*ಶ್ವಾಸ ಉಳಿಸುವ ಸಸಿ*
೧
ಪರಿಸರ ದಿನದಂದು ಸಸಿ ಹಿಡಿದು ಫೋಟೋಗೆ ನಿಲ್ಲುವುದಲ್ಲ ಸಾಧನೆ,
ಸಸಿ ಹೆಮ್ಮರವಾಗುವ ತನಕ ಕಾಪಾಡುವುದೇ ನಿಜವಾದ ಆರಾಧನೆ.
೨
ಘೋಷಣೆಗಳು ಕಾಗದದ ಮೇಲೆ ಉಳಿದರೆ ಪ್ರಕೃತಿ ಉಳಿಯದು,
ಕೈಗಳು ಕಾರ್ಯಕ್ಕೆ ಇಳಿದಾಗಲೇ ಹಸಿರಿನ ಕನಸು ಅರಳುವುದು.
೩
ಪ್ರಕೃತಿಯ ಮಡಿಲಲ್ಲಿ ಹುಟ್ಟಿದ ಮಾನವ ಜೀವದ ವಾಹಿನಿ,
ಅವಳನ್ನೇ ವಿಕೃತಗೊಳಿಸಿದರೆ ಬತ್ತುವುದು ಬದುಕಿನ ಕಾಹಿನಿ.
೪
ಪ್ರತಿ ದಿನವೂ ಪರಿಸರ ದಿನವೆಂದು ಮನದಾಳದಲ್ಲಿ ಬಿತ್ತೋಣ,
ಒಂದು ಸಸಿಯನ್ನು ಮಗುವಿನಂತೆ ಬೆಳೆಸಿ ಭೂಮಿಗೆ ಉಸಿರು ಕೊಡೋನ
ಕವಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments