## ಹಾಡಬೇಕು ನಾನು..##
ಹರಿದ ಚಿಂದಿ ಬಟ್ಟೆಯಲಿ ನಿನ್ನನು
ನೋಡಿ, ಮುಸಿ ಮುಸಿ ನಕ್ಕಾಗ;
ತಿಪ್ಪೆಯ ಗುಂಡಿಗೆ ಎಸೆದ ಪತ್ರೋಳಿಯಲಿ
ಅನ್ನ ಹುಡುಕಿ ನೀನು ತಿನ್ನುವಾಗ.
ಬಲ್ಲಿದರ ಮಕ್ಕಳು ಶಾಲೆಗೆ ಹೋಗದೆ
ಒಲ್ಲೆಂದು ಚೀರಾಡಿ ಹಠ ಮಾಡುವಾಗ;
ಕೆದರಿದ ಕೂದಲು,ಮೆತ್ತಿದ ರಾಡಿಯಲಿ,
ಬೆರಗುಗಣ್ಣಿಂದ ನೋಡಿ ಅವುಡುಗಚ್ಚಿ ನೀನು ನಿಂತಾಗ!
ತುತ್ತು ಅನ್ನಕಾಗಿ ಅಪ್ಪ-ಅವ್ವನೊಂದಿಗೆ
ಹೆಗಲು ಕೊಟ್ಟ ನಿನ್ನ ಶ್ರಮಕ್ಕಾಗಿ;
ಸಿಕ್ಕಷ್ಟು ತಿಂದು ಕಾರುಗೀರುಗಳ ಮಧ್ಯ
ಮಲಗಿ ವಿಶ್ರಮಿಸುವ ನಿನ್ನ ಸುಖಕ್ಕಾಗಿ.
ಬಂಧಿಯೂ ನೀನಲ್ಲ,ಬಂಧನವೂ ನಿನಗಿಲ್ಲ ಸಿಕ್ಕಷ್ಟು ನಿನಗೆ ದಕ್ಕಿದಷ್ಟು ತಿಂದು
ನೋವ ನುಂಗಿ ನಲಿವ ನಿನ್ನ ಸ್ವರ್ಗ
ಸುಖವ ಕಂಡು ಬೆರಗಿನಿಂದ..!
ರಾಚು ಎಸ್. ಕೊಪ್ಪಾ ಬಂಥನಾಳ

.gif)

.gif)


0 Comments