*ಡಾ. ರಾಜಕುಮಾರ ಅವರು ಬಹುಮುಖ ದೈತ್ಯ ಪ್ರತಿಭೆಯ ಅದ್ಭುತ ಕಲಾವಿದ:* *ಟಿ ಎಸ್ ವಂಟಗೂಡಿ*

 *ಡಾ. ರಾಜಕುಮಾರ ಅವರು ಬಹುಮುಖ ದೈತ್ಯ ಪ್ರತಿಭೆಯ ಅದ್ಭುತ ಕಲಾವಿದ:*

*ಟಿ ಎಸ್ ವಂಟಗೂಡಿ*




 

 ರಾಯಬಾಗ:ಅಪೂರ್ವ ಕಲಾವಿದನಾಗಿ  ಜನಾನುರಾಗಿ ಗಾಯಕರಾಗಿ  ಕನ್ನಡಾಭಿಮಾನಿಯಾಗಿ ಹಲವು ದಶಕಗಳವರೆಗೆ ಚಿತ್ರರಂಗದಲ್ಲಿ ಮಿನುಗಿದ ಕನ್ನಡ ಕುವರ ಡಾ. ರಾಜಕುಮಾರ್ ಅವರು ಬಹುಮುಖ ದೈತ್ಯ ಪ್ರತಿಬಿಯ ಅದ್ಭುತ ಕಲಾವಿದರಾಗಿದ್ದಾರೆ ಎಂದು  ವಾಗ್ಮಿ ಟಿ ಎಸ್ ವಂಟಗೂಡಿ ಹೇಳಿದರು.


   ತಾಲೂಕಿನ  ಹಿಡಕಲ್ ಗ್ರಾಮದ ಶ್ರೀ ಜಡಿಸಿದ್ದೇಶ್ವರ ನಿಲಯದ ಆವರಣದಲ್ಲಿ ಇಂದು ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ತಾಲೂಕು ಘಟಕ ರಾಯಬಾಗ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ  ಹಮ್ಮಿಕೊಂಡ ಕನ್ನಡದ ಕಣ್ಮಣಿ ರಸಿಕರ ರಾಜ ಡಾ ರಾಜಕುಮಾರರವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಡಾ. ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿ ಮಾಡಿ ಅವರು ಮಾತನಾಡಿದರು. 


 ಬೇಡರ ಕಣ್ಣಪ್ಪ ಜ್ವಾಲಾಮುಖಿ ಸಮಯದ ಗೊಂಬೆ ಬಬ್ರುವಾಹನ ಭಕ್ತ ಕುಂಬಾರ ಆಕಸ್ಮಿಕ ಮುಂತಾದ ಚಲನಚಿತ್ರಗಳಲ್ಲಿ ನಟಿಸುವುದರೊಂದಿಗೆ ಕನ್ನಡ ಕಲಾ ರಸಿಕರ ಮನೆಗೆದ್ದ ರಸಿಕರ ರಾಜ ಡಾ ರಾಜಕುಮಾರ್ ರವರು ಬೇಡರ ಕಣ್ಣಪ್ಪ ಚಲನಚಿತ್ರದಲ್ಲಿ ಕಣ್ಣಪ್ಪನಿಗೆ ತಮ್ಮ ಕಣ್ಣುಗಳನ್ನು ದಾನ ಮಾಡಿದ ರಾಜ್ ರವರು ನಿಜಜೀವನದಲ್ಲಿಯೂ ನೇತ್ರದಾನವನ್ನು ಮಾಡಿರುವ ಮಹಾದಾನಿ ಡಾ ರಾಜಕುಮಾರ ರವರು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಜೇನಿನ ಹೊಳೆಯೋ ಹಾಲಿನ ಮಳೆಯೋ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಮುಂತಾದ ಕನ್ನಡ ನಾಡು ನುಡಿ ಕುರಿತ ಹಾಡುಗಳನ್ನು ಹಲವಾರು ದೇವಾದಿ ದೇವತೆಗಳ ಭಕ್ತಿಗೀತೆಗಳನ್ನು ಹಾಡುವುದರ ಮೂಲಕ ಕನ್ನಡಿಗರ ಮನ ಗೆದ್ದ ಹಾಗೂ  ಅಚ್ಚಳಿಯದೆ ಉಳಿದಿರುವ ಭಾಗ್ಯವಂತ. ಗೋಕಾಕ ಚಳುವಳಿಯಲ್ಲಿ ಹಿರಿಯ ಸಾಹಿತಿ ಡಾ ಪಾಟೀಲ್ ಪುಟ್ಟಪ್ಪ ನವರೊಂದಿಗೆ ನಾಡಿನಾದ್ಯಂತ ಸಂಚರಿಸಿ ಕನ್ನಡ ಜಾಗೃತಿ ಮೂಡಿಸಿದ ಕನ್ನಡದ ಕುವರ ಡಾ. ರಾಜಕುಮಾರ್ ರವರು ರವಿ ಆಕಾಶಕ್ಕೆ ಭೂಷಣ. ಕವಿ ಸಾಹಿತ್ಯಕ್ಕೆ ಭೂಷಣ. ಕನ್ನಡ ಚಿತ್ರರಂಗಕ್ಕೆ ಡಾ ರಾಜಕುಮಾರ ರವರೇ ಭೂಷಣ.ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿ ಕನ್ನಡದ ತಾಯಿ ಭುವನೇಶ್ವರಿಯ ಪ್ರೀತಿಗೆ ಪಾತ್ರರಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ ರಾಜಕುಮಾರ ರವರು ಕನ್ನಡ ಚಿತ್ರರಂಗದ ಧ್ರುವತಾರೆ ಯಾಗಿದ್ದಾರೆ ಎಂದರು.


  ಪ್ರಗತಿಪರ ರೈತರಾದ ವಿವೇಕರಾವ ಎಸ್ ವಂಟಗೂಡಿ ಹಾಲಸಿದ್ಧ ವಂಟಗೂಡಿ ಕರಿಸಿದ್ದ ವಂಟಗೂಡಿ ಉಪಸ್ಥಿತರಿದ್ದರು. ಅಮಿತ ಪೂಜಾರಿ ಸ್ವಾಗತಿಸಿದರು.ಮೀನಾಕ್ಷಿ ವಂಟಗೂಡಿ ನಿರೂಪಿಸಿದರು.   ಭಾಗ್ಯಶ್ರೀ ಪೂಜಾರಿ ವಂದಿಸಿದರು.


 ವರದಿ ಡಾ ಜಯವೀರ ಎ. ಕೆ.

          ಖೇಮಲಾಪುರ

Image Description

Post a Comment

0 Comments