*ಭಂಡಾರದ ಒಡೆಯ*

 *ಭಂಡಾರದ ಒಡೆಯ*



ಭಕ್ತಿಯ ಬೆಳಕಿನೊಳು ಹೊಳೆಯುವ ಯಲ್ಪಾರಟ್ಟಿ ಪುಣ್ಯ ತಾಣ,

ಈ ಪುಣ್ಯದ ಮಣ್ಣೊಳು ನಿನದಿಸುವ ಸಿದ್ಧನ ದಿವ್ಯ ಕೀರ್ತಿಗಾನ।

ಹರಕೆ ಹೊತ್ತು ಬಂದ ಹೃದಯಕೆ ಕರುಣೆಯ ಮಳೆ ಸುರಿವ ದೈವ,

ಅರಣ್ಯ ಸಿದ್ಧನ ನೆರಳಲಿ ಅರಳುವುದು ಭಕ್ತರ ಜೀವ ವೈಭವ॥

ಭಂಡಾರದ ಒಡೆಯ ಭಕ್ತರ ಪಾಲಿನ ಕಾಮಧೇನು ದಿವ್ಯನಾಮ,

ಬೇಡಿದ ಇಷ್ಟಾರ್ಥ ಪೂರೈಸುವ ಸಿದ್ಧನ ಪಾದದಿ ಭಕ್ತ ಪ್ರಣಾಮ।

ಮೃಷ್ಟಾನ್ನ ಹಂಚಿದ ಮನದಲಿ ಅನ್ನಪೂರ್ಣೆಯ ಕರುಣೆ ನೆಲೆ,

ಸಿದ್ಧನ ಅನುಗ್ರಹವಿದ್ದ ಮನಕೆ ಕೊರತೆ ಎಂಬುದು ಎಂದೂ ಸೊಲ್ಲೆ॥

ಶಿವರಾತ್ರಿ ಸಂಭ್ರಮದ ಬಳಿಕ ಜಾತ್ರೆಯ ವೈಭವ ಹೊಳೆಯುತಿಹುದು,

ದೀರ್ಘ ದಂಡ ನಮಸ್ಕಾರದಿ ಭಕ್ತರ ಹರಕೆ ಫಲಿಸುತಿಹುದು।

“ಅರಣ್ಯ ಸಿದ್ಧಗೋ ಚಾಂಗ್ ಬೋಲೋ” ಘೋಷದಿ ಗುಡಿ ಗಗನ ಮುಟ್ಟೇ,

ಹಳದಿ ಭಂಡಾರ ಹಾಸಿದಂತೆ ಭಕ್ತಿಯ ಸಾಗರ ಕಣ್ಣು ತಟ್ಟೇ॥

ರವಿವಾರದ ಅಂಬಲಿ ರುಚಿಯಲಿ ದಾಸೋಹ ಧರ್ಮ ಅರಳುವುದು,

ಗುರುವಾರ ಸಿದ್ದನ ಸನ್ನಿಧಿಯಲ್ಲಿ ಮನದ ನೋವು ಕರಗುವುದು।

ನವೀಕೃತ ಗುಡಿಯ ಕಂಗಳೊಳಗೆ ನಂಬಿಕೆಯ ದೀಪ ಬೆಳಗೇ,

ಯಲ್ಪಾರಟ್ಟಿ ಸಿದ್ಧನ ಮಹಿಮೆಯು ಯುಗಯುಗಗಳಿಗೂ ಜಗದೊಳಗೆ ಬೆಳಗೇ॥


ಕವಿ:ಡಾ. ಜಯವೀರ ಎ.ಕೆ.

    ಖೇಮಲಾಪುರ

Image Description

Post a Comment

0 Comments