*ಬೇಸಿಗೆಯಂಥ ಚೆಲುವೆ*

 *ಬೇಸಿಗೆಯಂಥ ಚೆಲುವೆ*



 ಬೇಸಿಗೆಯಂಥ ಗೆಳತಿ


ಬೇಸಿಗೆಲಿ ಮಾತ್ರ ಸೂರ್ಯ ಭೂಮಿಯ ಸುಡುತ್ತಾನೆ

ಗೆಳತಿ ಪ್ರತಿದಿನ ನನ್ನನ್ನು ಕಾಡುತ್ತಾಳೆ |

ಬಿಸಿಲಲಿರುವರಿಗೆ ಭೂತಾಯಿ ಮರದ ನೆರಳು ಕೊಡುತ್ತಾಳೆ

ಭಗ್ನಪ್ರೇಮಿಯ ಗಳೆತಿ

ಎದೆಯೊಳಗಿಂದಳು ಸುಡುತ್ತಾಳೆ II


ಗೆಳತಿ ಎಂಬ ಪದಕ್ಕೆ ಎಂತ ಶಕ್ತಿ

ಗೆಳತಿಯ ಪಳಗಿಸಲು ಗೆಳೆಯನಲ್ಲಿಲ್ಲ ಯುಕ್ತಿ I

ಗೆಳತಿಯೆಂಬ ಹೆಸರೆ ಪರಾಶಕ್ತಿ

ಗೆಳತಿಯನ್ನ ಪಡೆಯಲು ಇರುವುದು ಯಾವ ಭಕ್ತಿII 


ಅವಳು ಬೆಂಕಿಯಲ್ಲ ಆದರೂ ನನ್ನ ಹೃದಯ ದಗದಗ

ಅವಳ ಹೃದಯಕ್ಕೆ ಬಾಗಿಲಿಲ್ಲ ಹಾಕಿದ್ದಾರೆ ಬೀಗ I

ಅವಳಿಂದ ಹಗಲು ರಾತ್ರಿ ಮುಗಿಯುತ್ತಿದೆ ಬೇಗ ಬೇಗ

ಅವಳ ಮಾತೆಲ್ಲ ನನ್ನದೆಯೊಳಗೆ ಮೀಟಿದ ರಾಗ II


ಅವಳ ತನುವಿದೆ ನಾ ಮುಟ್ಟಲಾರದಷ್ಟು ದೂರ

ಅವಳ ಮನವಿದೆ ಅಗಲಿಕೆಯಾಗದಷ್ಟು ಹತ್ತಿರ 1

ಅವಳಿಗೆ ಹಾಕಲಾಗಲಿಲ್ಲ ನಾ ಪೋಣಿಸಿದ ಮುತ್ತಿನ ಹಾರ 

ನಮ್ಮಿಬ್ಬರನ್ನು ಬೆಸೆದಿರುವುದು ಯಾವ ದಾರ II


✍️ಜೆ ಕೆ ಬಸವರಾಜು ಜಯಪುರ🌱

Image Description

Post a Comment

0 Comments