ಕಥೆಯ ಹೆಸರು.. ..ಸೀರೆ ಅಂಗಡಿಯಲ್ಲಿ ಮಿಡಿದ ಪ್ರೇಮದ ಕಹಾನಿ.. ############################

 ಕಥೆಯ ಹೆಸರು..

..ಸೀರೆ ಅಂಗಡಿಯಲ್ಲಿ ಮಿಡಿದ ಪ್ರೇಮದ ಕಹಾನಿ..

############################



ಒಂದು ಚಿಕ್ಕ ಸೀರೆ ಅಂಗಡಿ, ಆ ಅಂಗಡಿಯಲ್ಲಿ ಒಬ್ಬ ಸುಂದರ ಹುಡುಗ, ತುಂಬಾ ಒಳ್ಳೆಯ ಹುಡುಗ ಕೆಲಸ ಮಾಡ್ತಾ ಇದ್ದ...

ಒಂದು ದಿನ ಆ ಅಂಗಡಿಗೆ ಒಬ್ಬಳು ಮಧುರವಾದ ಸುಮಧುರವಾದ ಮುದ್ದಾದ ಹುಡುಗಿ ಸೀರೆ ತೊಗೋಳಕೆ ಬರ್ತಾಳೆ.

ಆ ಹುಡುಗಿಗೆ ಸೀರೆ ಅಂದ್ರೆ ತುಂಬಾ ಇಸ್ಟ್ ಇರುತ್ತೆ, ದಿನ ಒಂದೊಂದು ಸೀರೆ ಉಡಬೇಕು, ಆ ಸೀರೆ ಹುಟ್ಟು ದಿನ ಪೂರ್ತಿ ಊರೆಲ್ಲ ತಿರುಗಾಡಬೇಕು ಎಲ್ಲರಿಗೂ ತೋರಿಸುತ್ತ.


ಅವನು ಇದ್ದ ಆ ಸೀರೆ ಅಂಗಡಿಗೆ ಬರ್ತಾಳೆ ಒಂದು ದಿನ, ಸೀರೆ ತೊಗೊಳೋಕೆ, ಆ ಅಂಗಡಿಯಲ್ಲಿ ಹೊಳಗೆ ಹೋಗುತ್ತಲೇ ಅವನನ್ನು ನೋಡ್ತಾಳೆ ಇವಳು, ಅವನನ್ನು ನೋಡಿ, ಏನೋ ಒಂದು ಹೊಸ ಆಲೋಚನೆ ಶುರು ಆಗುತ್ತೆ ಇವಳಿಗೆ, ಆದ್ರೂ ಅವಳು ತಲೆ ಕೆಡಸಿ ಕೊಳ್ಳದೆ, ಸುಮ್ನೆ ಆಗಿ ಬಿಡ್ತಾಳೆ.

ಹಾಗೆ ಈ ಹುಡುಗಿ ಅವನ ಹತ್ತಿರ ಬಂದು, ಸೀರೆ ತೋರಿಸಿ ಅಂತ ಕೇಳ್ತಾಳೆ, ಅವನು ಅವಳನ್ನು ಜಾಸ್ತಿ ನೋಡದೆ ತನ್ನ ಕೆಲಸದ ಕಡೆ ಗಮನ ಅರಿಸುತ್ತಾನೆ.

ಅವಳು ಆ ಅಂಗಡಿಯಲ್ಲಿ ಇಲ್ಲ ಸಿರೇನು ತೆಗಿಸಿದಳು, ಆದ್ರೆ ಒಂದು ಸಿರೇನು ತೆಗೆದುಕೊಂಡು ಹೋಗಲಿಲ್ಲ ಅವಳು.


ಆದ್ರೆ ಅವನಿಗೆ ತುಂಬಾ ಬೇಜಾರು ಆಯಿತು ಇಷ್ಟೊಂದು ಸೀರೆ ತೆಗಿಸಿ ಒಂದು ಸಿರೇನು ತೊಗೋಳಿಲ್ಲ ಅಂತ.. ತುಂಬಾ ಬೇಜಾರ್ ಮಾಡಿಕೊಂಡ ಅವನು..  ಆಮೇಲೆ ಆ ಸೀರೆ ಎಲ್ಲ ಹೇಗಿತ್ತು ಹಾಗೆ ಹಾಕಿದ,  ತುಂಬಾ ಸುಸ್ತು ಆಗಿ ಹೋಯಿತು, ಮತ್ತೆ ಎಂದಿನಂತೆ ಕೆಲಸಕ್ಕೆ ಹೋದ ಅಂಗಡಿಗೆ, ನಿನ್ನೆದು ಎಲ್ಲ ಮರೆತು, ಹಾಗೆ ಅಂಗಡಿ ಕೆಲಸ ಮುಂದು ವರಿಸಿದ. ಒಂದು ದಿನ ಆಯಿತು ಎರಡು ದಿನ ಆಯಿತು ಒಂದು ವಾರ ಆಯಿತು ಆ ಹುಡುಗಿ ಆ ಅಂಗಡಿ ಕಡೆ ಹೋಗಲಿಲ್ಲ, ಆ ಹುಡುಗನು ಅಷ್ಟು ತಲೆ ಕೆಡಿಸಿಕೊಳ್ಳಲಿಲ್ಲ, ಒಂದು ವಾರ ಆಯಿತು ಮತ್ತೆ ಆ ಹುಡುಗಿ ಆ ಅಂಗಡಿಗೆ ಬಂದಳು, ಆದ್ರೆ ಆ ಹುಡುಗ ಇರಲಿಲ್ಲ ಅಲ್ಲಿ, ಅವಳು ಒಳಗಡೆ ಬಂದು ನೋಡಿದಳು ಎಲ್ಲೂ ಕಾಣಲಿಲ್ಲ ಅವನು, ಅಂಗಡಿ ಓನರ್ ಕೇಳಿದ, ಏನು ಬೇಕು ಮೇಡಂ ಅಂತ, ಹೇಳಿ ಅಂತ, ಆಗ ಅವಳು ಏನು ಇಲ್ಲ, ಸೀರೆ ಬೇಕಿತ್ತು ಅಂತ, ಅವಳ ಕಣ್ಣು ಆಕಡೆ ಈ ಕಡೆ ತಿರುಗಿಸುತ್ತ ಇದ್ದಳು, ಮತ್ತೆ ಓನರ್ ಕೇಳಿದ, ಏನು ಮೇಡಂ ಏನು ಹುಡುಕುತ್ತ ಇದ್ದೀರಾ ಅಂತ, ಯಾರು ಕಾಣ್ತಾ ಇಲ್ಲ ಅಂಗಡಿಯಲಿ ಅಂತ ಕೇಳಿದ್ಲು, ಓನರ್ ಹಾಗ,  ಹಾ ಮೇಡಂ ಹುಷಾರು ಇಲ್ಲ ಕೆಲ್ಸದವನಿಗೆ ಅದಕ್ಕೆ ಬಂದಿಲ್ಲ. ನಾಳೆ ಬರ್ತಾನೆ ಮ್ಯಾಡಮ್.. ಹೇಳಿ ಯಾವ ಸೀರೆ ಬೇಕು ಅಂತ ನಾನೆ ಕೊಡ್ತೀನಿ, ಅಂತ ಓನರ್ ಕೇಳಿದ,  ಆಗ ಆ ಹುಡುಗಿ ಸರಿ ಸರ್ ಮತ್ತೆ ಬರ್ತೀನಿ ಅಂತ ಹಾಗೆ ಹೋದಳು,,,

ಆ ಹುಡುಗಿ ದಾರಿಯಲ್ಲಿ ಮನದಲ್ಲಿ ಯೋಚನೆ ಮಾಡ್ತಾ ಹೋದಳು,, ಪಾಪ ಆ ಅವನು ನಾನು ಅಷ್ಟೊಂದು ಸೀರೆ ತೆಗಿಸಿದೆ, ಆದ್ರೆ ನಾನು ಒಂದು ಸೀರೆ ತೆಗೆದುಕೊಂಡು ಹೋಗ್ಲಿಲ್ಲ ಎಷ್ಟು ಬೇಜಾರ್ ಆಗಿದ್ದಾನೆ ನನ್ನ ಮೇಲೆ ಅಂತ,, ತುಂಬಾ ಬೇಜಾರ್ ಅಲ್ಲಿ ಹೋದಳು ಮನೆಗೆ,, ಅವನಿಗೆ ಒಂದು sorry ಕೇಳ್ಬೇಕು ಅಂತ ಅವಳು ಬಂದಿರುತ್ತಾಳೆ, ಆದ್ರೆ ಅವನು ಸಿಗಲ್ಲ,,

ಆದ್ರೆ ಪಾಪ ಅವನು ಬಡವ ಆಗಿರುತ್ತಾನೆ, ಮನೇಲಿ ಇರ್ತಾನೆ ಹುಷಾರು ಇಲ್ಲದ ಕಾರಣ,


ಮತ್ತೆ ಮರು ದಿನ ಅವಳು ಆ ಅಂಗಡಿಗೆ ಬರ್ತಾಳೆ, ಒಳಗೆ ಹೋಗ್ತಾಳೆ, ಮತ್ತೆ ಎಲ್ಲ ಕಡೆ ನೋಡ್ತಾಳೆ, ಆದ್ರೆ ಅವನು ಬಂದಿರಲ್ಲ ಮತ್ತೆ ಅಂಗಡಿಗೆ, ಮತ್ತೆ ಹಾಗೆ ಸುಮ್ನೆ ಹೇಳದೆ ಹಾಗೆ ಹೋಗ್ತಾಳೆ, ಆದ್ರೆ ಓನರ್ ಇವಳನ್ನ ನೋಡಿ ಕರೀತಾನೆ, ಹೇ ಮೇಡಂ, ಆಗ ಅವಳು ಹೇಳಿ ಸರ್ ಏನು, 

ಮತ್ತೆ ನೀವು ನಿನ್ನೆ ಬಂದಿದ್ರಿ ಅಲ್ವಾ ಯಾಕೆ ಹಾಗೆ ಹೋಗ್ತೀರಾ, ಏನು ಬೇಕು ಹೇಳಿ. ಆಗ ಅವಳು ಏನು ಇಲ್ಲ ಸರ್, ಪರವಾಗಿಲ್ಲ ಹೇಳಿ ಏನು ಬೇಕು ಅಂತ.


ಆ ಹುಡುಗಿ ಹೇಳ್ತಾಳೆ ಸೀರೆ ಬೇಕು ಸರ್ ಒಂದು ಅಂತ, ಸರಿ ಬನ್ನಿ ಅಂತ ಓನರ್ ತೋರಿಸುತ್ತಾನೆ,, ಎಲ್ಲ ಸೀರೆ ತೆಗೆದು, ಆದ್ರೆ ಅವಳ ಕಣ್ಣಿಗೆ ಒಂದು ಸುಂದರವಾದ ಸೀರೆ ಕಾಣುತ್ತೆ, ಆ ಸೀರೆ ನೋಡಿ ಅವಳಿಗೆ ತುಂಬಾ ಖುಷಿ ಆಗುತ್ತೆ, ಅವಳು ತನ್ನನ್ನೇ ಮರೆತು ಬಿಡ್ತಾಳೆ, ಅಷ್ಟ ಖುಷಿ ಆಗುತ್ತೆ,.

ಆ ಹುಡುಗಿ ಹೇಳ್ತಾಳೆ ಸರ್ ಆ ಸೀರೆ ತೋರಿಸಿ ಅಂತ,,


ಆದ್ರೆ ಆ ಓನರ್ ನಗ್ತಾನೇ, ಆ ಹುಡುಗಿ ಕೇಳ್ತಾಳೆ ಯಾಕ ನಗ್ತೀರಾ ಹೇಳಿ ಸರ್, ಓನರ್ ಹೇಳ್ತಾನೆ ಏನು ಮೇಡಂ ಈ ಸೀರೆನ ಅಂತ, ಆಗ ಆ ಸೀರೆ ನೋಡಿ ಹು ಸರ್ ಇದೆ ಸೀರೆ,, ಆಗ ಓನರ್ ಹೇಳ್ತಾನೆ ಈ ಸೀರೆ ಕೊಡೋಕೆ ಆಗಲ್ಲ ಮ್ಯಾಡಮ್, ಈ ಸೀರೆ ಕೊಡೋಕೆ ಆಗಲ್ಲ, ಆವಾಗ ಹುಡುಗಿ ಯಾಕೆ ಸರ್ ನಂಗೆ ಬೇಕು ಈ ಸೀರೆ ಎಷ್ಟು ದುಡ್ಡು ಕೊಡು ಅಂದ್ರು ಕೊಡ್ತೀನಿ plz ಕೊಡಿ ಅಂತ ಹೇಳ್ತಾಳೆ.


ಈ ಸೀರೆ ಕೊಡಲ್ಲ ಬೇರೆ ಇದೆ ನೋಡಿ ಅಂತ ಹೇಳ್ತಾನೆ, ಅವಾಗ ಅವಳು, ಸರಿ ಹೇಳಿ ಯಾಕ ಆಗಲ್ಲ ಹೇಳಿ ಕೊಡೋಕೆ,

ಅವಾಗ ಹೇಳ್ತಾನೆ ಈ ಸೀರೆ ನಮ್ಮ ಅಂಗಡಿ ಕೆಲಸಗಾರ ಇಸ್ಟ್ ಪಟ್ಟು ಇಟ್ಟಿದ್ದಾನೆ ಆದ್ರೆ ಅವನಿಗೆ ದುಡ್ಡು ಇಲ್ಲ ತೊಗೋಳಕೆ ಈ ತಿಂಗಳು ಸ್ಯಾಲರಿ ಆದ ಮೇಲೆ ಅವನು ತೊಗೊಂತಾನೆ, ಈ ಸೀರೆ ಅವನ ಮನಸಿನ ತರನೇ ಇದೆ.. ಅವನು ತುಂಬಾ ಒಳ್ಳೆಯ ಹುಡುಗ ಅವ್ನಿಗೆ ಮೋಸ ಮಾಡೋಕೆ ಆಗಲ್ಲ, ಸೀರೆ ಬಿಟ್ಟ ಬೇರೆ ಕೇಳಿ ಮೇಡಂ,

ಆಗ ಅವಳು ಸೀರೆ ಯಾಕೆ ಅವರಿಗೆ ಹೇಳಿ ಸರ್ ಅಂತ

ಆಗ ಓನರ್ ಹೇಳ್ತಾನೆ, ನಿಜ ಮ್ಯಾಡಮ್ ಅವನು ತನ್ನ ಹುಡುಗಿಗೆ ತೊಗೊಂಡಿದ್ದಾನೆ, ಯಾರನ್ನು ಅವನು ಇಸ್ಟ್ ಪಡ್ತಾ ಇದ್ದಾನೆ ಆದ್ರೆ ಅವನು ಆ ಹುಡುಗಿನ ಒಮ್ಮೆ ನೋಡಿದ್ದಾನೆ, ಅವಳನ್ನ ಒಮ್ಮೆ ಮಾತನಾಡಿಸಿಲ್ಲ, ಆದ್ರೆ ಆ ಹುಡುಗನ ಪ್ರೀತಿ ವಿಚಿತ್ರ, ನಮ್ಮ ಅಂಗಡಿಯಲ್ಲಿ ನೋಡಿ ಅವಳ ಮೇಲೆ ಇಸ್ಟ್ ಆಗಿದೆ ಏನು ಗೊತ್ತಿಲ್ಲ ಆದ್ರೆ. ಈ ಸೀರೆ ಅವಳಿಗೆ ಕೊಡ್ಬೇಕು ಅಂತ ತೆಗೆದು ಇಟ್ಟಿದ್ದಾನೆ.

ಅವಳು ಯೋಚನೆ ಮಾಡ್ತಾಳೆ ಇವನು ತುಂಬಾ ಚನ್ನಾಗಿ ಸೀರೆ ಸೆಲೆಕ್ಟ್ ಮಾಡಿದ್ದಾನೆ, ಆದ್ರೂ ಒಂದು ಬೇಸರ ಅವಳಿಗೆ, ಯಾರು ಅವಳು ಇವನ ಕಣ್ಣಿಗೆ ಬಿದ್ದಿದ್ದು, ಅಂತ ಯೋಚನೆ ಅವಳಿಗೆ, ಸರಿ ಸರ್ ಅಂತ ಅವಳು ಒರಡುತ್ತಾಳೆ..

ಮನೆಗೆ ಬಂದ ಮೇಲೆ ಅವಳು ತುಂಬಾ ಯೋಚನೆ ಮಾಡ್ತಾಳೆ, ಯಾರು ಆ ಹುಡುಗಿ ಅಂತ, ಮಾಡ್ತಾ ಮಾಡ್ತಾ ಅವನ ಕನಸಿನ ಕಡೆಗೆ ನಿದ್ದೆಗೆ ಜಾರುತ್ತಾಳೆ, ಮತ್ತೆ ಮರುದಿನ ಆ ಹುಡುಗ ಕೆಲಸಕ್ಕೆ ಬಂದಾಗ ಆ ಅಂಗಡಿ ಓನರ್ ಅವನಿಗೆ ಹೇಳುತ್ತಾನೆ, ಏನು ಪಾ ನಿನ್ನೆ ಒಂದು ಹುಡುಗಿ ನೀನು ಇಟ್ಟ ಈ ಸೀರೆ ಕೇಳಿದಳು, ಆದ್ರೆ ಕೊಡಲಿಲ್ಲ, ಆದ್ರೆ ಅವಳು ನಿನ್ನ ಬಗ್ಗೆ ಕೇಳಿದಳು ನಾನು ನಂಗೆ ತಿಳಿದಷ್ಟು ಹೇಳಿದೆ, ಅವಳು ಎರಡು ದಿನ ಬಂದಿದ್ದಳು ಆದ್ರೆ ಯಾಕ ಬಂದಳು ಅಂತ ಗೊತ್ತಿಲ್ಲ ಕಣೋ. ಅಂತ ಹೇಳ್ತಾನೆ ಓನರ್, ಮತ್ತೆ ಅವನು ಸರಿ ಸರ್ ಅಂತ ಸುಮ್ನೆ ಆಗಿ ಬಿಡ್ತಾನೆ, ಆಮೇಲೆ ಆ ಹುಡುಗ ಯಾರು ಆ ಹುಡುಗಿ ನನ್ನ ಬಗ್ಗೆ ಕೇಳಿದವಳು ಅಂತ ಸಣ್ಣದಾಗಿ ಯೋಚನೆ ಶುರು ಆಗುತ್ತೆ, ಅವನಲ್ಲಿ.


ಆಮೇಲೆ ಓನರ್ ನ ಕೇಳ್ತಾನೆ, ಯಜಮಾನ್ರ ಮತ್ತೆ ಏನು ಕೇಳಿದಳು ಆ ಹುಡುಗಿ, ನನ್ನ ಬಗ್ಗೆ ಯಾಕ ಕೇಳಿದಳು, ಹೇಳಿ ಯಾರು ಅವಳು, ಆ ಹುಡುಗಿ, ಯಜಮಾನ ಹೇಳಿದ.

ಯಾರು ಅಂತ ಗೊತ್ತಿಲ್ಲ ಆದ್ರೆ ಅವಳು ಯಾರನ್ನೋ ಭೇಟಿ ಮಾಡೋಕೆ ಬಂದ ಹಾಗೆ ಕಾಣಿತು ನಮ್ಮ ಅಂಗಡಿಗೆ.

ಅವಾಗ ಆ ಹುಡುಗ ಯೋಚನೆ ಮಾಡ್ತಾನೆ, ಅವಳೇ ಇರಬೇಕು ಅನಿಸುತ್ತೆ ನಮ್ಮ ಅಂಗಡಿಗೆ ಬಂದಿದ್ದಳು ಅಲ್ವಾ ಅನಿಸುತ್ತೆ, ಆಮೇಲೇ ಓನರ್ ಕೇಳ್ತಾನೆ, ಏನು ಪಾ ನೀನು ಪ್ರೀತಿ ಮಾಡೋ ಹುಡುಗಿ ಯಾರು, ಹೇಳು, ಹುಡುಗ ಹೇಳ್ತಾನೆ, ಸರ್ ನಾನು ಪ್ರೀತಿ ಮಾಡ್ತಾ ಇದ್ದೀನೊ ಏನು ಗೊತ್ತಿಲ್ಲ ಸರ್ ಆದ್ರೆ ಆ ಹುಡುಗಿ ನೋಡಿದ ಮೇಲೆ ಏನೋ ನನ್ನಲಿ ಹೊಸ ಲೋಕ ಸೃಷ್ಟಿ ಆಗಿದೆ..

ಆ ಹುಡುಗಿ ನಮ್ಮ ಅಂಗಡಿಗೆ ಬಂದಿದ್ದಳು ಒಂದು, ತುಂಬಾ ಬಟ್ಟೆ ತೆಗೆದು ಒಂದು ಬಟ್ಟೆ ತೊಗೊಂಡು ಹೋಗಲಿಲ್ಲ ಅವಳು, ಆದ್ರೆ ನಾನು ಅವಳನ್ನ ತುಂಬಾ ಗಮನಿಸಿದೆ, ಅವಳಿಗೆ ತಕ್ಕ ಹಾಗೆ ಈ ಸೀರೆ ತೆಗೆದು ಇಟ್ಟೆ.. ಆ ಸೀರೆ ಅವಳಿಗೆ ಕೊಡ್ಬೇಕು ಅಂತ ಆಸೆ ಸರ್..

ಅಂತ ಹೇಳಿ ಸುಮ್ನೆ ಆಗ್ತಾನೆ, ಮತ್ತೆ ಮರು ದಿನ ಆ ಹುಡುಗಿ ಅಂಗಡಿಗೆ ಬರ್ತಾಳೆ, ಅವಾಗ ಓನರ್ ಇರ್ತಾನೆ, ಆ ಹುಡುಗಿಗೆ ಎಲ್ಲ ಹೇಳ್ತಾನೆ, ಅವಾಗ ಅವಳು ತುಂಬಾ ಗಾಬರೀ ಆಗ್ತಾಳೆ, ಹೌದ ಸರ್ ಅಂತ ಕೇಳ್ತಾಳೆ, ಅವಾಗ ಆ ಹುಡುಗ ಹೊರಗಡೆ ಹೋಗಿರ್ತಾನೆ, ಸರ್ ಅವನು ಎಲ್ಲಿ ಇವಾಗ. ಇಲ್ಲ ಅವನು ಹೊರಗಡೆ ಹೋಗಿದ್ದಾನೆ ಬರ್ತಾನೆ ಇವಾಗ, ಅವಾಗ ಆ ಹುಡುಗಿ ಆಯಿತು ಸರ್ ಅಂತ ಹೋಗ್ತಾಳೆ, ಅವಳು ಹೋದ ಮೇಲೆ ಆ ಹುಡುಗ ಬರ್ತಾನೆ, ಅವಾಗ ಓನರ್ ಅವನಿಗೆ ಎಲ್ಲ ಹೇಳ್ತಾನೆ ಹೀಗೆ ಆ ಹುಡುಗಿ ಮತ್ತೆ ಬಂದಿದ್ದಳು, ಅವಳಿಗೆ ಎಲ್ಲ ಹೇಳಿದೆ, ಅವಳು ತುಂಬಾ ಗಾಬರಿ ಆದಳು, ಅವಾಗ ಆ ಹುಡುಗ ಕೂಡ ತುಂಬಾ ಗಾಬರಿ ಆಗಿ ಬಿಡ್ತಾನೆ,..

ಆದ್ರೆ ಆ ಹುಡುಗಿ ತುಂಬಾ ಯೋಚನೆ ಮಾಡ್ತಾಳೆ, ಆ ಹುಡುಗ ತುಂಬಾ ಒಳ್ಳೆಯವನು, ಒಳ್ಳೆಯ ಗುಣದವನು ಆದ್ರೆ ಬಡವ ಅಷ್ಟೇ, ಇಂತ ಹುಡುಗ ಸಿಗೋಲ್ಲ ನಂಗೆ ಸಿಕ್ಕಿದ್ದಾನೆ, ಅಂತ ಅವನ ಬಗ್ಗೆ ಯೋಚನೆ ಮಾಡ್ತಾಳೆ, ಅಲ್ಲಿ ಅವನು ಹಾಗೆ ಇವಳ ಬಗ್ಗೆ ಯೋಚನೆ ಮಾಡ್ತಾ ಇರ್ತಾನೆ, ಹೀಗೆ ಒಂದು ದಿನ ಅವಳು ಅಂಗಡಿಗೆ ಬರ್ತಾಳೆ ಅವತ್ತು ಆ ಅಂಗಡಿ ಓನರ್ ಬಂದಿರಲಿಲ್ಲ, ಆ ಹುಡುಗ ಮಾತ್ರ ಇರ್ತಾನೆ, ಇಬ್ಬರು ಒಬ್ಬರನೊಬ್ಬರು ನೋಡ್ತಾ ನಿಂತು ಬಿಡ್ತಾರೆ, ಹೇಳಿಕೊಳ್ಳೋಕೆ ಏನು ಇರಲ್ಲ ಆಗ್ಲೇ ಅವರವರ ಮನದಲ್ಲಿ ಪ್ರೀತಿ ಅನ್ನೋದು ಚಿಗುರು ಒಡೆದು ಬಿಟ್ಟಿರುತ್ತೆ. ಆ ಸೀರೆ ಅವಳಿಗೆ ಕೊಟ್ಟು ಹೇಳ್ತಾನೆ ಈ ನಿನಗಾಗಿ ಅಂತ,, ಸರಿ ಅಂತ ನಾಚುತ್ತ ಹೋಗ್ತಾಳೆ,

ಮರು ದಿನ ಆ ಹುಡುಗಿ ಅವನು ಕೊಟ್ಟ ಸೀರೆ ಹುಟ್ಟುಕೊಂಡು ಬರ್ತಾಳೆ, ಆ ಅಂಗಡಿ ಓನರ್ ನೋಡಿ ಗಾಬರಿ ಆಗ್ತಾನೆ, ಈ ಸೀರೆ ನಮ್ಮ ಕೆಲಸದವನು ತೆಗೆದು ಇಟ್ಟಿದ್ದ ಅಲ್ವಾ.. ಆಗದ್ರೆ ಆ ಹುಡುಗಿ ಇವಳೇನಾ.. ಆಗ್ಲೇ ಇಬ್ಬರು ಒಬ್ಬರನೊಬ್ಬರು ನೋಡಿದ್ದಾರೆ ಅನಿಸುತ್ತೆ, ಆ ಹುಡುಗ ಬಂದು ಹೇಳ್ತಾನೆ, ಸರ್ ಹೇಗೆ ಕಾಣ್ತಾಳೆ ನಮ್ಮ ಹುಡುಗಿ ಅಂತ, ಸೂಪರ್ ಕಣೋ ನಿಮ್ಮ ಹುಡುಗಿ . ನಿಮ್ಮ ಜೋಡಿ ಸೂಪರ್.. ಅಂತ ಹೇಳ್ತಾನೆ, ಆದ್ರೆ ಆ ಪ್ರೀತಿ ಜಾಸ್ತಿ ದಿನ ಇರೋಲ್ಲ, ಹುಡುಗಿ ಮನೆಯಲ್ಲಿ ಒಪ್ಪದ ಕಾರಣ ಅವಳು ಬೇರೆ ಹುಡುಗನ್ನ ಮದುವೆ ಆಗ್ತಾಳೆ,, ಆದ್ರೆ ಈ ವಿಷಯ ಅವನಿಗೆ ಗೊತ್ತು ಇರುತ್ತೆ, ಅವತ್ತೇ ಅವಳ ಮದುವೆ ಇರುತ್ತೆ ಆದ್ರೆ ಅವನು ಕೊಟ್ಟ ಆ ಸೀರೆ ಹುಟ್ಟುಕೊಂಡು ಅವನಿಗೆ ತೋರಿಸೋಕೆ ಬಂದಿರ್ತಾಳೆ, ಆ ವಿಷಯ ಕೇಳಿ ಓನರ್ ತುಂಬಾ ಬೇಜಾರ್ ಮಾಡಿಕೊಂಡು ಅವನಿಗೆ ಸಮಾಧಾನ ಮಾಡ್ತಾನೆ.. ನಿಮ್ಮ ಪ್ರೀತಿ ತುಂಬಾ ಮದುರ ಕಣೋ.. ಅವಳು ನೀನು ಕೊಟ್ಟ ಆ ಸೀರೆ ಹುಟ್ಟುಕೊಂಡು ಅವಳ ಪ್ರೀತಿನು ತೋರಿಸಿದಳು, ನೀನು ಅವಳಿಗೆ ಸೀರೆ ಕೊಟ್ಟು ನಿನ್ನ ಪ್ರೀತಿ ತೋರಿಸಿದೆ,, ಆದ್ರೆ ಆ ಪ್ರೀತಿ ನಿಮ್ಮ ನಡುವೆ ಇದೆ ಸಾಕು.. ಅವಳು ಆರಾಮ್ ಇರಲಿ.. ಅಂತ ಅವನಿಗೆ ಸಮಾಧಾನ ಮಾಡಿ ಬಿಡ್ತಾನೆ..


ಇದು ಹುಚ್ಚು ಪ್ರೀತಿ ಅಲ್ಲ

ಮೆಚ್ಚುವಂತಹದು ಪ್ರೀತಿ 

ಇದು ಬೆಚ್ಚನೆಯ ಹೊದಿಕೆಯಲ್ಲಿ 

ಮಲಕೊಂಡು ದೇಹದ ದಾಹ ತೀರಿಸೋ ಪ್ರೀತಿ ಅಲ್ಲ

ಮದುರ ಮನಸಿನ ಪ್ರೀತಿ ಇದು..


✍🏿 ನೀರಲಗಿ ಶರಣಪ್ಪ

Image Description

Post a Comment

0 Comments