂಡ್ ವರ್ಕ್ ಕಲ್ಚರ್ ಆಫ್ ಎಲ್ಮೆಂಟರಿ ಸ್ಕೂಲ್ ಟೀಚರ್ಸ್" ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ ಎಂದು ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.


ಪ್ರಸ್ತುತ ರಮೇಶ ಎಚ್.ಎ. ಅವರು ಬೆಂಗಳೂರು ನಗರದ ಕೆಂಗೇರಿ ವ್ಯಾಪ್ತಿಯ ನೇತಾಜಿ (ಎಸ್.ಜೆ.ಬಿ.) ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ


ಇದೇ ಸಂದರ್ಭದಲ್ಲಿ ರಮೇಶ ಎಚ್.ಎ. ಅವರ ಶೈಕ್ಷಣಿಕ ಸಾಧನೆಗಾಗಿ ಕುಟುಂಬಸ್ಥರು, ಗುರು-ಹಿರಿಯರು, ಸ್ನೇಹಿತರು ಮತ್ತು ಮಂಡ್ಯ ತಾಲೂಕಿನ ಹೊನಗಳ್ಳಿ ಮಠ ಗ್ರಾಮದ ಸುತ್ತಮುತ್ತಲಿನವರು ಶುಭಕೋರಿ, ಅಭಿನಂದನೆ ಸಲ್ಲಿಸಿದ್ದಾರೆ.


ವರದಿ : ಡಾ. ವಿಲಾಸ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಶೇಗುಣಶಿ 

ಮೋ: 9591782353

Image Description

Post a Comment

0 Comments