ಡಾ. ಬಾಬಾ ಸಾಹೇಬ ಅಂಬೇಡ್ಕರ್ ವಿಶ್ವ ಮಹಾಮಾನವತಾವಾದಿ. ಡಾ. ಎಸ್ ಎಮ್ ಹೆಳವರ

 ಡಾ. ಬಾಬಾ ಸಾಹೇಬ ಅಂಬೇಡ್ಕರ್ ವಿಶ್ವ ಮಹಾಮಾನವತಾವಾದಿ. ಡಾ. ಎಸ್ ಎಮ್ ಹೆಳವರ 



ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ ಕಲಾ,ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ.   ಹಾಗೂ ಸ್ನಾತಕೋತ್ತರ    ಅಧ್ಯಯನ ಕೇಂದ್ರ ಹಾರೂಗೇರಿ ಇವುಗಳ ಸಹಯೋಗದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ಅವರ 135 ನೇ ಜಯಂತಿ ಮನೆ ಮನೆಗೆ ಮನ ಮನಕ್ಕೆ ಅಂಬೇಡ್ಕರರ ಅಭಿಯಾನ ಎಂಬ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ  ಸಮಾಜ ಸುಧಾರಕ,  ರಾಜಕೀಯ ಚಿಂತಕ,ಸಮಾನತೆಯ ಹರಿಕಾರ,ಮಾನವತಾವಾದಿ, ವಿಚಾರವಾದಿ, ಕಾರ್ಮಿಕರ ಮಹಿಳೆಯರ ಸಮಾನತೆಯ ಪ್ರತಿಪಾದಕ ,ಚರಿತ್ರೆಕಾರ ಕೂಡ ಆಗಿದ್ದರು . ಅಸ್ಪೃಶ್ಯರು ಸೇರಿದಂತೆ ಎಲ್ಲಾ ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ತಮ್ಮ ಜೀವನದ ಉದ್ದಕ್ಕೂ ಹೋರಾಟ ಮಾಡಿದರು ಅಂತಹ ಮಹಾನ್ ಚೇತನ ಅಂಬೇಡ್ಕರರ ಆದರ್ಶಗಳು ವಿಚಾರಗಳು ವೈಚಾರಿಕ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವೆಲ್ಲರೂ ಅಂಬೇಡ್ಕರರ ಸಾಗಿದ ಮಾರ್ಗದಲ್ಲಿ ನಡೆಯಬೇಕೆಂದು ಡಾ. ಎಸ್ ಎಮ್ ಹೆಳವರ ಕರೆ ನೀಡಿದರು. 

ವೇದಿಕೆ ಮೇಲೆ ಉಪಸ್ಥಿತರಿದ್ದ ಶ್ರೀ  ಎಸ್ ಸಿ ಕಲಚೀಮ್ಮಡ್ ಮಾತನಾಡಿ ಅಂಬೇಡ್ಕರ್ ರವರು ಸಂವಿಧಾನದ ರಚನೆ ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದರು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶ್ರೀ ಎಸ್ ಎಸ್ ಉಮರಾಣಿ ಮಾತನಾಡಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆಶಯದಂತೆ ಮನೆ ಮನೆಗೂ ಮನ ಮನ ಕೂ ಅಭಿಯಾನ ಅಂಬೇಡ್ಕರ ರ ಅಭಿಯಾನ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲ ವಿದ್ಯಾರ್ಥಿಗಳು ಶ್ರಮಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ವೇದಿಕೆಯ ಮೇಲೆ ಎನ್ ಎಸ್ ಎಸ್ ಅಧಿಕಾರಿಗಳಾದ ಶ್ರೀ ಆರ್ ಎಂ ಮಾಲಗಾರ, 

ಶ್ರೀಮತಿ ಪಿ ಕೆ ಪಾಟೀಲ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಮತ್ತು ಎಲ್ಲಾ ಎನ್ ಎಸ್ ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಾಂಸ್ಕೃತಿಕ ಕಾರ್ಯದರ್ಶಿಯಾದ ಕೆ ಎಸ್ ಹಾರೂಗೇರಿ ಸ್ವಾಗತಿಸಿದರು. ವಿದ್ಯಾರ್ಥಿ ಸಂತ್ರಾಮ ಹಾಲಗೊಂಡ ನಿರೂಪಿಸಿದರು. ಶ್ರೀ ಬಿ ಎ ಕಾಂಬಳೆ ವಂದಿಸಿದರು.


ವರದಿ : ಡಾ. ವಿಲಾಸ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಶೇಗುಣಶಿ 

ಮೋ: 9591782353

Image Description

Post a Comment

0 Comments