*ನಾದಬ್ರಹ್ಮದ ನಿನಾದ’ ಕವಿತೆಗೆ ಡಾ. ಜಯವೀರ ಎ. ಕೆ.ಅವರಿಗೆ ರಾಜ್ಯ ಮಟ್ಟದ ದ್ವಿತೀಯ ಸ್ಥಾನ*
ರಾಯಬಾಗ: ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ , ಇಲಕಲ್ ತಾಲೂಕು ಘಟಕದ ವತಿಯಿಂದ ಇತ್ತೀಚಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ರಚನಾ ಸ್ಪರ್ಧೆಯಲ್ಲಿ ಖೇಮಲಾಪುರದ ಕನ್ನಡ ಪ್ರಾಧ್ಯಾಪಕ, ಸಾಹಿತಿ ಹಾಗೂ ಕ್ರಿಯಾಶೀಲ ಪತ್ರಕರ್ತರಾದ ಡಾ. ಜಯವೀರ ಎ. ಕೆ. ಅವರು ರಚಿಸಿದ ‘ನಾದಬ್ರಹ್ಮದ ನಿನಾದ’ ಕವಿತೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಿರುವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಅವರು ಡಾ. ಜಯವೀರ ಅವರ ಕಾವ್ಯ ಪ್ರತಿಭೆಯನ್ನು ಅಭಿನಂದಿಸಿದ್ದಾರೆ.
ಸಂಗೀತದ ಆಧ್ಯಾತ್ಮಿಕತೆ, ಸಾಂಸ್ಕೃತಿಕ ಮಹತ್ವ ಹಾಗೂ ಮಾನವ ಬದುಕಿನೊಂದಿಗೆ ಅದರ ಅವಿನಾಭಾವ ಸಂಬಂಧವನ್ನು ಪ್ರತಿಬಿಂಬಿಸುವ ‘ನಾದಬ್ರಹ್ಮದ ನಿನಾದ’ ಕವಿತೆ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.
ಡಾ. ಜಯವೀರ ಎ. ಕೆ. ಅವರ ಈ ಸಾಧನೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈರನಗೌಡ ಪಾಟೀಲ, ಹಿರಿಯ ಕವಿ ಪ್ರೊ. ಶಿವಾನಂದ ಬೆಳಕೂಡ, ವಿಮರ್ಶಕ ಡಾ. ವಿ. ಎಸ್. ಮಾಳಿ, ಚುಟುಕು ಕವಿಗಳಾದ ಪ್ರೊ. ಎಲ್. ಎಸ್. ವಂಟಮೂರೆ, ಶ್ರೀಶೈಲ ಶಿರೂರ, ಯುವ ಕವಿ ಸಾಗರ ಝೆಂಡೆನ್ನವರ, ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಪ್ರೊ. ಟಿ. ಎಸ್. ವಂಟಗೂಡಿ, ಕನ್ನಡ ಪ್ರಾಧ್ಯಾಪಕರು, ಸಾಹಿತಿ ಡಾ. ಪ್ರಕಾಶ ನರಗುಂದ, ಧಾರವಾಡದ ಸಮಾಜ ಸೇವಕರು, ಬರಹಗಾರ ಚಿದಂಬರ ಪಿ ನಿಂಬರಗಿ ಪ್ರೊ. ಶ್ರೀಕಾಂತಗೌಡ ಪಾಟೀಲ, ಸಾಹಿತಿ ಸುಖದೇವ ಕಾಂಬಳೆ, ಮಹಿಳಾ ಕವಿಯತ್ರಿ ಡಾ. ರತ್ನಾ ಬಾಳಪ್ಪನವರ ರಂಗ ಕಲಾವಿದರು, ಕನ್ನಡ ಪ್ರಾಧ್ಯಾಪಕರು ಡಾ ವಿಲಾಸ ಕಾಂಬಳೆ, ಕಬ್ಬೂರಿನ ಶಿವಯೋಗ ಸಾಧಕರು, ಹಾಗೂ ಪ್ರವಚನ ಪಟು ಶ್ರೀಧರ ಮುರಾಳೆ,ಸೇರಿದಂತೆ ತಾಲೂಕಿನ ಅನೇಕ ಸಾಹಿತಿಗಳು, ಕವಿಗಳು ಹಾಗೂ ಸಾಹಿತ್ಯಾಸಕ್ತರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.
ವರದಿ:ಡಾ. ವಿಲಾಸ ಕಾಂಬಳೆ
ದೇಹ ದಾನಿಗಳ ಗ್ರಾಮ
ಶೇಗುಣಶಿ
ಮೋ:9591782353

.gif)

.gif)


0 Comments