🌹*ಗಜ಼ಲ್*🌹

 🌹*ಗಜ಼ಲ್*🌹



ಮಧು ಮಾಸದ ಹೊಸ್ತಿಲಲಿ ಇನಯ ಹೊಳಪಲಿ ಮಿಂದ ಗಿರಿಕನ್ಯೆಯು ನೀನು

ವಧು ವಸ್ತ್ರದಲಿ ಶೋಭಿಸಿ ವಿನಯ ಸ್ವರೂಪವ ತಾಳಿದ ಸಿರಿವಂತೆಯು ನೀನು


ರೂಪ ಗುಣಗಳ ಸಮ್ಮಿಲನದ ಆಗರವೇ ನೀ ಕೊರತೆಯ ಕುರುಹು ಕಾಣದು

ಭೂಪ ಗಮನವ ಸೆಳೆದ ಸುಕೋಮಲ ಸೌಮ್ಯ ಸೌಧಾಮಿನಿಯು ನೀನು


ಯಾವ ಪದವ ಬಳಸಲಿ ನಿನ ಬಣ್ಣಿಸಲು ಹಂಸ ಗೀತೆಯ ಗುಣಗಾನ ಸಾಕಲ್ಲವೇ

ನೋವ ಮರೆಸಿ ಚಕ್ಯತೆ ತೋರಿದ ಚತುರ ಚಾರುಲತೆಯು ನೀನು


ದೇವಾನು ದೇವತೆಗಳು ಹರಸಿ ಕಳುಹಿಸಿದರೆ ಧರೆಯ ಮೊರೆಯನು ಆಲಿಸಲು

ಫರ್ಮಾನು ಹೊತ್ತು ತಂದಿರುವ ಅನುಗ್ರಹಿತ ಮನೋರಮೆಯು ನೀನು


ಯುಗದ ಆದಿಗೆ ನವ ಮನ್ವಂತರ ತದಿಗೆಗೆ ಉಲ್ಲಾಸದ ಕಾರಂಜಿಯನು ನಿರ್ಮಿಸು

ಜಗದ ನೇಮವ ಆಧರಿಸಿ ಸುಪ್ತ ಗೌಪ್ಯವ ಕಾಪಿದ ಕುಮಾರನ ಅಪರಂಜಿಯು ನೀನು


🎸ಸುಕುಮಾರ

Image Description

Post a Comment

0 Comments