## ಸಖಿ ##

 ## ಸಖಿ ##



ನೋಡಲಾಗದು ನನಗೆ ನಿನ್ನ ಬಾಡಿದ ಮೊಗವ;

ಕರಗಿ ಹೋಗಿದೆ ಶಕುತಿ ಅರಿಯದೆ ನಿನ್ನೆದೆಯ ಭಾವ.


ಮನದನ್ನೆ ನೀನು ಮುದುಡಿ ಕೂತಿರಲು ನನಗೇನು ಸೊಗಸು;

ಬಿಚ್ಚಿ ಹೇಳಬಾರದೆ ಪಣಕಿಟ್ಟಿರುವೆ ನಿನಗಾಗಿ ನನ್ನ ಮನಸು.


ನಸುನಗುವ ಆ ನಿನ್ನ ಸಿರಿಮೊಗವು ಸೆರೆಹಿಡಿದಿತ್ತು ಆ ದಿನ ಸುದಿನ;

ಬಿಟ್ಟಿರಲಾಗದೆ ಪ್ರೇಮ ರಸದ ಕಟ್ಟೆಯೊಡೆದು ಹರಿಯಿತು ಪ್ರತಿದಿನ.


ಸುಳ್ಳಲ್ಲ, ನನ್ನ ಕನಸುಗಳಿಗೆಲ್ಲ ನೀನಲ್ಲವೆ ಯಜಮಾನಿ ?

 ಏತಕೆ ಭಯ? ಪಡಬೇಡ ನೀನು ಒಂದಿಷ್ಟೂ ಗುಮಾನಿ.


ಕೇಳೆ ಸಖಿ,ಪ್ರೀತಿ ಎಂಬುದು ಜೀವಲೋಕದ ಅಮೃತ;

ನೆಚ್ಚಿ ಬದುಕು, ಲೋಕದೊಳು ಇದುವೆ ಶಾಶ್ವತ!



ರಾಚು ಎಸ್. ಕೊಪ್ಪಾ ಬಂಥನಾಳ

Image Description

Post a Comment

0 Comments