ಹೆಬ್ಬಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ. 100 ರಷ್ಟು ಫಲಿತಾಂಶ




 ಹೆಬ್ಬಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ. 100 ರಷ್ಟು ಫಲಿತಾಂಶ


ಧಾರವಾಡ: ಏ. 25: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಕಟಿಸಿದ 2025-26 ನೇ ಸಾಲಿನ ಎಸ್ಎಸ್ಎಲ್ ಸಿಯ ಫಲಿತಾಂಶದಲ್ಲಿ ಧಾರವಾಡ ತಾಲೂಕಿನ ಹೆಬ್ಬಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಶೇ.100 ರಷ್ಟು ಉತ್ತಮ ಸಾಧನೆ ಮಾಡಿರುತ್ತಾರೆ.


ಎಸ್ಎಸ್ಎಲ್ ಸಿಯ ಪರೀಕ್ಷೆಯಲ್ಲಿ ಒಟ್ಟು 39 ವಿದ್ಯಾರ್ಥಿಗಳು ಹಾಜರಾಗಿದ್ದು, 24 ವಿದ್ಯಾರ್ಥಿಗಳು ಪ್ರಶಸ್ತಿ ಸಹಿತ ಪ್ರಥಮ ವರ್ಗ,14 ವಿದ್ಯಾರ್ಥಿಗಳು ಪ್ರಥಮ ವರ್ಗ, ಒಬ್ಬ ವಿದ್ಯಾರ್ಥಿ ದ್ವಿತೀಯ ವರ್ಗದಲ್ಲಿ ಪಾಸಾಗಿರುತ್ತಾರೆ. ಅದರಲ್ಲಿ ಶಂಕರ ಕೆರಿಯವರ ಅವರು 625ಕ್ಕೆ 615 ಅಂಕ ಪಡೆಯುವುದರ ಮೂಲಕ ಧಾರವಾಡ ಗ್ರಾಮೀಣ ವಿಭಾಗದಲ್ಲಿ 09ನೇ ರ್ಯಾಂಕ್ ಮತ್ತು ಹೆಬ್ಬಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 1ನೇ ರ್ಯಾಂಕ್, ಅಭೀಷೆಕ ಕಿರೆಸೂರ ಅವರು 625ಕ್ಕೆ 607 ಅಂಕ ಪಡೆಯುವುದರ ಮೂಲಕ ಹೆಬ್ಬಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 2ನೇ ರ್ಯಾಂಕ್ ಹಾಗೂ ಶ್ರೆಯಾಂಕ ಕುರ್ತಕೊಟಿ ಅವರು 625ಕ್ಕೆ 595 ಅಂಕ ಪಡೆಯುವುದರ ಮೂಲಕ ಹೆಬ್ಬಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 3ನೇ ರ್ಯಾಂಕ್ ಪಡೆದಿರುತ್ತಾರೆ.


ಒಟ್ಟಾರೆಯಾಗಿ ಹೆಬ್ಬಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಶೇ.100 ರಷ್ಟು ಫಲಿತಾಂಶ ಪಡೆದಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರಾದ ಬಸಪ್ಪ ಮಂಕಣಿ, ಸಹ ಶಿಕ್ಷಕ ರಾಜಪ್ಪ ಹಾಗೂ ಎಲ್ಲ ಶಿಕ್ಷಕರು, ಗ್ರಾಮದ ಹಿರಿಯರು ಶುಭ ಹಾರೈಸಿರುತ್ತಾರೆ.


ವಿದ್ಯಾರ್ಥಿಗಳ ರ್ಯಾಂಕ್ ಪಟ್ಟಿ:

1. ಶಂಕರ ಕೆರಿಯವರ (1ನೇ ರ್ಯಾಂಕ್)

2. ಅಭೀಷೆಕ ಕಿರೆಸೂರ (2ನೇ ರ್ಯಾಂಕ್)

3. ಶ್ರೆಯಾಂಕ ಕುರ್ತಕೊಟಿ (3ನೇ ರ್ಯಾಂಕ್)


ವರದಿ : ಡಾ. ವಿಲಾಸ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಶೇಗುಣಶಿ 

ಮೋ: 9591782353

Image Description

Post a Comment

0 Comments