ಎಲ್ಲರ ಒಡನಾಡಿ ಡಾ. ಎಸ್. ವಿಜಯ್ ಕುಮಾರ್ ಸೇವಾ ನಿವೃತ್ತಿ ಹಿನ್ನೆಲೆಯ ಅಭಿನಂದನಾ ಸಂಭ್ರಮ

 ಎಲ್ಲರ ಒಡನಾಡಿ ಡಾ. ಎಸ್. ವಿಜಯ್ ಕುಮಾರ್ ಸೇವಾ ನಿವೃತ್ತಿ ಹಿನ್ನೆಲೆಯ ಅಭಿನಂದನಾ ಸಂಭ್ರಮ



ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆ: ಡಾ. ಎಸ್. ವಿಜಯ್ ಕುಮಾರ್ ಅವರ ಅಭಿವೃದ್ಧಿಗಾಗಿ ಶ್ರಮಿಸಿದ ಹೆಮ್ಮೆಯ ಪ್ರಾಂಶುಪಾಲರು


- ಡಾ. ಮಹೇಶ್ ಕುಮಾರ್ ಎಂ, ಮಳವಳ್ಳಿ


ಆತ್ಮೀಯ ಹಿರಿಯರು, ಒಡನಾಡಿ, ಬಹುಜನ ಚಿಂತಕರು, ಕರ್ನಾಟಕ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆಯ ಎಸ್ಸಿ-ಎಸ್ಟಿ ನೌಕರರ ಒಕ್ಕೂಟದ ಪ್ರದಾನ ಪದಾಧಿಕಾರಿಗಳು ಮತ್ತು ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ಮತ್ತು ಅತ್ಯುತ್ತಮ ಸಂಘಟಕರು, ಹಗಲಿರುಳು ಶ್ರಮಿಸಿದ ವಿದ್ಯಾರ್ಥಿ ಬಾಳಿನ  ಹೆಮ್ಮೆಯ ಪೋಷಕರ ಸಮಾನರು, ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ 33 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಇಂದು ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯ  ಪ್ರಾಂಶುಪಾಲರಾಗಿ ಸೇವಾ ನಿವೃತ್ತಿ ಹೊಂದುತ್ತಿರುವ ಶ್ರೀ ಡಾ. ಎಸ್. ವಿಜಯ್ ಕುಮಾರ್ ಅವರ ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ಅಭಿನಂದನಾ ಸಂಭ್ರಮವನ್ನು ಅಚ್ಚುಮೆಚ್ಚಿನ ಹಿರಿಯ  ಪ್ರಾಂಶುಪಾಲರು ಎಂದರೆ ಹೆಮ್ಮೆ ಪಡೆಯುವ ವಿಷಯವಲ್ಲವೇ!


ಡಾ. ಎಸ್. ವಿಜಯ್ ಕುಮಾರ್ ಮೂಲತಃ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ತಲಕಾಡು ಹೋಬಳಿಯ ಮಡವಾಡಿ ಗ್ರಾಮದ ಶ್ರೀಮತಿ ಮಲ್ಲಮ್ಮ ಮತ್ತು ಜಿ ಸಿದ್ದಯ್ಯ ದಂಪತಿಯ ಪುತ್ರನಾಗಿ ದಿನಾಂಕ 02.05.1966ರಂದು 

ಜನಿಸಿದರು. ನಂತರದಲ್ಲಿ ಆರಂಭಿಕ ಶಿಕ್ಷಣವನ್ನು ಡಾ. ಎಸ್. ವಿಜಯ್ ಕುಮಾರ್ ಅವರ ಪ್ರಾಥಮಿಕ ಶಿಕ್ಷಣವನ್ನು ಒಂದು ರಿಂದ ನಾಲ್ಕರ ವರಗೆ ಮಡವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಸರ್ಕಾರಿ ಮಾಧ್ಯಮಿಕ ಶಾಲೆ ಮತ್ತು ಸಾರ್ವಜನಿಕ ಪ್ರೌಢ ಶಿಕ್ಷಣವನ್ನು ಮಳವಳ್ಳಿ ತಾಲೂಕಿನ ಬೆಳಕವಾಡಿಯಲ್ಲಿ ಮುಗಿದಿದ್ದು, ಹಾಗೆಯೇ ಚಾಮರಾಜನಗರದ ಜೆಎಸ್ಎಸ್ ಸಂಸ್ಥೆಯಲ್ಲಿ ಪಿಯುಸಿ ತೇರ್ಗಡೆಯಾಗಿ ನನ್ನ ಉನ್ನತ ವ್ಯಾಸಂಗಕ್ಕಾಗಿ ಎಂಜಿನಿಯರಿಂಗ್ ಪದವಿಯನ್ನು ತುಮಕೂರಿನ ಸಿದ್ದಗಂಗಾ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇನ್ ಕೆಮಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಪಡೆದಿದ್ದು ವಿಶೇಷ.


ಡಾ. ಎಸ್. ವಿಜಯ್ ಕುಮಾರ್ ಅವರು ಎಂಟೆಕ್ ಸ್ನಾತಕೋತ್ತರ ಪದವಿಯನ್ನು ಇಂಡಸ್ಟ್ರಿಯಲ್ ಪೊಲ್ಲ್ಯೂಷನ್ ಕಂಟ್ರೋಲ್ ಎಂಬ ಸ್ಪೆಷಲೈಸೇಶನ್ ವಿಷಯದಲ್ಲಿ ಸೂರತ್ಕಲ್ ನಲ್ಲಿರುವ ಈ ಹಿಂದೆ ಕೆಆರ್ ಇಸಿ ಎಂದು ಪ್ರಖ್ಯಾತಿ ಹೊಂದಿದ್ದಂತಹ ಎನ್ಐಟಿಕೆ ಸಂಸ್ಥೆಯಲ್ಲಿ ಪದವಿ ಪಡೆದು ಇದೇ ರೀತಿ ಉನ್ನತ ವ್ಯಾಸಂಗವನ್ನು ಮುಂದುವರಿಸಿದರು.


ಡಾ. ಎಸ್. ವಿಜಯ್ ಕುಮಾರ್ ಅವರು ರಾಜ್ಯದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಭಾಗದ ಪ್ರೊ. ಕೆ.ವಿ. ಪೈ ** ರವರ ಮಾರ್ಗದರ್ಶನದಲ್ಲಿ  ಸಂಶೋಧನಾ ಕ್ಷೇತ್ರಕ್ಕೆ ನಿರಂತರವಾಗಿ ಕ್ರಿಯಾಶೀಲತೆಯಿಂದ ಅಧ್ಯಯನ ಮಾಡಿದ ಡಾ. ಎಸ್. ವಿಜಯ್ ಕುಮಾರ್ ಅವರಿಗೆ ಪಿಎಚ್.ಡಿ  ಪದವಿ ಲಭಿಸಿದ್ದು, ಇವರಿಗೆ ಇನ್ನೊಂದು ಉನ್ನತ ಮಟ್ಟಕ್ಕೆ ಹೋಗಲು ಸದವಕಾಶವು ಒದಗಿ ಬಂದಿದ್ದು  ಅದೃಷ್ಟ ಹೇಳಬಹುದು.


* ಉಪನ್ಯಾಸಕರಾಗಿ, ನಾನಾ ಹುದ್ದೆಗಳಲ್ಲಿ ಸುದೀರ್ಘ ಸೇವೆ:

ಡಾ. ವಿಜಯಕುಮಾರ್ ಎಸ್ ಅವರು ದಿನಾಂಕ 27.12.1993ರಂದು ತಾಂತ್ರಿಕ ಶಿಕ್ಷಣ ಇಲಾಖೆಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಉಪನ್ಯಾಸಕನಾಗಿ ಸೇವೆಗೆ ಸೇರಿ ತಾಂತ್ರಿಕ ಶಿಕ್ಷಣ ಇಲಾಖೆಯ ನಾನಾ ಹುದ್ದೆಗಳಾದ ಉಪನ್ಯಾಸಕರಾಗಿ, ವಿಭಾಗಾಧಿಕಾರಿ, ಕೆಮಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಂಶುಪಾಲರು (ಗ್ರೇಡ್-1), ಪ್ರಾಂಶುಪಾಲರು (ಗ್ರೇಡ್-II) ಇನ್ನೂ ಬೆಂಗಳೂರು ನಗರದ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ನ ಸಹಾಯಕ ನಿರ್ದೇಶಕರಾಗಿ, (ಸಿಇಸಿ) ಉಪನಿರ್ದೇಶಕರಾಗಿ (ಯೋಜನೆ), ಜಂಟಿ ನಿರ್ದೇಶಕರಾಗಿ (ಸಿಡಿಸಿ), ಜಂಟಿ ನಿರ್ದೇಶಕರಾಗಿ (ತನಿಖೆ) ಕಾರ್ಯನಿರ್ವಹಿಸಿ ಅನೇಕ ಕಾನೂನು ತೊಡಕುಗಳಿಂದ ಹಿಂಬಡ್ತಿಗೊಂಡು ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಆಯ್ಕೆ ಶ್ರೇಣಿ ಉಪನ್ಯಾಸಕನಾಗಿ ಮತ್ತು ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ 60 ವರ್ಷಗಳ ವಸಂತ ಕಾಲವನ್ನು ಮುಗಿಸಿರುವುದರಿಂದ ಇದೇ ತಿಂಗಳು  31ರಂದು ವಯೋನಿವೃತ್ತಿ ಹೊಂದುತ್ತಿರುವುದು ತುಂಬಾ ದಕ್ಷತೆಯ ಒಳ್ಳೆಯ ಅಧಿಕಾರಿಯನ್ನು ಮೀಸ್ ಮಾಡಿಕೊಳ್ಳುತ್ತಿರುವ ನಗರದ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಗೆ ಎಂದರೆ ತಪ್ಪಾಗಲಾರದು.


* ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ಸೇವೆ:

ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ 33 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಇಂದು ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯ  ಪ್ರಾಂಶುಪಾಲರಾಗಿ ಸೇವಾ ನಿವೃತ್ತಿ ಹೊಂದುತ್ತಿರುವ ಶ್ರೀ ಡಾ. ಎಸ್. ವಿಜಯ್ ಕುಮಾರ್ ಅವರ ಸೇವಾ ನಿವೃತ್ತಿ ಈ ಹಿನ್ನೆಲೆಯಲ್ಲಿ ಅಭಿನಂದನಾ ಸಂಭ್ರಮವನ್ನು 

 ನಗರದ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆ (ಬೆಂಗಳೂರು) ವಿದ್ಯಾರ್ಥಿಗಳ ಶ್ರಮಿಕರಾದ ಡಾ. ಎಸ್. ವಿಜಯ್ ಕುಮಾರ್ ಅವರು ಸದಾಕಾಲವೂ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಹೆಮ್ಮೆಯ ಪ್ರಾಂಶುಪಾಲರ ಇವರ ಸೇವಾ ನಿವೃತ್ತಿ ಅಭಿನಂದನಾ ಸಂಭ್ರಮವು ವಿಶೇಷವಾಗಿ ನಡೆಯಿತು.


* ಡಾ. ಎಸ್. ವಿಜಯ್ ಕುಮಾರ್ ಅವರು  ವಿದ್ಯಾರ್ಥಿಗಳ ಬೆನ್ನೆಲುಬು ಇದ್ದಂತೆ:

ಇವರ ಅವಧಿಯಲ್ಲಿ ಹಲವಾರು ಹಳ್ಳಿ ಪ್ರದೇಶದಿಂದ ಬಂದತಂಹ ವಿದ್ಯಾರ್ಥಿಗಳು ಹಾಗೂ ಬಡ ವಿದ್ಯಾರ್ಥಿಗಳು ಬೆನ್ನೆಲುಬು ಮತ್ತು ಎಲ್ಲಾ ರೀತಿಯ ಸಹಾಯ-ಸಹಕಾರ ವಿಶೇಷವಾಗಿ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆ (ಬೆಂಗಳೂರು) ಎಲ್ಲಾ ವಿದ್ಯಾರ್ಥಿ ಸಮೂಹಕ್ಕೆ ಸಕಲ ರೀತಿಯ ವಿದ್ಯಾರ್ಥಿಗಳ ಅತ್ಯುತ್ತಮ ಚೇತನರಾದ ಡಾ. ಎಸ್. ವಿಜಯ್ ಕುಮಾರ್ ಅವರು ಜಿಐಪಿಟಿ ಸಂಸ್ಥೆಗೆ ಮೇರು ಶಿಖರ ಇದ್ದಂತೆ ಇವರ ಅವಧಿಯಲ್ಲಿ ಹಲವಾರು ವಿನೂತನ ವಿದ್ಯಾರ್ಥಿ ಸಮೂಹಕ್ಕೆ ಹಾಗೂ ಬೋಧಕ-ಬೋಧಕೇತರ ವರ್ಗದವರ ಅಭಿವೃದ್ಧಿಗೋಸ್ಕರ ಹಲವಾರು ಕೆಲಸ ಕಾರ್ಯಗಳನ್ನು ಕಾರ್ಯಗತಗೊಳಿಸಿದ ಹೆಮ್ಮೆಯ ಆಡಳಿತಗಾರರಾಗಿದ್ದಾರೆ. ಸಾಕಷ್ಟು ಸಮಗ್ರ ಬೆಳವಣಿಗೆಯಲ್ಲಿ ತಾವು ಸಹಾಯಹಸ್ತ ವಿದ್ಯಾರ್ಥಿಗಳ ನೈತಿಕ ಬೆಳವಣಿಗೆಯಲ್ಲಿ ಪಾತ್ರವಹಿಸಿದ್ದು ಅದ್ಭುತವಾದದ್ದು.


* ಹೋರಾಟ, ಚಳುವಳಿಗಳಲ್ಲಿ ಸಕ್ರಿಯ ಸೇವೆ:

ಡಾ. ವಿಜಯಕುಮಾರ್ ಎಸ್ ಅವರು ಇಷ್ಟು ವರ್ಷಗಳ ಕಾಲ ನಮ್ಮಗಳ ಮಧ್ಯ ಜೊತೆಗೂಡಿ ದಿನಗಳನ್ನು ಕಳೆದಿದ್ದು, ಅನೇಕ ಸಂಘಟನೆಗಳ ಜೊತೆಗೂಡಿ ಶೋಷಿತ ಸಮುದಾಯದ ಪರವಾಗಿ ಹೋರಾಟದಲ್ಲಿ ಸಕ್ರಿಯವಾಗಿ ಸೇವೆ ಸಲ್ಲುತ್ತಾ ಅವರು ಸದಾಕಾಲವೂ ಸಹಾಯ ಹಸ್ತ ನೀಡುವ ಮೂಲಕ ಅಭಿಮಾನ ಹೊಂದಿದ್ದಾರೆ.


* ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯಲ್ಲಿ ಅವಿಸ್ಮರಣೀಯ ಸೇವೆ:

ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ 

 ಅವಿಸ್ಮರಣೀಯ ಸೇವೆಯನ್ನು ಸಹ ನಸೆಳೆದು ನಿರ್ವಹಣೆ ಮಾಡಿದ್ದಾರೆ. ಇನ್ನೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ 1995ರಲ್ಲಿ ಕರ್ನಾಟಕ ರಾಜ್ಯ  ತಾಂತ್ರಿಕ ಶಿಕ್ಷಣ ಇಲಾಖೆ ಎಸ್ಸಿ ಎಸ್ಟಿ ನೌಕರರ ಒಕ್ಕೂಟವನ್ನು ಸ್ಥಾಪಿಸಿ ಅನೇಕ ಹೋರಾಟ, ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಅದೇ ಇಲಾಖೆಯಲ್ಲಿ ಮುಂಬಡ್ತಿ ನೀಡುವಾಗ ರೋಸ್ಟರ್ ಬಿಂದುಗಳನ್ನು ಕಡ್ಡಾಯವಾಗಿ ಅನುಸರಿಸಿ ಮುಂಬಡ್ತಿ ನೀಡುವಂತೆ ಒತ್ತಾಯಿಸಿ ಅದರಲ್ಲಿ ಯಶಸ್ಸು ಕಂಡಿದ್ದು ಅತಿದೊಡ್ಡ ಅವಿಸ್ಮರಣೀಯವಾದದ್ದು,


* ಬ್ಯಾಕ್ ಲಾಗ್ ಹುದ್ದೆಗಳಿಗಾಗಿ ಹೋರಾಟ:

ರಾಜ್ಯದ ಎಲ್ಲಾ ಪಾಲಿಟೆಕ್ನಿಕ್ ಗಳಲ್ಲಿ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹಿಂಬಾಕಿ ಉಳಿಸಿಕೊಂಡು ಬಂದಿದ್ದ ರಾಜ್ಯದ ಸರ್ಕಾರವು ನಮ್ಮ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಹೋರಾಟದ ಕಿಚ್ಚು ಹಚ್ಚಿದ ಕೀರ್ತಿ ಇವರಿಗೆ ಸಲ್ಲುತ್ತದೆ.


* ಕೆ.ಆರ್. ಸರ್ಕಲ್ ಬಳಿ ಧರಣಿ:

ರಾಜ್ಯದ ಸರ್ಕಾರದ ನಾನಾ ಇಲಾಖೆಯಲ್ಲಿ ನೇರ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಮೀಸಲಾತಿಯನ್ನು ಪಾಲಿಸುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಯಾವುದೇ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ಹಾಗೂ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದಿದ್ದಾಗ ಇಲಾಖೆಯ ವಿರುದ್ಧ ಕೆ.ಆರ್. ಸರ್ಕಲ್ ನಲ್ಲಿ ಒಂದು ದಿನದ ಧರಣಿ ಮುಷ್ಕರವನ್ನು ಹೂಡಿದ್ದು ಇತಿಹಾಸ ಚರಿತ್ರೆಗಳ ಪುಟಕ್ಕೆ ಸೇರ್ಪಡೆಯಾಗಿದೆ.


*  ಬಿ.ಕೆ. ಪವಿತ್ರ ಪ್ರಕರಣದ ಮುಂಚೂಣಿ:

ಡಾ. ವಿಜಯಕುಮಾರ್ ಎಸ್ ಅವರು ತಮ್ಮ ವೃತ್ತಿ ಜೀವನದ ಬಹುಮುಖ್ಯವಾಗಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸಂದರ್ಭದಲ್ಲಿ ಬಿ.ಕೆ. ಪವಿತ್ರ ಪ್ರಕರಣದಲ್ಲಿ ಬಹಳಷ್ಟು ಮುಂಚೂಣಿಯಲ್ಲಿ ಮೇಲಿನ ಎಲ್ಲಾ ಹೋರಾಟಗಳ ಮಜಲುಗಳನ್ನು ಮುಂದುವರಿಸುತ್ತಾ ಸಕ್ರಿಯವಾದ ತಮ್ಮ ತನು ಮನ ಅರ್ಪಿಸಿಕೊಂಡು ದುಡಿದಿದ್ದಾರೆ ಎಂಬುದು ಅಕ್ಷರ ಸಹ ಸತ್ಯವಾದದ್ದು.


* ಕಾನೂನು ಹೋರಾಟದಲ್ಲಿ ಮೇರು ಶಿಖರ:

ಡಾ. ವಿಜಯಕುಮಾರ್ ಎಸ್ ಅವರು ವೃತ್ತಿಯಲ್ಲಿ ಇದ್ದುಕೊಂಡು ಕರ್ನಾಟಕ ರಾಜ್ಯ ಸರ್ಕಾರದ ನಾನಾ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿಗಳನ್ನು ಸಲ್ಲಿಸಿಸುತ್ತಾ  ಹಾಗೆ ಅದರ ಪೂರಕವಾದ ಎಲ್ಲಾ ಸಮಸ್ಯೆಗಳನ್ನು ಪೂರಕವಾಗಿ ಬಗೆಹರಿಸಲು ಕಾನೂನು ರೀತಿಯ ಹೋರಾಟವನ್ನು ಎಲ್ಲರನ್ನು 

ಜೊತೆಗೂಡಿ ಎಲ್ಲರಿಗೂ ಮೆಚ್ಚುಗೆ ಪಡೆಯುವಂತೆ ನಿರ್ಧಾರ ಕೈಗೊಂಡಿದ್ದು ಅದೃಷ್ಟ ಎಂದರೆ ತಪ್ಪಾಗಲಾರದು.


ಕೊನೆಯದಾಗಿ ಅದು ಏನೇ ಇರಲಿ ಡಾ. ಎಸ್. ವಿಜಯ್ ಕುಮಾರ್ ಅವರು ಮಾಡಿದ ಸೇವೆಯನ್ನು ಮುಂದಿನ ದಿನಗಳಲ್ಲಿ ಅದೆಷ್ಟು ಬೇಗನೆ ರಾಜ್ಯ/ಕೇಂದ್ರ ಸರ್ಕಾರವು ಡಾ. ಎಸ್. ವಿಜಯ್ ಕುಮಾರ್ ಅವರ ಸೇವಾ ಮನೋಭಾವವನ್ನು ನಿಸ್ವಾರ್ಥ ಸೇವೆಗಾಗಿ ಸಲ್ಲಿಸಿದ ರಾಜ್ಯದ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಗೆ ಬೋರ್ಡ್‌ ಮೆಂಬರ್ ಅಥವಾ ಆಡಳಿತಾತ್ಮಕ ಹುದ್ದೆಗಳಿಗೆ ಡಾ. ಎಸ್. ವಿಜಯ್ ಕುಮಾರ್ ಅವರನ್ನು ಆಯ್ಕೆಗೆ ಪರಿಗಣಿಸಬೇಕೆಂಬುದು ಇದರಿಂದಾಗಿ ಈ ಸಂಸ್ಥೆಗಳಿಗೆ ಇನ್ನಷ್ಟು ಹೆಚ್ಚಾಗಿ ಅಭಿವೃದ್ಧಿ ಪರ್ವ ಮಾಡುವ ನಿರೀಕ್ಷೆ ಇದ್ದೇ ಇರುತ್ತದೆ.


ಬಾಕ್ಸ್1:

ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಗೆ ಬರುವ ಪ್ರತಿಯೊಬ್ಬರು ಅಧ್ಯಯನ ಸಲುವಾಗಿ ಹಳ್ಳಿಗಾಡಿನಿಂದ ಕೆಲ ನಗರ ಪ್ರದೇಶಗಳಿಂದ ವಿದ್ಯಾರ್ಥಿಗಳಿಗೆ ಪ್ರವೇಶದ ಶುಲ್ಕ ಮತ್ತು ಪರೀಕ್ಷೆದ ಶುಲ್ಕ ಮತ್ತಿತರ ಸಹಾಯವನ್ನು ಸದಾ ವಿದ್ಯಾರ್ಥಿಗಳ ಪೂರ್ವಕವಾದ ಬೆಳವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಕೊಂಡಿದ್ದು, ಹಲವಾರು ವಿದ್ಯಾರ್ಥಿಗಳ ಸಮೂಹಕ್ಕೆ ನೀಡಿದ ಸಹಾಯ ಮರೆಯಲು ಸಾಧ್ಯವಿಲ್ಲ.


ವರದಿ : ಡಾ. ವಿಲಾಸ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಶೇಗುಣಶಿ 

ತಾ :ಅಥಣಿ 

ಜಿ : ಬೆಳಗಾವಿ 

ಮೋ: 9591782353

Image Description

Post a Comment

0 Comments