*ಸಾಧಕ ಪ್ರತಿಭಾವಂತ ವಿದ್ಯಾರ್ಥಿನಿ ಕು. ಪ್ರೀತಿ ಸಂಕೋನಟ್ಟಿಗೆ ಗೌರವ ಸಮ್ಮಾನ*

 *ಸಾಧಕ  ಪ್ರತಿಭಾವಂತ ವಿದ್ಯಾರ್ಥಿನಿ ಕು. ಪ್ರೀತಿ  ಸಂಕೋನಟ್ಟಿಗೆ ಗೌರವ ಸಮ್ಮಾನ*



ರಾಯಬಾಗ:ತಾಲೂಕಿನ ಸಿದ್ದಾಪುರ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇತ್ತೀಚಿಗೆ ಚಿಕ್ಕೂಡ ಸರಕಾರಿ ಪ್ರೌಢಶಾಲೆಯಲ್ಲಿ  ವಿದ್ಯಾಬ್ಯಾಸ ಪೂರೈಸಿದ ಸುಕ್ಷೇತ್ರ  ಖೇಮಲಾಪುರದ ಸಾಧಕ ಪ್ರತಿಭಾವಂತ ವಿದ್ಯಾರ್ಥಿನಿ,  ಕೃಷ್ಣಾ ತೀರದ ಕುವರಿ, ಕು. ಪ್ರೀತಿ ಧರೆಪ್ಪ ಸಂಕೋನಟ್ಟಿ ಕಳೆದ  ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  ಶೇ 95% ರಷ್ಟು ಅಂಕಗಳನ್ನು ಪಡೆದ ಪ್ರಯುಕ್ತ ಶಾಲೆಯ ಮುಖ್ಯೋಪಾಧ್ಯಾಯರಾದ  ಶ್ರೀ ವಿ ಪಿ ಗಲಗಲಿ ಅವರು ವೈಯಕ್ತಿಕವಾಗಿ ನೀಡಿದ 10 ಸಾವಿರ ನಗದನ್ನು ಆಗಮಿಸಿದ ಉಪಸ್ಥಿತ ಗಣ್ಯರು  ವಿತರಣೆ ಮಾಡಿ ಶಾಲು ಹೊದಿಸಿ ಸತ್ಕರಿಸಿ ಗೌರವಿಸಿದರು. ಕು. ಪ್ರೀತಿ ಧರೆಪ್ಪ ಸಂಕೋನಟ್ಟಿ ಸಿದ್ದಾಪುರ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು ಗಮನಾರ್ಹ.


ಇದೇ ಸಂದರ್ಭದಲ್ಲಿ ಎಲ್ ಕೆ ಜಿ ಹಾಗೂ ಯು ಕೆ ಜಿ ಮಕ್ಕಳಿಗೆ ಶೈಕ್ಷಣಿಕ ಕಿಟ್ ಹಾಗೂ ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ 1111 ರೂಪಾಯಿ ಬಾಂಡ್ ಹಾಗೂ  ಶೈಕ್ಷಣಿಕ ಕಿಟ್ ವಿತರಣೆ ಮಾಡಲಾಯಿತು. ಪ್ರಸಕ್ತ ವರ್ಷದಲ್ಲಿ ಸರಕಾರಿ ನೌಕರಿ ಗಿಟ್ಟಿಸಿಕೊಂಡ ಸ್ಥಳೀಯ ಈ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು , ಈ ಶಾಲೆಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರನ್ನು ಗಣ್ಯ ಮಹೋದಯರು  ಶಾಲು ಹೊದಿಸಿ ಸತ್ಕರಿಸಿ ಗೌರವಿಸಿದರು.


ಶಾಲೆಯ ಭೂದಾನಿಗಳಾದ ಚೇತನ ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಿ ಆರ್ ಪಿ ಲಕ್ಷ್ಮಿಕಾಂತ    ಬಿಸ್ವೆಗಾರ  ಪ್ರಸ್ತಾವಿಕ ನುಡಿಯಾಡಿದರು.  ಶಾಲೆಯ ಮುಖ್ಯೋಪಾಧ್ಯಾಯರಾದ  ಶ್ರೀ ವಿ ಪಿ ಗಲಗಲಿ,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮೌಲಾಸಾಹೇಬ ಚಿಂಚಲಿ, ಎಸ್ ಡಿ ಎಂ ಸಿ ಅಧ್ಯಕ್ಷ ರಾವಸಾಬ ಅರಗಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ  ಶ್ರೀಧರ ಚೌಗಲಾ, ಸಿ ಆರ್ ಪಿ ಪರಗೌಡ ಕಾಂಬಳೆ ಹಿರಿಯ ಶಿಕ್ಷಕ ಕುಶಾಲ ಮಾದರ ಸಿದ್ದಾಪುರ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಮಹಾದೇವ ಚೌದರಿ ಹಾಗೂ ಖೇಮಲಾಪುರ ಕ್ಲಸ್ಟರಿನ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕ ಮಹಾದೇವ ಮಠಪತಿ ನಿರೂಪಿಸಿದರು.


ವರದಿ:ಡಾ. ಜಯವೀರ ಎ. ಕೆ.

      ಖೇಮಲಾಪುರ

Image Description

Post a Comment

0 Comments