*ಕಾವ್ಯ ಧಾರೆ* *ನನ್ನ ಕಾಲೇಜು*

 *ಕಾವ್ಯ ಧಾರೆ* 


   *ನನ್ನ ಕಾಲೇಜು* 



ನಿಸರ್ಗದ ಮಡಿಲಲಿ ನಿಂತ ಜ್ಞಾನದ ಮಂದಿರ,

ಕೆ ಎಲ್ ಇ ಕೀರ್ತಿಯಲಿ ಬೆಳಗಿದ ವಿದ್ಯಾಸಾಗರ,

ಶಿರಗುಪ್ಪಿ ನೆಲದಲಿ ಅರಳಿದ ಭವಿಷ್ಯದ ಅಕ್ಷಯಾಕರ.

ಸಿದ್ದೇಶ್ವರ ಶ್ರೀಗಳ ಕರಸ್ಪರ್ಶದ ಪಾವನ ತಾಣ,

ಪ್ರಾಚಾರ್ಯರ ನೇತೃತ್ವದಿ ಬೆಳಗಿದೆ ಜ್ಞಾನದ ವಿಹಾನ,

ಗುರುಗಳ ಮಾರ್ಗದರ್ಶನದಿ ವಿದ್ಯಾರ್ಥಿಗಳ ಸಾಧನೆ ಮಹಾನ್.

ಶ್ರದ್ಧೆಯ ಹೆಜ್ಜೆಯಲಿ ಸಾಗುವ ಗ್ರಾಮೀಣ ಪ್ರತಿಭೆಗಳು,

ನಿಷ್ಠೆಯ ಬೆಳಕಲಿ ಹೊಳೆಯುವ ವಿದ್ಯೆಯ ಕನಸುಗಳು,

ಗುರು–ಹೆತ್ತವರ ಕೀರ್ತಿಗೆ ಪಾತ್ರರಾಗುವ ಸಿರಿ ಮೊಗ್ಗುಗಳು.

ಪಠ್ಯ–ಪಠ್ಯೇತರ ಚಟುವಟಿಕೆಯಲಿ ಮೆರೆದ ಚೈತನ್ಯ,

ಸಾಧನೆಯ ಹಾದಿಯಲಿ ಅರಳಿದ ವಿದ್ಯಾರ್ಥಿ ವೈಭವ ಧನ್ಯ,

ಮನುಕುಲದ ನಂದಾದೀಪವಾಗಿ ಹೊಳೆಯುತಿದೆ ಯುವ ಜನ್ಯ.

ಜ್ಞಾನವನು ಬಿತ್ತಿದ ಗುರುಗಳ ದಿವ್ಯ ಸ್ಪರ್ಶದಿ,

ಸಂಸ್ಕಾರವನು ಕಲಿತ ವಿದ್ಯಾರ್ಥಿ ಹೃದಯದ ಹರ್ಷದಿ,

ಕಾಲೇಜಿನ ಕೀರ್ತಿ ಬೆಳಗುತ್ತಿದೆ ಸಾಧನೆಯ ಉತ್ಸಾಹದ ದೀಪದಿ.


ಕವಿ: ಡಾ. ಜಯವೀರ ಎ. ಕೆ.

        ಖೇಮಲಾಪುರ

Image Description

Post a Comment

0 Comments