*ಜನಮನ ಗೆದ್ದ ಜನನಾಯಕ*
ಭಾಗ್ಯಗಳ ಸರದಾರನೆಂದು ಜನಮನದಿ ಮೂಡಿದ ಕೀರ್ತಿ,
ಬಡವರ ನೋವ ತೂಗಿದ ನಾಯಕನ ಮನುಜತ್ವದ ಮೂರ್ತಿ।।
ಸಂವಿಧಾನದ ನೆರಳಲಿ ಸಾಗಿದ ಸಮಾನತೆಯ ಹಾದಿ,
ಅಂಬೇಡ್ಕರ ಕನಸನು ಬೆಳೆಸಿದ ಜನಪರತೆಯ ನಾದಿ।।
ಅಧಿಕಾರವನು ತ್ಯಜಿಸಿದರೂ ಉಳಿದ ಮಾನವ ಸಂಬಂಧ,
ಜನಮನದಿ ಶಾಶ್ವತವಾದ ಸಿದ್ದರಾಮಯ್ಯನ ಬಂಧ।।
ಶೋಷಿತರ ಪಾಲಿನ ಆಶೆಯಾಗಿ ಬೆಳಗಿದ ದೀಪ,
ಹಿಂದುಳಿದ ಬದುಕಿಗೆ ತುಂಬಿದ ಹೊಸ ಬೆಳಕಿನ ರೂಪ।।
ಮಾಸ್ ಲೀಡರ್ ಖ್ಯಾತಿಯೊಂದಿಗೆ ಮೂಡಿದ ಜನಪ್ರೇಮ,
ರಾಜಕೀಯ ರಂಗದೊಳಗೇ ಉಳಿಯಲಿ ಅವರ ಹೆಸರು ನೇಮ।।
ಕವಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments