ಸಮತೋಲಿತ ಆಹಾರ ಪದ್ಧತಿಯಿಂದ ಮಾತ್ರ ಮಾನಸಿಕ ಆರೋಗ್ಯ ವೃದ್ಧಿ: ಆಯುಷ್ ವೈದ್ಯಾಧಿಕಾರಿ ಡಾ. ಭವ್ಯ ಅಭಿಪ್ರಾಯ
ಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಇಂದಿನ ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆಗೆ ಅಧ್ಯತೆ ನೀಡಲಿ: ಆಯುಷ್ ವೈದ್ಯಾಧಿಕಾರಿ ಡಾ. ಭವ್ಯ
ಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಬೆಂಗಳೂರು: ಮೇ.12: ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಸಮತೋಲಿತ ಆಹಾರ ಪದ್ಧತಿಯಿಂದ ಮಾತ್ರ ಮಾನಸಿಕ ಆರೋಗ್ಯ ಮತ್ತು ಒತ್ತಡ ನಿರ್ವಹಣೆ ಕಡಿಮೆ ಮಾಡಲು ಸಾಧ್ಯ ಎಂದು ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಭವ್ಯ ಎಚ್.ಬಿ. ಅವರು ವಿಶೇಷ ಉಪನ್ಯಾಸದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕವು ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ಯುವಕ-ಯುವತಿಯರು ಮತ್ತು ಹಿರಿಯರು ಮುಖ್ಯವಾಗಿ ತಮ್ಮ ವೈಯಕ್ತಿಕ ಸ್ವಚ್ಛತೆ, ಸುತ್ತಮುತ್ತಲಿನ ಪರಿಸರ, ವ್ಯಾಯಾಮ ಮತ್ತು ಕ್ರೀಡಾ, ಮುನ್ನೆಚ್ಚರಿಕೆಯ ತಪಾಸಣೆಯ ಮೂಲಕ ಇವುಗಳನ್ನು ವಿಸ್ತೃತವಾಗಿ ಅರಿತುಕೊಂಡರೇ ಮಾತ್ರ ಜೀವನದಲ್ಲಿ ಸಮೃದ್ಧಿಗೆ ಸಾಕ್ಷಿ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಶಿಬಿರದಲ್ಲಿ ವಿಶೇಷ ಉಪನ್ಯಾಸದಲ್ಲಿ ಕಂಡು ಬಂದ ಪ್ರಮುಖವಾದ ಅಂಶಗಳಾದ ಸಮತೋಲಿತ ಆಹಾರ ಪದ್ದತಿಯಿಂದ ಹೇಗೆ ಮತ್ತು ನಮ್ಮ ನಮ್ಮ ಮಾನಸಿಕ ಆರೋಗ್ಯ ಮತ್ತು ಒತ್ತಡ ನಿರ್ವಹಣೆ ಯಾವ ರೀತಿಯಲ್ಲಿ ಕಡಿಮೆ ಮಾಡಬೇಕೆಂದು ಹಾಗೆಯೇ ಪ್ರತಿಯೊಬ್ಬರೂ ಕೂಡ ವೈಯಕ್ತಿಕವಾಗಿ ಸ್ವಚ್ಛತೆಗೆ
ಹೆಚ್ಚಿನ ಅಧ್ಯತೆ ನೀಡಬೇಕು. ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಪರಿಸರ, ವ್ಯಾಯಾಮ ಮತ್ತು ಕ್ರೀಡೆ, ಮುನ್ನೆಚ್ಚರಿಕೆ ಮತ್ತು ತಪಾಸಣೆ ಮಾಡಬೇಕು ಇವುಗಳ ಬಗ್ಗೆ ವಿಸ್ತೃತವಾಗಿ ತಿಳಿಸಿ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ಅರಕೆರೆ ವೆಂಕಟೇಶ್, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಬಸವಯ್ಯ , ಪ್ರೊ. ನಾಗೇಶ್ ಪಿ.ಸಿ, ಡಾ. ರಮೇಶ ಎಚ್. ಕಿತ್ತೂರು, ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಭವ್ಯ ಎಚ್.ಬಿ, ಯೋಗ ತರಬೇತಿದಾರ ಮತ್ತು ರಂಗಭೂಮಿ ಕಲಾವಿದೆ ಶ್ರೀಮತಿ ಶಿವಕುಮಾರಿ, ನಿರ್ದೇಶಕರು ಹಾಗೂ ಸಂಶೋಧಕರಾದ ಬಿಡದಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶೇಷಾದ್ರಿ ಜಿ.ಸಿ, ಪ್ರೊ. ಚಂದ್ರಶೇಖರ್ ಜೆ.ಕೆ, ಪ್ರೊ. ಸೌಮ್ಯ ಜಿ, ವಿದ್ಯಾರ್ಥಿ ಮುಖಂಡ ಚೇತನ್ ಬೇಲೂರು, ಶಿಬಿರದ ಸಂಯೋಜಕ ಡಾ. ಚಂದ್ರಶೇಖರ್ ಸಹ ಸಂಯೋಜಕ ಪ್ರೊ. ನಂಜುಂಡ ಮೂರ್ತಿ, ಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಅತಿಥಿ ಉಪನ್ಯಾಸಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಶನ್:
ಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು.
ಕೋಟ್:
ದೈಹಿಕ ಚಟುವಟಿಕೆಯ ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಮೈದಾನದಲ್ಲಿ ಆಟವಾಡುವುದು, ನಡಿಗೆ ದೈಹಿಕ ಶ್ರಮದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಬೊಜ್ಜು ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ತಡೆಯುತ್ತದೆ.
- ಡಾ. ಭವ್ಯ ಎಚ್.ಬಿ, ವೈದ್ಯಾಧಿಕಾರಿಗಳು, ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ
ಬಾಕ್ಸ್1:
ಹೆಣ್ಣುಮಕ್ಕಳು ನಿಯಮಿತ ತಪಾಸಣೆಯಿಂದ ಮಾತ್ರ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಂಡಾಗ ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಬೇಕು. ವಿಶೇಷವಾಗಿ ವಿದ್ಯಾರ್ಥಿನಿಯರು ಕಬ್ಬಿಣದಂಶವಿರುವ ಆಹಾರ ಸೇವಿಸುವ ಮೂಲಕ ರಕ್ತಹೀನತೆಯಿಂದ ಮುಕ್ತರಾಗಬೇಕು.
ಬಾಕ್ಸ್2:
ಇಂದಿನ ಯುವಕ-ಯುವತಿಯರು ಮತ್ತು ಹಿರಿಯರು ತಮ್ಮ ವೈಯಕ್ತಿಕ ಸ್ವಚ್ಛತೆ, ಸುತ್ತಮುತ್ತಲಿನ ಪರಿಸರ, ವ್ಯಾಯಾಮ ಮತ್ತು ಕ್ರೀಡಾ, ಮುನ್ನೆಚ್ಚರಿಕೆಯ ತಪಾಸಣೆಯ ಮೂಲಕ ಇವುಗಳನ್ನು ವಿಸ್ತೃತವಾಗಿ ಅರಿತುಕೊಂಡರೇ ಮಾತ್ರ ಜೀವನದಲ್ಲಿ ಸಮೃದ್ಧಿಗೆ ಸಾಕ್ಷಿ.


.gif)

.gif)


0 Comments