ಸರ್ಕಾರಿ ಶಾಲೆಯ ಮಕ್ಕಳು ಧೈರ್ಯವಂತರು : ಉಪನಿರ್ದೇಶಕ ಸೀತಾರಾಮು
ಚಿಕ್ಕೋಡಿ: ಪ್ರತಿಯೊಂದು ಊರಿನಲ್ಲಿ ಸರ್ಕಾರಿ ಶಾಲೆಗಳು ಇವೆ. ಸರ್ಕಾರಿ ಶಾಲೆಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಸರ್ಕಾರವು ಒದಗಿಸುತ್ತಿದೆ. ಆ ಸೌಲಭ್ಯಗಳು ಪಡೆದುಕೊಂಡು ಉತ್ತಮವಾದ ಶಿಕ್ಷಣವನ್ನು ಪಡೆದ ಗ್ರಾಮೀಣ ಪ್ರತಿಭೆಯ ವಿದ್ಯಾರ್ಥಿಯು ಧೈರ್ಯಶಾಲಿ ಆಗಿರುತ್ತಾನೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಆರ್ ಸೀತಾರಾಮ ಅವರು ಅಭಿಪ್ರಾಯಪಟ್ಟರು.
ಇತ್ತೀಚಿಗೆ ನಡೆದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೋಥಳಿವಾಡಿಯ ಚಿಣ್ಣರ ನೀನಾದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
25 ವರ್ಷಗಳಿಂದ ಪ್ರಾರಂಭಗೊಂಡ ಕೋಥಳಿವಾಡಿಯ ಸರ್ಕಾರಿ ಶಾಲೆಯ ಶೈಕ್ಷಣಿಕವಾಗಿ ಇಂದು ಅಭಿವೃದ್ಧಿಗೊಳ್ಳುತ್ತಿದೆ. ಈ ಶಾಲೆ ಪ್ರಾರಂಭವಾದ ಅಂದಿನಿಂದ ಇಂದಿನವರೆಗೂ ಕಲಾವತಿ ಎಂಬ ಶಿಕ್ಷಕಿಯು ಉತ್ತಮವಾದ ಬೋಧನೆ ಮತ್ತು ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ವಿದ್ಯಾತೇವೆ ನೀಡಿ ವಿದ್ಯಾರ್ಥಿಗಳನ್ನು ಉತ್ತಮ ಸತ್ಪ್ರಜೆಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಶಿಕ್ಷಕರ ಮಹತ್ವವನ್ನು ಹಳ್ಳಿಯ ಗ್ರಾಮಸ್ಥರಿಗೆ ತಿಳಿಸಿದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಬಹಳ ಧೈರ್ಯ ಸಾರಿಗಳಾಗಿರುತ್ತಾರೆ. ರಸ್ತೆಯಲ್ಲಿ ಹೋಗುವಾಗ ಹಳ್ಳಿಯ ನಾಯಿ ಹೆದರಿಕೊಂಡು ಹೋಗುತ್ತಿದೆ ಎಂದರೆ ಆತ ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿರುತ್ತಾನೆ. ಅದೇ ರೀತಿ ನಾಯಿ ಒಬ್ಬ ವಿದ್ಯಾರ್ಥಿಯನ್ನು ಅಟ್ಟಿಸಿಕೊಂಡು ಹೋಗುತ್ತಿದೆ ಎಂದರೆ ಆತ ಕಾನ್ವೆಂಟ್ ವಿದ್ಯಾರ್ಥಿಯಾಗಿದ್ದಾನೆ ಎಂದು ಅರ್ಥ ಮಾಡಿಕೊಳ್ಳಬಹುದು.. ಏಕೆಂದರೆ ಸರ್ಕಾರ ಶಾಲೆಯ ವಿದ್ಯಾರ್ಥಿ ಎಲ್ಲಾ ಬಗೆಯ ಜೀವನದ ಅನುಭವಗಳನ್ನು ಪಡೆದುಕೊಂಡು ಗ್ರಾಮೀಣ ಪ್ರದೇಶದ ಆಟೋಪಗಳಲ್ಲಿ ಮುಂದೆ ಇರುತ್ತಾನೆ ಎಂದು ಸೂಕ್ಷ್ಮವಾಗಿ ವಿವರಿಸಿದರು.
ಶಾಲೆಯ ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ ಶಿಕ್ಷಣದಿಂದ ವಂಚಿತರಾಗಿದ್ದ ಹಾಗೂ ಸಮಾಜದಿಂದ ಅವಮಾನಗಳನ್ನು ಅನುಭವಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಶಿಕ್ಷಣ ಸಾಧನೆಗಳನ್ನು ಹಾಗೂ ಸಂವಿಧಾನದ ಕೊಡುಗೆಗಳನ್ನು ತಿಳಿಸುತ್ತಾ ವಿದ್ಯಾರ್ಥಿಗಳು ಸಂವಿಧಾನದ ಆಶಯದಂತೆ ಉತ್ತಮ ಸತ್ಪ್ರಜೆಗಳಾಗಿ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವೇದಿಕೆಯಲ್ಲಿ ಚಿಕ್ಕೋಡಿಯ ವಿಷಯ ಪರಿವೀಕ್ಷಕರು ಆದ ಹೆಚ್ಎಸ್ ಖಾಡೆ, ಚಿಕ್ಕೋಡಿ ಉಪ ತಹಸೀಲ್ದಾರ್ ಖಾಂಡೇಕರ, ಕೋಥಳಿಮ ಪಿಡಿಒ ಗಾಯಿತ್ರಿ ಟೋಣ್ಣೆ, ಬೇಡಕಿಹಾಳದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಹೊಂಬಯ್ಯ, ಬಿ ಆರ್ ಪಿ ಆನಂದ ಕಬಾಡಿಗೆ, ಸಿಆರ್ ಪಿ ಹಿಪ್ಪರಿಗಿ, ಕೋಥಳಿಯ ತಾತಾಸಾಬ ಬಾಬಾಗೌಡ, ಶಾಲೆಯ ಭೂದಾನಿಗಳಾದ ಖೋತ ಸಹೋದರರು, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಹಾಂತೇಶ್ ಖೋತ ಮತ್ತಿತರ ರೂಪಸಿತರಿದ್ದರು.
ನಾಡಗೀತೆ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿಯಾದ ಬಿ ಕಲಾವತಿ ಪ್ರಾಸ್ತಾವಿಕ ಮಾತುಗಳು ಮತ್ತು ವಾರ್ಷಿಕ ವರದಿ ಹಾಗೂ ಸ್ವಾಗತ ಮಾಡಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವರದಿ : ಡಾ. ವಿಲಾಸ ಕಾಂಬಳೆ
ದೇಹ ದಾನಿಗಳ ಗ್ರಾಮ
ಶೇಗುಣಶಿ
ಮೋ: 9591782353

.gif)

.gif)


0 Comments