ಯುಗಯುಗ ಕಳೆದರು ಯುಗಾದಿ ಬರಲೇನು ಕಾರಣ

 ಯುಗಯುಗ ಕಳೆದರು ಯುಗಾದಿ ಬರಲೇನು ಕಾರಣ


ಬರುವಾಗ ಮರಗಳಲ್ಲೂ ಹಸಿರ ತೋರಣ

ಯುಗಾದಿ ಹಬ್ಬದಿ ಮನೆಮನೆಗಳಲ್ಲಿ ಮಾವಿನ ತೋರಣ

ಬಾಳೆಎಲೆ ಊಟದಿ ಹೋಳಿಗೆ ಹೂರಣ II


ಚಿಗುರೊಡೆದಿವೆ ಮಾವು ಬೇವು ಹೊಂಗೆ ಮರ 

ಭಾರತೀಯ ಹಬ್ಬ ಪ್ರಕೃತಿ ಜೊತೆ ಬಂದಂತ ವರ 1

ಮನೆ ಮಕ್ಕಳೆಲ್ಲ ಸಂಭ್ರಮಿಸುವ ಯುಗಾದಿ

ಮಾನವ ಸಂಬಂಧ ಬೆಸೆಯಲಾಗಲಿ ಬುನಾದಿ II


ಮನೆ ಮನೆಯಲ್ಲಿ ಊರ ಬೀದಿಯಲ್ಲಿ ಹಸಿರ ಸಿಂಗಾರ

ಹಸಿರೇ ಮಾನವ ಬದುಕಿನ ಬಂಗಾರ |

ಊರ ಗುಡಿಗೋಪುರಗಳಲ್ಲಿ ಪೂಜೆ ಪಂಚಾಂಗ ಪಾರಾಯಣ

ವಸಂತ ಮಾಸಕೆ ಮಾವು ಬೇವಿನ ಚಿಗುರೆಲೆ ಭೂಷಣ II


ಹೊಸ ಚಿಗುರಿನ ಹಬ್ಬದಿ ಹಂಚುವ ಬೇವುಬೆಲ್ಲ

ತಿಂದವರು ಆರೋಗ್ಯದ ಜೊತೆಗೆ ಗೆಲ್ಲವರು ಜಗವೆಲ್ಲ 1

ಮಾವಿನ ಮರದಿ ಕೋಗಿಲೆ ಕೂಗುತಿರಲು

ಕೃಷಿಕರು ಊರಸುತ್ತ ಹೊನ್ನೇರು ಹೂಡುತಿರಲು II


✍️ಜೆಕೆ ಬಸವರಾಜು ಜಯಪುರ🌱

Image Description

Post a Comment

0 Comments