*ನಾಲ್ಕು ತಿಂಗಳ ಬಳಿಕ ಮತ್ತೆ ಚಲಿಸಿದ ಸಿದ್ದಾಪುರ–ಅಥಣಿ ಬಸ್: ಗ್ರಾಮಸ್ಥರಲ್ಲಿ ಸಂತಸದ ಸಂಭ್ರಮ*

 *ನಾಲ್ಕು ತಿಂಗಳ ಬಳಿಕ ಮತ್ತೆ ಚಲಿಸಿದ ಸಿದ್ದಾಪುರ–ಅಥಣಿ ಬಸ್: ಗ್ರಾಮಸ್ಥರಲ್ಲಿ ಸಂತಸದ ಸಂಭ್ರಮ*


  


ರಾಯಬಾಗ : ಕಳೆದ ನಾಲ್ಕು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಸಿದ್ದಾಪುರ–ಅಥಣಿ ಬಸ್ ಸಾರಿಗೆ ಸೇವೆ ನಿನ್ನೆ ಸೋಮವಾರ              ದಿ. 1 ರಂದು ಮತ್ತೆ ಪುನರಾರಂಭಗೊಂಡಿದ್ದು, ಸಿದ್ದಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಸಂತಸ ಮತ್ತು ನೆಮ್ಮದಿಯ ವಾತಾವರಣ ಮೂಡಿಸಿದೆ.

ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳು, ರೈತರು, ವ್ಯಾಪಾರಿಗಳು ಹಾಗೂ ನಿತ್ಯ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ವಿಶೇಷವಾಗಿ ಶಿಕ್ಷಣ, ಆರೋಗ್ಯ ಹಾಗೂ ವ್ಯಾಪಾರ ಚಟುವಟಿಕೆಗಳಿಗಾಗಿ ಅಥಣಿಗೆ ತೆರಳಬೇಕಾದ ಜನರಿಗೆ ಪರ್ಯಾಯ ವ್ಯವಸ್ಥೆಗಳ ಅವಲಂಬನೆ ಅನಿವಾರ್ಯವಾಗಿತ್ತು.


 ಇದೀಗ ಬಸ್ ಸೇವೆ ಮರು ಆರಂಭಗೊಂಡಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿದ್ದು, ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರು ಬಸ್‌ಗೆ ಪೂಜೆ ಸಲ್ಲಿಸಿ ಸ್ವಾಗತ ಕೋರಿದರು. ಬಸ್ ಸೇವೆಯ ಪುನರಾರಂಭಕ್ಕೆ ಕಾರಣಕರ್ತರಾದ ಸಂಬಂಧಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಿದ್ದಾಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೌಲಾಸಾಬ ಚಿಂಚಲಿ, ಸಮಾಜ ಸೇವಕ ಸಿದಗೌಡ ಪಾಟೀಲ,ಕಲಾವಿದ ಶಿವಾನಂದ ಪಾಟೀಲ ಸೇರಿದಂತೆ ಗ್ರಾಮದ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಗ್ರಾಮೀಣ ಪ್ರದೇಶದ ಜನಜೀವನಕ್ಕೆ ಸಾರ್ವಜನಿಕ ಸಾರಿಗೆ ಸೇವೆ ಅತ್ಯಗತ್ಯವಾಗಿದ್ದು, ಸಿದ್ದಾಪುರ–ಅಥಣಿ ಬಸ್ ಸೇವೆಯ ಪುನರಾರಂಭವು ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಮಹತ್ವದ ಹೆಜ್ಜೆಯಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.


ವರದಿ:ಡಾ. ಜಯವೀರ ಎ. ಕೆ.

           ಖೇಮಲಾಪುರ

Image Description

Post a Comment

0 Comments