*ಸಾಹಿತಿ ಕನ್ನಡ ಪ್ರಾಧ್ಯಾಪಕ ಡಾ. ಜಯವೀರ ಎ. ಕೆ. ಅವರಿಗೆ ರಾಷ್ಟ್ರೀಯ ಅಂಬೇಡ್ಕರ್ ಸದ್ಭಾವನ ಪ್ರಶಸ್ತಿ*

 *ಸಾಹಿತಿ ಕನ್ನಡ ಪ್ರಾಧ್ಯಾಪಕ         ಡಾ. ಜಯವೀರ ಎ. ಕೆ. ಅವರಿಗೆ ರಾಷ್ಟ್ರೀಯ ಅಂಬೇಡ್ಕರ್ ಸದ್ಭಾವನ ಪ್ರಶಸ್ತಿ*




ರಾಯಬಾಗ:ತಾಲೂಕಿನ ಖೇಮಲಾಪುರ ಗ್ರಾಮದ ಕನ್ನಡ ಪ್ರಾಧ್ಯಾಪಕರು, ಪತ್ರಕರ್ತರು, ಸಾಹಿತಿ ಡಾ. ಜಯವೀರ ಎ.ಕೆ ಅವರು ಕಲಬುರ್ಗಿಯ ಕನ್ನಡ ನುಡಿಮುತ್ತು ವೇದಿಕೆ ಕೊಡ ಮಾಡುವ ಪ್ರಸಕ್ತ ಸಾಲಿನ ರಾಷ್ಟ್ರೀಯ ಅಂಬೇಡ್ಕರ್ ಸದ್ಭಾವನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡ ಭಾಷೆ ಸಾಹಿತ್ಯ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಮನ್ನಿಸಿ ಈ ವಿಶಿಷ್ಟ ಪ್ರಶಸ್ತಿ ಲಭಿಸಿರುವುದು ಗಮನಾರ್ಹ. ಶೈಕ್ಷಣಿಕ ಕ್ಷೇತ್ರ, ಸಾಹಿತ್ಯ ಸೃಜನಶೀಲತೆ ಹಾಗೂ ಸಮಾಜಮುಖಿ ಪತ್ರಿಕೋದ್ಯಮವನ್ನು ಸಮನ್ವಯಗೊಳಿಸಿದ ಇವರ ವಿಶಿಷ್ಟ ಸಾಧನೆಗೆ ಈ ಪ್ರಶಸ್ತಿ ದೊರೆತಿರುವುದು ಸಮಂಜಸ ಗೌರವವಾಗಿದೆ. ಮಾತ್ರವಲ್ಲದೆ ಇತರರಿಗೂ ಪ್ರೇರಣೆಯಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಈಗಾಗಲೇ "ಭೂಮಿ ತೂಕದ ಹೆಣ್ಣು" ಸಂಪಾದಿತ ಕವನ ಸಂಕಲನವನ್ನು ಸಮರ್ಪಿಸಿದ ಇವರು  ನಿತ್ಯ ನಿರಂತರವಾಗಿ ಅಕ್ಷರ ಲೋಕವನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಮೇ ಮೊದಲ ವಾರದಲ್ಲಿ ನಡೆಯುವ ವಿಶೇಷ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  ಪ್ರಶಸ್ತಿ ಪುರಸ್ಕೃತ ಡಾ. ಜಯವೀರ ಎ ಕೆ ಅವರಿಗೆ ಪ್ರಸಕ್ತ ಸಾಲಿನ ರಾಷ್ಟ್ರಮಟ್ಟದ ಡಾ ಅಂಬೇಡ್ಕರ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕನ್ನಡ ನುಡಿಮುತ್ತು ವೇದಿಕೆಯ ಸಂಚಾಲಕರಾದ ಜಗದೀಶ್ ಶರಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಗೆ ಭಾಜಾನರಾದ ಡಾ. ಜಯವೀರ    ಎ. ಕೆ. ಅವರನ್ನು ತಾಲೂಕಿನ ಸಮಸ್ತ ಹಿರಿಯ ಸಾಹಿತಿಗಳು ಹಾಗೂ ಉದಯೋನ್ಮುಖ ಕವಿಗಳು  ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.


ವರದಿ:ಡಾ. ವಿಲಾಸ ಕಾಂಬಳೆ

Image Description

Post a Comment

0 Comments