*ಜುಲ್ ಕಾಫಿಯಾ ಗಝಲ್*

 *ಜುಲ್ ಕಾಫಿಯಾ ಗಝಲ್*



ನನ್ನ ಬಣ್ಣ ಬಣ್ಣದ ಕನಸಿಗೆ  ಸ್ಪೂರ್ತಿಯಾದೆ ಗೆಳತಿ

ಎದೆಯೊಳಗೆ ಚಿಗುರೊಡೆವ ಬಯಕೆಗೆ ಸಾಕ್ಷಿಯಾದೆ ಗೆಳತಿ


ಮಗುಳ್ನಗೆಯೇ ಹಸಿರು ಮಂಟಪವು ಹೃದಯದಂಗಳದಿ

ನಸುನಗುವ ಸುಂದರ  ಹೂವಿಗೆ ದುಂಬಿಯಾದೆ ಗೆಳತಿ


ಯುಗಗಳೇ ನಿಮಿಷದಂತೆ ನಿನ್ನೊಡನೆ ನಡೆಯುವಾಗ

ಅರಳಿದ ಪ್ರೇಮದ ಹೊನಲಿಗೆ  ಒಡತಿಯಾದೆ ಗೆಳತಿ


ಗಗನವೆ ನಾಚಿತು ನಮ್ಮಿಬ್ಬರ ಅನುರಾಗವು ಬೆರೆತಿರಲು

ಹರುಷದ ಮನಸು‌ ಹೊಸ ಹಾಡಿಗೆ ಧ್ವನಿಯಾದೆ ಗೆಳತಿ


ಬಣ್ಣಿಸಲು ಪದವಿಲ್ಲ ನಿನ್ನಾ ಚಲುವಿಗೆ ಸಮಾನರಾರಿಲ್ಲ 

ಭಾವನೆಗಳೆಂಬ ಒಲವ ತೇರಿಗೆ ಗಾಲಿಯಾದೆ ಗೆಳತಿ


ನಂದಾದೀಪ ಹಚ್ಚಿದೆ ಕನಸು ನನಸಾಗುವ ಭರವಸೆಗೆ

ಅಕ್ಕರೆಯ ಮಾತಾಡಿ ನಂಬಿಕೆಗೆ ಬುನಾದಿಯಾದೆ ಗೆಳತಿ


ಇರಲಾರೆನು ಈ ಲೋಕದಲ್ಲಿ ಸಂಗಾತಿಯ ಮರೆತು

ಚೇತನವಾಗಿ ಅಶೋಕನ ಬಾಳಿಗೆ ಜೊತೆಯಾದೆ ಗೆಳತಿ


*ಅಶೋಕ ಬೇಳಂಜೆ*

Image Description

Post a Comment

0 Comments