ಜನಸೇವೆಯಲ್ಲಿ 4399 ದಿನಗಳ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ ಪ್ರಧಾನಸೇವಕ
ಬೆಂಗಳೂರು: ಜೂ.11: ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಹೊಸ ದಾಖಲೆ ಬರೆದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸುವುದರ ಜೊತೆಗೆ ಬಿಟಿಎಂ ವಿಧಾನಸಭಾ ಕ್ಷೇತ್ರದ ಹಳೆ ಮಡಿವಾಳದಲ್ಲಿರುವ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಪಂಚಾಮೃತ ಸೇವೆಯನ್ನ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಮಾನ್ಯ ವಿಧಾನಪರಿಷತ್ ಸದಸ್ಯರಾದ ಶ್ರೀ ಗೋಪಿನಾಥ್ ರೆಡ್ಡಿ ರವರು, ನಿಕಟಪೂರ್ವ ಅಭ್ಯರ್ಥಿಗಳಾದ ಶ್ರೀಧರ್ ರೆಡ್ಡಿ ರವರು, ಮಂಡಲ ಅಧ್ಯಕ್ಷರಾದ ಬಿ. ಸುರೇಶ್ ರವರು, ಟಿಕೆಆರ್ ಎ ಗ್ರೂಪ್ಸ್ ಮಾಲೀಕರು ಹಾಗೂ ಮುಖಂಡರಾದ ದೀಪಕ್ ರಾಜು ರವರು ಎಲ್ಲಾ ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತರು, ಮತ್ತಿತರರು ಪಾಲ್ಗೊಂಡು ಸಿಹಿ ಹಂಚಿ ಸಂಭ್ರಮಿಸಲಾಯಿತು.
ವರದಿ : ಡಾ. ವಿಲಾಸ ಕಾಂಬಳೆ
ದೇಹ ದಾನಿಗಳ ಗ್ರಾಮ
ಶೇಗುಣಶಿ
ಮೋ: 9591782353


.gif)

.gif)


0 Comments