ಚಿಕ್ಕೋಡಿಯ ಡಿಡಿಪಿಯು ಆಗಿ ಮಂಡ್ಯದ ಲಿಂಗರಾಜ್. ಎನ್ ಅಧಿಕಾರ ಸ್ವೀಕಾರ

 ಚಿಕ್ಕೋಡಿಯ ಡಿಡಿಪಿಯು ಆಗಿ ಮಂಡ್ಯದ ಲಿಂಗರಾಜ್. ಎನ್ ಅಧಿಕಾರ ಸ್ವೀಕಾರ 



ಚಿಕ್ಕೋಡಿ: ಕರ್ನಾಟಕದಲ್ಲಿ  ಬೆಳಗಾವಿ ಬಹುಮುಖ್ಯ ಮತ್ತು ಎರಡನೇ ರಾಜಧಾನಿಯಾಗಿದೆ. ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆಯಾದ ಬೆಳಗಾವಿ ಶೈಕ್ಷಣಿಕವಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಎರಡು ವಿಭಾಗಗಳಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಒಂದಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ನಿಪ್ಪಾಣಿ, ಚಿಕ್ಕೋಡಿ, ಅಥಣಿ, ಮೂಡಲಗಿ ಗೋಕಾಕ್, ಹುಕ್ಕೇರಿ, ಕಾಗವಾಡ ತಾಲೂಕುಗಳನ್ನು ಒಳಗೊಂಡಿರುವ ಜಿಲ್ಲೆಯಾಗಿದೆ. ಈ ಹಿಂದೆ ಪಾಂಡುರಂಗ ಭಂಡಾರಿಯವರು ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು ನಿವೃತ್ತಿಯಾದ ಕಾರಣ ಹೊಸದಾಗಿ ಮಂಡ್ಯ ಜಿಲ್ಲೆಯಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಲಿಂಗರಾಜು ಎನ್ ಅವರು  ಬಡ್ತಿ ಹೊಂದಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪದವಿ ಪೂರ್ವ ಇಲಾಖೆಯ ನೂತನ ಉಪನಿರ್ದೇಶಕರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು.


ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪದವಿಪೂರ್ವ  ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಕಾಲೇಜುಗಳಿದ್ದು ವಿದ್ಯಾರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಲ್ಲಾ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮತ್ತು ಉಪನ್ಯಾಸಕರಿಗೆ ಉತ್ತಮವಾದ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಿ ರಾಜ್ಯದಲ್ಲೇ ನಮ್ಮ ಜಿಲ್ಲೆಯು ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ನೂತನ ಉಪ ನಿರ್ದೇಶಕರು ಅಧಿಕಾರ ಸ್ವೀಕರಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ನಿವೃತ್ತ ಉಪ ನಿರ್ದೇಶಕರಾದ ಪಾಂಡುರಂಗ ಭಂಡಾರಿ, ಪ್ರಭಾರ ಉಪನಿರ್ದೇಶಕರಾಗಿದ್ದ ಬಸವರಾಜ ಹಾದಿಮಾನಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗದ ಕಚೇರಿಯ ವಿವಿಧ ಸಿಬ್ಬಂದಿಗಳಾದ ವಿಠಲ ಎಸ್ ಬಡಾಯಿ, ಮಹಾದೇವ ತಳವಾರ್, ಸಚಿನ್ ಕಮತರ, ಬಸ ಗೌಡ ಮದ್ಯಾಳಿ, ರೂಪೇಶ್ ಕಾಂಬಳೆ, ನಿವೃತ್ತ ಪ್ರಾಂಶುಪಾಲದ ಜಾದವ್ ವಿಭಿಜಿತ್ ಮೋಹಿತೆ ಜಯಶ್ರೀ ಘಾಟೆಗೆ ನೂತನ ಉಪನಿರ್ದೇಶಕರಿಗೆ ಅಭಿನಂದಿಸಿದರು ಉಪಸ್ಥಿತರಿದ್ದರು.


ವರದಿ :ಡಾ. ವಿಲಾಸ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಶೇಗುಣಶಿ 

ಮೋ: 9591782353

Image Description

Post a Comment

0 Comments