*ರಾಘವೇಂದ್ರಸ್ವಾಮಿ ಸ್ತುತಿ*

 ( ಭಕ್ತಿಗೀತೆ )


*ರಾಘವೇಂದ್ರಸ್ವಾಮಿ ಸ್ತುತಿ*



ರಾಘವೇಂದ್ರರ ನಾಮನೆನೆದರೆ

ಬದುಕು ಪಾವನಗೊಳುವುದು|

ನೀಗುವುದು ಭವ ನಿಮಿಷಮಾತ್ರದಿ

ದುಗುಡವಾಕ್ಷಣ ತೊರೆವುದು||೧||


ಎಲ್ಲ ಗುರುವಾರದಲಿ ಸ್ವಾಮಿಯ

ಪೂಜೆಗೆಳಸುವೆ ಸ್ಮರಿಸುತ|

ಬಲ್ಲಿದರು ನೀವೆಂಬ ನಂಬಿಕೆ

ನನ್ನ ಮನದಲಿ ಇರಿಸುತ||೨||


ಕರುಣೆಕಡಲಿನ ಅಲೆಗಳಲಿ ನಾ

ತೇಲಲೆಣಿಸುವೆ ನಿತ್ಯವೂ

ಹರಿಸು ನೀನಮಗೆಂದು ಬೇಡುವೆ

ನಿನ್ನ ಸನ್ನಿಧಿ ನಿತ್ಯವೂ||೩||


ಜಗದ ತಲ್ಲಣವಳಿಸುವಂತಹ

ಶಕ್ತಿ ನಿನ್ನೊಳು ಕಾಣುವೆ|

ಮುಗಿದು ಕರವನು ಬೇಡಿಕೊಳ್ಳುವೆ

ನಿನಗೆ ಶಿರವನು ಬಾಗುವೆ||೪||


*ಕಿಗ್ಗಾಲು ಎಸ್ ಗಿರೀಶ್*

೩೦-೦೪-೨೦೨೬

Image Description

Post a Comment

0 Comments