*ಗುಟ್ಟೊಂದು ಹೇಳಲೇ!*
ಗುಟ್ಟು ಹೇಳಲೆ ನಾನು ನೀವ್ ಕಿವಿ-
ಗೊಟ್ಟು ಕೇಳಿರಿ ಜನರ ಕಾಳಜಿ-
ಗಿಟ್ಟ ಹಣವನು ಹೇಗೆ ಮುಗಿಸಿದಿರೆಂದು ಹೇಳುವಿರಾ|
ಒಟ್ಟು ವ್ಯಯಿಸಿದ ಹಣದ ಲೆಕ್ಕಗ-
ಳಿಟ್ಟ ದಾಖಲೆಯನ್ನು ತೋರಿಸಿ
ಬಿಟ್ಟಿಭಾಗ್ಯಗಳಿಂದ ಬದುಕನು ತುಟ್ಟಿ ಮಾಡಿದಿರಾ||೧೯೪||
*ಕಿಗ್ಗಾಲು ಎಸ್ ಗಿರೀಶ್*
೨೧-೦೪-೨೦೨೬
0 Comments