🌹*ಗಜ಼ಲ್*🌹

 🌹*ಗಜ಼ಲ್*🌹



ಚುಂವ್ ಚುಂವ್ ಎನ್ನುತ್ತ ಹಾಡು ನೀ ಗುಬ್ಬಿ ಕಬ್ಬಿಗನ ಎದೆಯಲಿ ಸ್ಥಳವಿಹುದು

ಪುಟ್ಟ ಪುಟ್ಟ ಹೆಜ್ಜೆಯ ಹಾಕುತ ಬಾ ಬಾ ಕಾದಲನ ಎದೆಯಲಿ ಸ್ಥಳವಿಹುದು


ನೇಸರ ರಶ್ಮಿಯ ಕಾಂತಿಯು ಬೇಡವೇ ಗೂಡಿನ ಆಶ್ರಯ ತೊರೆಯುತ ಬಾ

ಬೇಸರ ಇಲ್ಲ ನಿನ್ನಯ ಆಟದಿ ರಸಿಕನ ಎದೆಯಲಿ ಸ್ಥಳವಿಹುದು


ಕಾಳು ಬೀಜಗಳ ಹೆಕ್ಕುತ ತಿನ್ನುತ ಉದರ ಭೂಪನನು ನೀ ಆಧರಿಸಿದೆ

ಪಾಳು ಮನೆಯಲಿ ತಂಗಲು ಬೇಡ ಕೃಷಿಕನ ಎದೆಯಲಿ ಸ್ಥಳವಿಹುದು


ಚಿಕ್ಕ ಕಾಯವನು ಪಡೆದರು ಸರಿಯೇ ಗರಿಮೆಯ ಕಾಯಕ ಯೋಗಿಯು ನೀ

ಬೀಜ ಪರಾಗಗಳ ಪಸರಿಸು ಬಾ ಬಾ ಮಹಂತನ ಎದೆಯಲಿ ಸ್ಥಳವಿಹುದು


ಪರಿಸರ ಮಾಲಿನ್ಯಕೆ ಜಂಗಮ ತರಂಗಕೆ ಮರೆಯಾದೆ ನೀ ಎಮ್ಮನು ತೊರೆದು

ಭುವಿಯನು ಕಾಪಲು ಒಡನೆಯೇ ನೀ ಬಾ ಕುಮಾರನ ಎದೆಯಲಿ ಸ್ಥಳವಿಹುದು


🎸ಸುಕುಮಾರ

Image Description

Post a Comment

0 Comments