*ರಣಬಿಸಿಲಿನ ರೌದ್ರನಾಟ್ಯ*

 *ರಣಬಿಸಿಲಿನ ರೌದ್ರನಾಟ್ಯ* 




ನೆತ್ತಿ ಸುಡುವ ರವಿ ದಾಹ,

ಬೆವರ ಹೊಳೆಯಲಿ ಬದುಕು ವಾಹ,

ಬೇವಿನ ನೆರಳು ಜೀವದ ಚಾಹ,

“ಬಾರಯ್ಯ ಮಳೆಯೇ” ಜನರ ನಿಸ್ವಾಸ.

ಕಲ್ಲಂಗಡಿ ಸವಿ ತಂಪಿನ ಹಾದಿ,

ತಂಪು ಪಾನೀಯ ಜನರ ನಾದಿ,

ಸಂತೆ ವ್ಯಾಪಾರಿ ಬಿಸಿಗೆ ಬೇದಿ,

ಆಕಾಶ ನೋಡುವ ಕಣ್ಣಿನ ವೇದಿ.

ಹುಶ್ ಅಪ್ಪಾ! ವೃದ್ಧರ ಕೂಗು,

ಬಿಸಿಯ ಬಾಣಕೆ ದೇಹದ ನೋವು,

ನೆರಳ ಹುಡುಕುವ ಜನರ ಓಡು,

ವರಣನ ಕಾದು ಬದುಕಿನ ಹಾಡು.

ಮೋಡದ ಹೆಜ್ಜೆ ಎಲ್ಲಿದೆ ಹೇಳು?

ಭೂಮಿ ದಾಹಕೆ ಮಳೆಯನು

 ಕಳುಹು 

ರಣಬಿಸಿಲಿನ ರೌದ್ರವ ತಣಿಹು,

ಜೀವದ ನಗು ಮತ್ತೆ ಅರಳಿಹು.


ಕವಿ:ಡಾ. ಜಯವೀರ ಎ. ಕೆ.

      ಖೇಮಲಾಪುರ

Image Description

Post a Comment

0 Comments