ಡಾ. ಶಶಿಕುಮಾರ್ ರವರಿಗೆ ಮಧುರ ಆದರ್ಶ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ
ಬೆಂಗಳೂರು:ಏ.18: ವಿಜಯನಗರದ ಚಂದ್ರ ಲೇಔಟ್ ನ ಅಪ್ಪು ಮ್ಯೂಸಿಕ್ ಅಕಾಡೆಮಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಮಧುರ ಗೆಳೆಯರ ಬಳಗದಿಂದ ಕಿತ್ತೂರಿ ರಾಣಿ ಚೆನ್ನಮ್ಮ ಅವರ ನೆನಪಿನ ಅಂಗವಾಗಿ ಕೊಡಮಾಡುವ ಮಧುರ ಆದರ್ಶ ಶಿಕ್ಷಕ ರತ್ನ ಪ್ರಶಸ್ತಿಯನ್ನು ಡಾ. ಶಶಿಕುಮಾರ್ ವಿ. ಅವರಿಗೆ ರಾಮನಗರದ ಭೂಗೋಳಶಾಸ್ತ್ರ ಉಪನ್ಯಾಸಕ ಪೂರ್ಣಚಂದ್ರ ಎಂ.ಎ. ಸೇರಿದಂತೆ ಮತ್ತಿತರು ಗಣ್ಯರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ರಾಜ್ಯದ ಪ್ರತಿಷ್ಠಿತ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ ಮಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಿಂದ ಡಾಕ್ಟರೇಟ್ ಪದವಿಯನ್ನು (ಪಿಎಚ್.ಡಿ) ಪಡೆದ ಪ್ರಸ್ತುತ ಬೆಂಗಳೂರು ವಿವಿಯ ಬಿ.ಎ ಸ್ನಾತಕ ವಿಭಾಗದ ಇತಿಹಾಸ ವಿಭಾಗದಲ್ಲಿ ಅತಿಥಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಿಂಗರಹಳ್ಳಿ ಗ್ರಾಮದ ಗುರಪ್ಪನವರ ಲೇಟ್ ವೆಂಕಟಸ್ವಾಮಪ್ಪ ಮತ್ತು ರತ್ನಮ್ಮ ದಂಪತಿಯ ಪುತ್ರನಾಗಿದ್ದಾರೆ.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಯೋಗ ಶಿಕ್ಷಕ ಡಾ.ಜಯರಾಮ್ ಗೌಡ, ಮೂಡಬಿದರಿ ಗಾಯಕ ಅಶೋಕ ಪೋತಿ, ಲೇಖಕ ಡಾ.ನಾಗೇಂದ್ರ ಆರ್.ಗುಂಬಳ್ಳಿ, ಗಿರೀಶ ಪಿ.ಎಚ್, ಶಿಕ್ಷಣ ತಜ್ಞ ಡಾ.ಸುಶೀಲಂಬಾಳ ಎಂ. ಎನ್., ಪ್ರಾಂಶುಪಾಲ ಪ್ರೊ.ಪುಷ್ಪ ಎಂ, ಸಹ ಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಎಸ್, ಡಾ.ಪಲ್ಲವಿ ಬಿ.ಕೆ, ಶಿಕ್ಷಕಿ ಶೈಲಾ ಕಮತಗಿ ಹಾಗೂ ಮಧುರ ಗೆಳೆಯರ ಬಳಗದ ಅಧ್ಯಕ್ಷ ಡಾ.ಎಂ.ಪುಟ್ಟರಾಜು, ಮತ್ತು ಸಂಸ್ಥಾಪಕಿ ಮಧುಮಾಲತಿ ಮತ್ತಿತರರು ಉಪಸ್ಥಿತರಿದ್ದರು.
ಪೋಟೋ ಕ್ಯಾಪ್ಷನ್:
ಮಧುರ ಗೆಳೆಯರ ಬಳಗದಿಂದ ಕಿತ್ತೂರಿ ರಾಣಿ ಚೆನ್ನಮ್ಮ ಅವರ ನೆನಪಿನ ಅಂಗವಾಗಿ ಕೊಡಮಾಡುವ ಮಧುರ ಆದರ್ಶ ಶಿಕ್ಷಕ ರತ್ನ ಪ್ರಶಸ್ತಿಯನ್ನು ಡಾ. ಶಶಿಕುಮಾರ್ ವಿ. ಅವರಿಗೆ ರಾಮನಗರದ ಭೂಗೋಳಶಾಸ್ತ್ರ ಉಪನ್ಯಾಸಕ ಪೂರ್ಣಚಂದ್ರ ಎಂ.ಎ. ಸೇರಿದಂತೆ ಮತ್ತಿತರು ಗಣ್ಯರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

.gif)

.gif)


0 Comments