*ಗಡಿಭಾಗದ ಬೇಡಕಿಹಾಳದ ಕುಸುಮಾವತಿಯಲ್ಲಿ ಕನ್ನಡ ಹಬ್ಬ*

 ಗಡಿಭಾಗದ ಬೇಡಕಿಹಾಳದ ಕುಸುಮಾವತಿಯಲ್ಲಿ ಕನ್ನಡ ಹಬ್ಬ 



ಬೇಡಕಿಹಾಳ : ಕನ್ನಡದ ಖ್ಯಾತ ಸಾಹಿತಿ ನಿಸಾರ್ ಅಹಮದ್ ಅವರು ಕನ್ನಡ ನಾಡು ನುಡಿ ನಿತ್ಯೋತ್ಸವ ವಾಗಬೇಕು ಎಂದು ಹೇಳಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿರುವ ಸಂಸ್ಥೆ ಶ್ರೀಮತಿ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ. ಈ ಸಂಸ್ಥೆಯು ಸಾಂಗ್ಲಿಯಲ್ಲಿ ಸ್ಥಾಪನೆ ಆಗಿರುವ ಲಠ್ಠೆ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾಗಿದೆ. 


ಸೋಮವಾರದಿಂದ ಶನಿವಾರದವರೆಗೆ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಫನ್ ವೀಕ್ ಕಾರ್ಯಕ್ರಮದಲ್ಲಿ ಶನಿವಾರ ಕನ್ನಡ ಹಬ್ಬವನ್ನು ಆಚರಿಸಲಾಯಿತು. ಹಬ್ಬಕ್ಕೆ ವಿದ್ಯಾರ್ಥಿಗಳಿಂದ ಕನ್ನಡ ಮಾತೆಗೆ ಪೂಜೆ ಮಾಡುವುದರ ಮೂಲಕ ಪ್ರಾಂಶುಪಾಲರಾದ ಕಿರಣ್ ಬಿ ಚೌಗುಲೆ ಅವರು ಚಾಲನೆ ನೀಡಿದರು. ಶಮನ ವಾಡಿ ಮತ್ತು ಬೇಡಿಕಿಹಾಳದ ಪ್ರಮುಖ ಬೀದಿಯಲ್ಲಿ ವಿದ್ಯಾರ್ಥಿಗಳಿಂದ ಡೊಳ್ಳು ಹಾಗೂ ಸಾಂಪ್ರದಾಯಿಕ ಹುಡುಗಿ ತೊಟ್ಟು ವಿದ್ಯಾರ್ಥಿಗಳು ಮೆರವಣಿಗೆ ಮಾಡಿದರು.


ಮಹಾರಾಷ್ಟ್ರದ ಗಡಿ ಭಾಗಕ್ಕೆ ಕೇವಲ ಹತ್ತು ಕಿಲೋಮೀಟರ್ನಲ್ಲಿ ಸ್ಥಾಪನೆ ಇರುವ ಈ ಕುಸುಮಾವತಿ ಮಹಾವಿದ್ಯಾಲಯವು ಕನ್ನಡ ನಾಡು-ನುಡಿಗಾಗಿ ತನ್ನದೇ ಆದ ಕೊಡಗೆಯನ್ನು ನೀಡುತ್ತಾ ಬಂದಿದೆ. ಗಡಿ ಭಾಗದಲ್ಲಿ ಬಿ ಎಸ್ ಪದವಿಪೂರ್ವ ಕಾಲೇಜು.  ಕನ್ನಡ ಮತ್ತು ಇಂಗ್ಲಿಷ್ ಪ್ರಾಥಮಿಕ ಮಾಧ್ಯಮಿಕ ಶಾಲೆಯನ್ನು ತೆರೆದು ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸುತ್ತಾ ಬಂದಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡದ ಖ್ಯಾತ ಅನುವಾದ ಸಾಹಿತಿ ಚಂದ್ರಕಾಂತ ಪೋಕಳೆ ಅವರು ಕೆಲಸ ನಿರ್ವಹಿಸಿದ್ದಾರೆ. ಅವರಿಗೆ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ 2025ರ ಸಾಹಿತ್ಯ ಶ್ರೀ ದೊರಕಿದೆ. ಇವರು ನಮ್ಮ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದವರು ಎಂದು ಹೆಮ್ಮೆಯಿಂದ ಹೇಳಬಹುದು. ಕನ್ನಡ ಸಾಹಿತ್ಯಕ್ಕೆ 150ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮರಾಠಿಯಿಂದ ಕನ್ನಡಕ್ಕೆ ಹಲವು ಕೃತಿಗಳನ್ನು ಆತ್ಮಕಥೆಗಳನ್ನು ಅನುವಾದ ಮಾಡಿದ್ದಾರೆ. ಕನ್ನಡ ರಂಗಭೂಮಿಯ ಖ್ಯಾತ ರಂಗ ನಿರ್ದೇಶಕ ಡಿಎಸ್ ಚೌಗಲೆ ಅವರು ನಮ್ಮ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ. ಹಾಗೆಯೇ ಸಾಹಿತಿಗಳಾದ ನ್ಯಾಮಗೌಡ, ಉಪಾಧ್ಯ, ಮರಾಠಿ ಮತ್ತು ಕನ್ನಡ ಅನುವಾದಕ ಸುತಾರ ಮಹಾಮನಿ, ಇಂಗ್ಲಿಷ್ ಪ್ರಾಧ್ಯಾಪಕ ಮಹದೇವ್ ಮೊಕಾಶಿ, ಕಿರಣ್ ಚೌಗಲೆ, ಮರಾಠಿ, ಹಿಂದಿ, ಇಂಗ್ಲಿಷ್  ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.


ನಮ್ಮ ಮಹಾವಿದ್ಯಾಲಯದ ಹಾಗೂ ಕನ್ನಡ ವಿಭಾಗಕ್ಕೆ ಐವತ್ತು ವರ್ಷಗಳು ತಂದಿರುವ ಈ ಸಂದರ್ಭದಲ್ಲಿಯೂ ಸಹ ಕನ್ನಡ ನಿತ್ಯೋತ್ಸವವಾಗಬೇಕೆಂದು ಪ್ರತಿ ವರ್ಷ ಕನ್ನಡ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಹಿನ್ನೆಲೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಹೊಂಬಯ್ಯ ಅವರು ಕನ್ನಡ ಸಾಹಿತ್ಯದಲ್ಲಿ 15 ಕೃತಿಗಳನ್ನು ರಚಿಸಿದ್ದಾರೆ.  ಅದರಲ್ಲೂ ಪ್ರಮುಖವಾಗಿ ದಲಿತ ಸಾಹಿತ್ಯಕ್ಕೆ ತಮ್ಮದೇ ಆದಂತ ಸಾಹಿತಿಕ ಕೊಡುಗೆಯನ್ನು ನೀಡಿದ್ದಾರೆ. 


ಎಂದಿನಂತೆ ಪ್ರತಿ ವರ್ಷವೂ ವಾರ್ಷಿಕೋತ್ಸವ ನಡೆಯುತ್ತದೆ ‌. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕ್ಯಾಲೆಂಡರ್ ಅನ್ವಯ ಪ್ರತಿವರ್ಷವೂ ನಮ್ಮ ಮಹಾವಿದ್ಯಾಲಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಂತೆಯೇ ರಾಷ್ಟ್ರೀಯ ಸೇವ ಯೋಜನೆ, ncc, ಸ್ಕೌಟ್ ಅಂಡ್ ಗೈಡ್, ಸಾಂಸ್ಕೃತಿಕ ಮತ್ತು ಕ್ರೀಡೆ ಸಮಿತಿ, ರೆಡ್ ಕ್ರಾಸ್, ಹೀಗೆ ಹಲವಾರು ವಿವಿಧ ಸಮಿತಿಗಳಿಂದ ಕಾರ್ಯಕ್ರಮಗಳ ಆಯೋಜಿಸಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಮಾರೋಪ ಸಮಾರಂಭವನ್ನು ಆಯೋಜಿಸಲಾಗುವುದು. ಈ ಹಿನ್ನೆಲೆಯಲ್ಲಿ ಪನ್ ವಿಕ್ ನಲ್ಲಿ ಸಾಂಪ್ರದಾಯಿಕ ಹುಡುಗೆ, ಆಹಾರಮೇಳ, ಸ್ಕ್ವಾಡ್ ಡೇ, ಕ್ರೀಡಾ ಚಟುವಟಿಕೆ ಮತ್ತು ಕನ್ನಡ ಹಬ್ಬವನ್ನು ಆಚರಿಸಲಾಗುತ್ತದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಗುವುದು. ಈ ನೆಪದಲ್ಲಿ ನಿತ್ಯೋತ್ಸವ ಕನ್ನಡವಾಗಬೇಕೆಂದು ಗಡಿ ಭಾಗದಲ್ಲಿ ಕನ್ನಡ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷ ವಾಗುತ್ತದೆ ಎಂದು ಕುವೆಂಪುರವರ ವಾಣಿಯಂತೆ ಹಾಗೂ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಶ್ರೀಮತಿ ಕುಸುಮಾವತಿ ಮಹಾವಿದ್ಯಾಲಯವು ಕನ್ನಡ ನಾಡನುಡಿಯ ಬೆಳವಣಿಗೆಗೆ ಕಂಕಣ ಬದ್ಧವಾಗಿದೆ. ಹಾಗಾಗಿ ಗಡಿಭಾಗದ ಎಲ್ಲರೂ ಕನ್ನಡ ನಾಡನುಡಿಗೆ ಶ್ರಮಿಸಬೇಕೆಂಬ ಅರಿವನ್ನು ನಮ್ಮ ವಿದ್ಯಾರ್ಥಿಗಳಲ್ಲಿ ಮೂಡಿಸಿ  ಕನ್ನಡ ಹಬ್ಬವನ್ನು ಆಚರಿಸಿದೆವು.


ವರದಿ : ಡಾ. ವಿಲಾಸ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಶೇಗುಣಶಿ 

ಮೋ:9591782353

Image Description

Post a Comment

0 Comments