ಬೆಂಗಳೂರು ವಿಶ್ವ ವಿದ್ಯಾಲಯ ಶಿಕ್ಷಕೇತರ ನೌಕರರ ಚುನಾವಣೆ: ಕೃಷ್ಣಪ್ಪ ಎಚ್. ನೇತೃತ್ವ ತಂಡದ ಮತದಾನಕ್ಕೆ ಕರೆ

 ಬೆಂಗಳೂರು ವಿಶ್ವ ವಿದ್ಯಾಲಯ ಶಿಕ್ಷಕೇತರ ನೌಕರರ ಚುನಾವಣೆ: ಕೃಷ್ಣಪ್ಪ ಎಚ್. ನೇತೃತ್ವ ತಂಡದ ಮತದಾನಕ್ಕೆ ಕರೆ




ಬೆಂವಿವಿ: ಶಿಕ್ಷಕೇತರ ನೌಕರರ ಚುನಾವಣೆ: ಕೃಷ್ಣಪ್ಪ ಎಚ್. ತಂಡಕ್ಕೆ ಮತದಾನ ಮಾಡಲು ಮನವಿ


ಬೆಂಗಳೂರು, ಜೂ.26: ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರ ಸಂಘದ 2026-29ನೇ ಸಾಲಿನ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳ ಸ್ಥಾನಗಳಿಗೆ ಕೃಷ್ಣಪ್ಪ ಎಚ್. ನೇತೃತ್ವದ ತಂಡಕ್ಕೆ ಇದೇ (ಭಾನುವಾರ) ಜೂ.28ರಂದು ಜ್ಞಾನಭಾರತಿ ಆವರಣದಲ್ಲಿರುವ ಡಾ.ಎಚ್. ಎನ್.ಸಭಾಂಗಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಚುನಾವಣೆ ಜರುಗಲಿದೆ ಎಂದು ಕೃಷ್ಣಪ್ಪ ಎಚ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬೆಂಗಳೂರು ವಿವಿಯ ಸಂಘದ ಎಲ್ಲ ಸದಸ್ಯರೆಲ್ಲರೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಬೆಂಗಳೂರು ವಿವಿಯ ನೌಕರರ ಸಂಘದಲ್ಲಿ ಪಕ್ಷಪಾತವಿಲ್ಲದ ಸಮಾನತೆಯ ಆಶಯದೊಂದಿಗೆ ಆಮೂಲಾಗ್ರವಾದ ಬದಲಾವಣೆಯನ್ನು ತಂದು, ನೌಕರರ ಸಮಸ್ಯೆ, ಕುಂದು ಕೊರತೆಗಳಿಗೆ ಸ್ಪಂದಿಸಲು ಮತ್ತು ಸಂಘಕ್ಕೆ ನವಚೈತನ್ಯವನ್ನು ತುಂಬಲು ತಮ್ಮ ಅಮೂಲ್ಯವಾದ ಮತಗಳನ್ನು ಈ ಕೆಳಕಂಡ ಎಲ್ಲ ಹತ್ತು  ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಕೃಷ್ಣಪ್ಪ ಎಚ್ ತಂಡದವರು ಮನವಿ ಮಾಡಿಕೊಂಡಿದ್ದಾರೆ.


*ಎಲ್ಲಾ 10 ಮತ್ತು 4ನೇ ದರ್ಜೆ ಕ್ಷೇತ್ರದ ಅಭ್ಯರ್ಥಿಗಳ ವಿವರ:

ಸಾಮಾನ್ಯ ವರ್ಗ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಹಾಗೂ ಕ್ರಮ ಸಂಖ್ಯೆಗಳಾದ  01ರಲ್ಲಿ ಚೇತನ್ ಕೆ, 2ರಲ್ಲಿ ದೇವರಾಜು ಎಸ್, 6ರಲ್ಲಿ ಕೃಷ್ಣಪ್ಪ ಎಚ್, 8ರಲ್ಲಿ ಮಂಜುನಾಥ್ ವಿ, 9ರಲ್ಲಿ ಮುರುಳಿ ಎಸ್‌, 11ರಲ್ಲಿ ಎಂ. ನಾರಾಯಣಸ್ವಾಮಿ, 12ರಲ್ಲಿ ನವೀನ್ ಆರ್, 16ರಲ್ಲಿ ರೇಖಾ ಟಿ, 17ರಲ್ಲಿ ಸದಾಶಿವಯ್ಯ ಕೆ, 24ರಲ್ಲಿ ಸ್ವಾಮಿ ಸೇರಿದಂತೆ 4ನೇ ದರ್ಜೆ ಕ್ಷೇತ್ರದಲ್ಲಿ ಕ್ರಮ ಸಂಖ್ಯೆ 2ರಲ್ಲಿ ಕೃಷ್ಣ ಆ‌ರ್, 4ರಲ್ಲಿ ಮುತ್ತುರಾಯಪ್ಪ, 5ರಲ್ಲಿ ಷಣ್ಮುಗ ಎಸ್ ಇವರುಗಳು ಸ್ಪರ್ಧೆಗೆ ಅವಕಾಶ ನೀಡಬೇಕೆಂದು ಪ್ರತಿಯೊಬ್ಬರೂ ಸದಸ್ಯರು ಕೂಡ ಮತದಾನಕ್ಕೆ ಕೋರಿಕೊಂಡಿದ್ದಾರೆ.


ವರದಿ : ಡಾ. ವಿಲಾಸ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಶೇಗುಣಶಿ 

ಮೋ: 9591782353

Image Description

Post a Comment

0 Comments