*ನಾಳೆಯಿಂದ ಶ್ರೀ ದೇವಿ ಪುರಾಣ ಪ್ರವಚನ ಆರಂಭ*
ರಾಯಬಾಗ:ತಾಲೂಕಿನ ಸುಕ್ಷೇತ್ರ ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ನಾಳೆ ರವಿವಾರ ದಿ. 17 ರಿಂದ ಸೋಮವಾರ ದಿ. 25 ರ ವರೆಗೆ ಅಧಿಕ ಜೇಷ್ಠ ಮಾಸದ ನಿಮಿತ್ಯ ಜಗದ್ಗುರು ಶ್ರೀ ಗುರುದೇವ ಬ್ರಹ್ಮಾನಂದ ಮಹಾ ಶಿವಯೋಗಿಗಳ ಕೃಪಾಶೀರ್ವಾದದಿಂದ ಹಾಗೂ ಶ್ರೀ ಗುರುದೇವ ಸಿದ್ದೇಶ್ವರ ಮಹಾ ಶಿವಯೋಗಿಗಳ ಸಂಕಲ್ಪಶಕ್ತಿಯಂತೆ ಅವ್ಯಾಹತವಾಗಿ ನಡೆಯುತ್ತ ಬಂದಿರುವ ಶ್ರೀ ದೇವಿ ಪುರಾಣ ಪ್ರವಚನ ಕಾರ್ಯಕ್ರಮವು ಪ್ರತಿದಿನ ಸಾಯಂಕಾಲ 7 ರಿಂದ 9 ರವರೆಗೆ ಆಶ್ರಮದ ಪೀಠಾಧಿಪತಿಗಳು ಯುವ ಯತಿವರ್ಯರು ಚಿನ್ಮಯ ಚೇತನ ಶ್ರೀ ಸದ್ಗುರು ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಜಿ ಯವರು ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ಜಗಜ್ಜನನಿ ಜಗದೀಶ್ವರಿಯ ಲೀಲಾ ವೈಭವವನ್ನು ವರ್ಣಿಸುವ ಪ್ರವಚನ ದಯಪಾಲಿಸಲಿದ್ದಾರೆ. ಹಾಗೂ ಸರ್ವ ಸದ್ಭಕ್ತರಿಂದ ಪುರಾಣ ಪಠಣ ನಡೆಯಲಿದೆ.
ಮಂಗಳವಾರ ದಿ 26 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀದೇವಿಗೆ ಉಡಿ ತುಂಬುವ ಹಾಗೂ ನೈವೇದ್ಯ ಸಮರ್ಪಿಸುವುದು. ನಂತರ ಗ್ರಾಮದ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ತವರು ಮನೆ ಉಡುಗೊರೆ ಕಾರ್ಯಕ್ರಮ ನಡೆಯುವುದು. ನಂತರ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಲಗೊಳ್ಳುತ್ತದೆ ಎಂದು ಶ್ರೀ ಗುರುದೇವ ಬ್ರಹ್ಮಾನಂದ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments