*ಬಡವನ ಕನಸಿಗೆ ಬೆಳಕು ಯಾವಾಗ?*
ಸರಕಾರಗಳು ಬದಲಾಗಿದರೂ ಬಡವನ ಮನೆಯ ಬಾಗಿಲಲ್ಲಿ ಹಸಿವು ಮಾತ್ರ ಉಳಿಯುತಿದೆ,
ಯೋಜನೆಗಳ ಹೆಸರೇ ದೊಡ್ಡದಾದರೂ ಬದುಕಿನ ದಾರಿ ಮಾತ್ರ ಅದೇ ಆಗಿ ಕಾಣುತಿದೆ.
ಕೈಯಲ್ಲಿ ಪದವಿ ಹಿಡಿದ ಯುವಕ ಕೆಲಸಕ್ಕಾಗಿ ಬಾಗಿಲು ಬಾಗಿಲು ತಿರುಗುತಿದ್ದಾನೆ,
ನಿರುದ್ಯೋಗದ ಕತ್ತಲೆ ಕನಸು ಕಂಡ ಕಣ್ಣುಗಳಲ್ಲಿ ನಿಧಾನವಾಗಿ ತುಂಬುತಿದೆ.
ಭ್ರಷ್ಟಾಚಾರದ ನೆರಳು ದೇಶದ ಮೂಲೆ ಮೂಲೆಗೂ ಆಳವಾಗಿ ಹರಡಿಕೊಂಡಿದೆ,
ನೇರವಾಗಿ ನಡೆದವನ ಬದುಕು ಮಾತ್ರ ಪ್ರತಿದಿನ ಪ್ರಶ್ನೆಯಾಗಿ ನಿಂತಿದೆ.
ಬೆಲೆ ಏರಿಕೆಯ ಬಿಸಿ ಗಾಳಿಗೆ ಶ್ರೀ ಸಾಮಾನ್ಯನ ಉಸಿರೇ ಭಾರವಾಗುತಿದೆ,
ಒಂದು ಹೊತ್ತಿನ ಊಟಕ್ಕಾಗಿ ಬಡವನ ಬದುಕು ದಿನವೂ ಹೋರಾಟವಾಗುತಿದೆ.
ಹೇಳಿ, ಈ ದೇಶದ ಬಡವನ ಕನಸಿಗೆ ಬೆಳಕು ಬೀಳುವ ಬೆಳಗು ಯಾವಾಗ ಬರಲಿದೆ?
ಶ್ರಮಕ್ಕೆ ಬೆಲೆ ಸಿಕ್ಕು ನ್ಯಾಯದ ನೆಲೆ ಬಲವಾದಾಗ ಬದುಕು ಹೊಸ ದಾರಿಯಾಗಲಿದೆ.
ಕವಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments