*ಅಂಗಳದ ಮಲ್ಲಿಗೆಯ ಸುಗಂಧ ಗೀತೆ*
ನಮ್ಮ ಮನೆಯ ಅಂಗಳದಿ ಅರಳಿದ ಮಲ್ಲಿಗೆ ಬಾಲೆ,
ಮನದ ಮಂಟಪ ತುಂಬಿ ಚೆಲ್ಲಿದ ಸುಗಂಧದ ಮಾಲೆ.
ಬೆಳಗಿನ ಮಂಜಿನ ಹನಿಯಲಿ ನಲಿದ ಸೊಬಗಿನ ಲೀಲೆ,
ನೋಡಿದ ಕಣ್ಣಿಗೆ ನಿತ್ಯವೂ ಸೌಂದರ್ಯದ ಕಲೆ
ಗಾಳಿಯ ತೆನೆಗಳ ಜೊತೆಯಲ್ಲಿ ಆಡಿದ ಮೃದು ರಾಗ,
ಹಕ್ಕಿಗಳ ಕಲರವ ಬೆರೆಸಿದ ಪ್ರೀತಿಯ ಯೋಗ.
ಬಿಳಿಯ ದಳಗಳಲಿ ಬರೆದ ಪ್ರಕೃತಿಯ ಭೋಗ,
ಅಂಗಳದ ಚೆಲುವಿಗೆ ಮಲ್ಲಿಗೆಯೇ ದಿವ್ಯ ಸಂಯೋಗ.
ಸಂಜೆಯ ಸೆರಗಲಿ ಹರಡಿದ ಸುಮಧುರ ಸುವಾಸನ
ಮನೆಯ ಮನಗಳಲಿ ಮೂಡಿದ ಸಂತಸದ ಸ್ಫೂರಣ
ದೇವರ ಪಾದಕೆ ಏರಿದ ಭಕ್ತಿಯ ಅರ್ಚನ,
ಬದುಕಿನ ಬಯಲಲಿ ಅರಳಿದ ಸೌಂದರ್ಯದ ಸ್ಪಂದನ.
ತಾಯಿಯ ಜಡೆಯಲಿ ಮಿನುಗಿದ ಶುಭದ ಸಿರಿ
ಮಕ್ಕಳ ನಗುವಲಿ ಬೆರೆತ ಮಮತೆಯ ಲಹರಿ
ನಮ್ಮ ಮನೆಯ ಹೆಮ್ಮೆಯ ಸುಗಂಧದ ಮಧುರಿ
ಮಲ್ಲಿಗೆಯ ಹೂವೇ ಪ್ರಕೃತಿಯ ಅಮೃತ ಸಿರಿ
ಕವಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments