*ಅಮೃತದ ಕಡಲು*

 *ಅಮೃತದ ಕಡಲು*



ಗೆಳತಿ ನಿನ್ನ  ಪ್ರೀತಿಯು

ಅಮೃತದ ಕಡಲು...

ನೋವು ಸಹಿಸಿ ನಲಿವು ಹರಿಸೋ

ಕರುಣೆಯ ಒಡಲು...


ಆವಪುಣ್ಯದ ತಪಸಿನ ಫಲವೋ

ನೀ ನನಗೆ  ಒಲಿದೆ...

ನೀನೆಡೆವ ದಾರಿ ಬಿರುಸಾಗದಿರಲೆಂದು

ಈ ಹೃದಯವನೆ ನಿನಗಾಗಿ ಹಾಸಿದೆ


ನನ್ನ ಮನದ ಮನೆಯಲಿ ನೀ

ನಂದಾ ದೀಪದಾರತಿ 

ಆ ದೇವರೇ ಕೊಟ್ಟ ವರವು

ನೀನೆನಗೆ ನೀಡಿದ ಪ್ರೀತಿ  


ಸುಗಂಧವೇ ತಂಗಾಳಿಯಲಿ ಸೂಸಿದೆ

ಸುಸ್ವಾಗತವು ನಮ್ಮೀ ಒಲವಿಗೆ

ಸಪ್ತಪದಿಗೆ ಮಂಗಳ ವಾದ್ಯ‌ ಮೊಳಗಿದೆ

ನಮ್ಮೀರ್ವರ ಹೊಸಬಾಳಿಗೆ


*ಅಶೋಕ ಬೇಳಂಜೆ*

Image Description

Post a Comment

0 Comments