ಅಮೃತದ ಸವಿ
ನಿಂಬೆ ಹಣ್ಣಿನಂತವಳೆ
ಎರಡು ಜಡೆಯವಳೆ I
ಸಣ್ಣ ನಡುವಿನವಳೆ
ತುಂಟ ನಗುವಿನವಳೆ II
ಚಂದದ ಅರಗಿಣಿಯಂತವಳೆ
ಸೌಂದರ್ಯದ ಗಣಿಯವಳೆ |
ಹೊಕ್ಕಳ ಸುಂದರಿಯಂತವಳೆ
ಸುಂದರ ವದನ ಹೊತ್ತವಳೆ II
ಮನ್ಮಥನಂದದ ರತಿಯೆ
ದೆರೆಗಿಳಿದ ರೂಪಸಿಯೇ|
ಮೀನಿನಂಥ ಕಣ್ಣಿನವಳೆ
ತುಟಿಯಂಚಲಿ ಮದು ತೊಟ್ಟವಳೆ II
ಕೆನೆ ಹಾಲಿನಂತಿರುವವಳೆ
ಕುಡಿನೋಟದಿ ಸೆಳೆಯುವಳೆ I
ನನ್ನೊಳಗೆ ಮಿಲನವಾದವಳೆ
ಶೃಂಗಾರದಿ ಅಮೃತ ಕುಡಿಸಿದವಳೇ II
✍️Jk ಬಸವರಾಜು ಜಯಪುರ II 🌱

.gif)

.gif)


0 Comments